2012ರಲ್ಲಿಯೂ ಗುಟ್ಕಾ ಪಾಕೀಟು ಪತ್ತೆಯಾಗಿತ್ತು
ತಿರುಪತಿ (ಆಂಧ್ರಪ್ರದೇಶ) – ತಿರುಪತಿ ಬಾಲಾಜಿ ದೇವಸ್ಥಾನದ ಪ್ರಸಾದದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿದ ತುಪ್ಪವನ್ನು ಉಪಯೋಗಿಸಿರುವ ಘಟನೆ ಬಹಿರಂಗವಾದ ಬಳಿಕ ಈಗ ಲಡ್ಡುವಿನಲ್ಲಿ ತಂಬಾಕು ಇರುವ ಕಾಗದದ ಪುಡಿಕೆ ಸಿಕ್ಕಿದೆ. ಖಮ್ಮಮ್ ಜಿಲ್ಲೆಯ ಗ್ರಾಮ ಮಂಡಳ ಪ್ರದೇಶದ ಕಾರ್ತಿಕೇಯನಗರದಲ್ಲಿ ವಾಸಿಸುವ ದೊಂತು ಪದ್ಮಾವತಿಯವರು ಸಪ್ಟೆಂಬರ 19 ರಂದು ತಿರುಪತಿ ದೇವಸ್ಥಾನಕ್ಕೆ ಹೋಗಿ ದರ್ಶನವನ್ನು ಪಡೆದು ಪೂಜೆ ಸಲ್ಲಿಸಿ ಅಲ್ಲಿಂದ ಪ್ರಸಾದದ ಲಡ್ಡುವನ್ನು ತೆಗೆದುಕೊಂಡಿದ್ದರು. ಸಪ್ಟೆಂಬರ 22 ರಂದು ಅಕ್ಕಪಕ್ಕದವರಿಗೆ ಪ್ರಸಾದವನ್ನು ವಿತರಿಸಲು ಆ ಲಡ್ಡುವನ್ನು ಹೊರಗೆ ತೆಗೆದಾಗ ಅದರಲ್ಲಿ ಈ ಪುಡಿಕೆ ಸಿಕ್ಕಿದೆಯೆಂದು ಅವರು ಹೇಳಿದರು.
ತಿರುಮಲ ತಿರುಪತಿ ಬಾಲಾಜಿ ದೇವಸ್ಥಾನದ ಪ್ರದೇಶದಲ್ಲಿ ಗುಟ್ಕಾ, ಮದ್ಯಪಾನ, ಧೂಮಪಾನ ಮತ್ತು ಮಾಂಸಾಹಾರಗಳ ಮೇಲೆ ಕಟ್ಟುನಿಟ್ಟಾದ ನಿರ್ಬಂಧವಿದೆ. ಹೀಗಿರುವಾಗ ಈ ಲಡ್ಡುವಿನಲ್ಲಿ ತಂಬಾಕು ಹೇಗೆ ಬಂತು? ಎನ್ನುವ ಪ್ರಶ್ನೆಯೂ ಉದ್ಭವಿಸಿದೆ. ಈ ಪ್ರಕರಣದಿಂದ ಅಲ್ಲಿನ ಕೆಲವು ಸಿಬ್ಬಂದಿಗಳ ಮೇಲೆ ಅನುಮಾನ ಮೂಡಿದೆ. ತಿರುಪತಿಯ ಲಡ್ಡುವಿನಲ್ಲಿ 2012 ರಲ್ಲಿಯೂ ಗುಟಕಾ ಪಾಕೀಟು ಸಿಕ್ಕಿತ್ತು.
ಸಂಪಾದಕೀಯ ನಿಲುವುಸರಕಾರೀಕರಣಗೊಂಡಿರುವ ತಿರುಪತಿ ದೇವಸ್ಥಾನವನ್ನು ಪಾನಬೀಡಾ ಅಂಗಡಿಯಂತೆ ನಡೆಸುತ್ತಿರುವ ಸರಕಾರಗಳು. ಇಂತಹವರನ್ನು ನಿಷೇಧಿಸಿದಷ್ಟು ಕಡಿಮೆಯೇ. ದೇವಸ್ಥಾನಗಳ ಪಾವಿತ್ರ್ಯತೆಯನ್ನು ರಕ್ಷಿಸುವ ಸಲುವಾಗಿ ಅದನ್ನು ಭಕ್ತರಿಗೆ ಒಪ್ಪಿಸಬೇಕೆಂದು ಹಿಂದೂಗಳು ಆಗ್ರಹಿಸಬೇಕು. |