ಉದಯಪುರ(ರಾಜಸ್ಥಾನ) ಇಲ್ಲಿ ಮದರಸಾಕ್ಕೆ ಹಂಚಿಕೆಯಾಗಿರುವ ಭೂಮಿ ರದ್ದುಪಡಿಸುವಂತೆ ಹಿಂದೂಗಳ ಆಗ್ರಹ

ಹಿಂದೂಗಳ ವಿರೋಧದ ನಂತರ ಜಿಲ್ಲಾಧಿಕಾರಿಗಳಿಂದ ಹಂಚಿಕೆ ರದ್ದುಪಡಿಸುವಂತೆ ಕಂದಾಯ ಇಲಾಖೆಗೆ ಶಿಫಾರಸು

ಉದಯಪುರ (ರಾಜಸ್ಥಾನ) – ಇಲ್ಲಿಯ ಮಾವಳಿ ಪ್ರದೇಶದಲ್ಲಿ ಕಟ್ಟಲಾಗುವ ಮದರಸಾಗೆ ಹಂಚಿರುವ ಭೂಮಿಯನ್ನು ರದ್ದು ಪಡಿಸಬೇಕೆಂದು ಹಿಂದೂಗಳು ಆಗ್ರಹಿಸುತ್ತಿದ್ದಾರೆ. ಇದಕ್ಕಾಗಿ ಹಿಂದುಗಳು ಮುಷ್ಕರ ನಡೆಸಿ ಸರಕಾರಕ್ಕೆ ಮನವಿ ಕೂಡ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾವಳಿ ಉಪವಿಭಾಗೀಯ ದಂಡಾಧಿಕಾರಿಗಳಿಂದ ಉದಯಪುರದ ಜಿಲ್ಲಾಧಿಕಾರಿಗಳಿಗೆ ವರದಿ ಕಳುಹಿಸಲಾಗಿದೆ. ಇದರ ನಂತರ ಉದಯಪುರದ ಜಿಲ್ಲಾ ದಂಡಾಧಿಕಾರಿಗಳಿಂದ ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ. ದಂಡಾಧಿಕಾರಿ ಪ್ರಸ್ತುತ ಪಡಿಸಿರುವ ವರದಿಯಲ್ಲಿ, ಭೂಮಿಯಲ್ಲಿ ನೀರು ಸಂಗ್ರಹವಾಗುವುದು, ಜಲಕ್ಷೇತ್ರ ಪುನರ್ಸಂಚಯನ ಮಾಡುವುದರ ನ್ಯಾಯಾಲಯದ ನಿರ್ಣಯದ ಜೊತೆಗೆ ಜೋಡಿಸುವುದರ ಜೊತೆಗೆ ಅನೇಕ ಕಾರಣಗಳಿಂದ ಭೂಮಿ ಹಂಚಿಕೆ ರದ್ದು ಪಡಿಸಲು ಶಿಫಾರಸು ಮಾಡಿದ್ದಾರೆ. ಇದರಲ್ಲಿ ಭೂಮಿ ವಿವಾದದಿಂದ ಕೂಡಿದೆ ಎಂದು ವರ್ಣನೆ ಮಾಡಲಾಗಿದ್ದು ಅದರ ಕುರಿತು ಧಾರ್ಮಿಕ ವಿವಾದ ನಿರ್ಮಾಣ ಆಗಿರುವುದರಿಂದ ಇದನ್ನು ರದ್ದು ಪಡಿಸಲು ಆಗ್ರಹಿಸಲಾಗಿದೆ.

ಹಿಂದೂ ಸಂಘಟನೆಗಳು ಹಂಚಿಕೆ ರದ್ದು ಪಡಿಸಲು ಒತ್ತಾಯಿಸಿದ್ದಾರೆ !

೨೦೨೨ ರಲ್ಲಿ ಅಂದಿನ ಕಾಂಗ್ರೆಸ್ ಸರಕಾರದ ಕಾರ್ಯಕಾಲದಲ್ಲಿ ಉದಯಪುರದ ಜಿಲ್ಲಾಧಿಕಾರಿಗಳಿಗೆ ಆದೇಶ ಪ್ರಸಾರ ನೀಡಿ ಮಾವಳಿ ಇಲ್ಲಿಯ ಮದರಸಾ ಇಸ್ಲಾಮಿಕ್ ಗೌಸಿಯ ಅಂಜುಮಾನ್ ಗೆ ಭೂಮಿ ನೀಡಿತ್ತು. ಅಲ್ಲಿಂದ ಹಿಂದೂ ಸಂಘಟನೆಗಳು ಈ ಹಂಚಿಕೆ ರದ್ದು ಪಡಿಸಲು ಆಗ್ರಹಿಸುತ್ತಿತ್ತು.

ಉದಯಪುರದ ಜಿಲ್ಲಾಧಿಕಾರಿ ಅರವಿಂದ ಪೋಸವಾನ್ ಇವರು ಮಾತನಾಡಿ, ಉಪವಿಭಾಗಿಯ ದಂಡಾಧಿಕಾರಿಗಳ ವರದಿಯ ಆಧಾರದಲ್ಲಿ ಕಂದಾಯ ಇಲಾಖೆಗೆ ಪತ್ರ ಬರೆದು ಭೂಮಿ ಹಂಚಿಕೆ ಏಕೆ ರದ್ದು ಪಡಿಸಬೇಕು ? ಎಂದು ಸ್ಪಷ್ಟಪಡಿಸಿದ್ದಾರೆ. ಈ ಪ್ರದೇಶದಲ್ಲಿ ಹಿಂದೂ ಕುಟುಂಬಗಳ ಜನಸಂಖ್ಯೆ ಹೆಚ್ಚಾಗಿದೆ ಎಂದು ದಂಡಾಧಿಕಾರರ ವರದಿಯಲ್ಲಿ ಹೇಳಿದ್ದಾರೆ ಹಾಗೂ ಭೂಮಿಯಲ್ಲಿ ನೀರು ಸಂಗ್ರಹವಾಗಿದ್ದು ಮತ್ತು ಅದರ ಮೇಲಿಂದ ವಿದ್ಯುತ್ತಿನ ಹೈಟೆನ್ಶನ್ ಲೈನ್ (ವಿದ್ಯುತ್ ತಂತಿಗಳು) ಹೋಗಿದೆ.

ಸಂಪಾದಕೀಯ ನಿಲುವು

ದೇಶದಲ್ಲಿನ ಅನೇಕ ಮದರಸಾಗಳನ್ನು ಮುಚ್ಚುವ ಬದಲು ಸರಕಾರ ಹೊಸ ಮದರಸಾಗಳ ನಿರ್ಮಾಣಕ್ಕಾಗಿ ಭೂಮಿ ಹೇಗೆ ಹಂಚುತ್ತದೆ ? ರಾಜಸ್ಥಾನದಲ್ಲಿ ಭಾಜಪದ ಸರಕಾರ ಬಂದ ನಂತರ ತಾವಾಗಿಯೇ ಈ ರೀತಿಯ ಹಂಚಿಕೆ ರದ್ದು ಪಡಿಸಬೇಕು ಎಂದು ಹಿಂದುಗಳಿಗೆ ಅನಿಸುತ್ತದೆ !