ದೆಹಲಿ: ಶಾಹಿ ಈದಗಾಹ ಪಾರ್ಕ್ ನಲ್ಲಿ ಝಾನ್ಸಿ ರಾಣಿಯ ಪ್ರತಿಮೆ ಸ್ಥಾಪನೆಗೆ ವಿರೋಧ; ಅರ್ಜಿ ತಿರಸ್ಕರಿಸಿದ ಉಚ್ಚ ನ್ಯಾಯಾಲಯ

ನವದೆಹಲಿ – ನಗರದಲ್ಲಿನ ಮಾರುಕಟ್ಟೆ ಪರಿಸರದಲ್ಲಿರುವ ಶಾಹಿ ಈದಗಾಹ್ ಪಾರ್ಕಿನಲ್ಲಿ ಝಾನ್ಸಿ ರಾಣಿಯ ಪ್ರತಿಮೆ ಸ್ಥಾಪನೆಯನ್ನು ವಿರೋಧಿಸಿ ಶಾಹಿ ಈದಗಾಹ ವ್ಯವಸ್ಥಾಪಕ ಸಮಿತಿಯು ಅರ್ಜಿ ದಾಖಲಿಸಿತ್ತು, ಈ ಅರ್ಜಿಯನ್ನು ದೆಹಲಿ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ. ಶಾಹಿ ಈದಗಾಹ ವಕ್ಫ್ ಭೂಮಿಯಾಗಿರುವುದರಿಂದ ಅತಿಕ್ರಮಣ ಮಾಡದಂತೆ ಆದೇಶ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು.
ಅರ್ಜಿ ತಿರಸ್ಕರಿಸುವಾಗ ನ್ಯಾಯಮೂರ್ತಿ ಧರ್ಮೇಶ ಶರ್ಮ ಅವರು ಮಾತನಾಡಿ, ಈದಗಾಹ ಸರಹದ್ಧಿನಲ್ಲಿನ ಕ್ಷೇತ್ರ, ಅದು ಪಾರ್ಕ್ ಅಥವಾ ಖಾಲಿ ಮೈದಾನವಾಗಿದೆ. ಅದು ದೆಹಲಿ ವಿಕಾಸ ಪ್ರಾಧೀಕರಣದ (ಡಿಡಿಎ) ಆಸ್ತಿಯಾಗಿದೆ. ದೆಹಲಿ ವಕ್ಫ್ ಬೋರ್ಡ್ ಕೂಡ ಧಾರ್ಮಿಕ ಕಾರ್ಯದ ಹೊರತಾಗಿ ಇನ್ನಾವುದೇ ಕಾರಣಕ್ಕೂ ಉದ್ಯಾನದ ಬಳಕೆ ಮಾಡದಂತೆ ಆದೇಶ ನೀಡುವುದಿಲ್ಲ. ಪ್ರಾಧೀಕರಣಕ್ಕೆ ಯೋಗ್ಯ ಅನಿಸಿದರೆ ಅಂತಹ ಭೂಮಿ ಸಾರ್ವಜನಿಕ ಬಳಕೆಗಾಗಿ ನೀಡಬಹುದು. ಅರ್ಜಿದಾರರ ಯಾವ ಧಾರ್ಮಿಕ ಅಧಿಕಾರಕ್ಕೆ ಹೇಗೆ ಅಪಾಯವಾಗಿದೆ ಎಂಬುದು ತಿಳಿದು ಬರುತ್ತಿಲ್ಲ, ಎಂದು ಕೂಡ ನ್ಯಾಯಾಲಯ ಟಿಪ್ಪಣಿ ಮಾಡಿದೆ.

ಸಂಪಾದಕೀಯ ನಿಲುವು

ಝಾನ್ಸಿ ರಾಣಿಯ ಪ್ರತಿಮೆ ಸ್ಥಾಪನೆಯನ್ನು ವಿರೋಧಿಸುವವರು ದೇಶದ್ರೋಹಿಗಳೇ ಆಗಿದ್ದಾರೆ ! ಅಂತವರ ಮೇಲೆ ಕ್ರಮ ಕೈಗೊಳ್ಳಲು ಕೂಡ ಕಾನೂನು ತರಬೇಕು