ಕಾಂಗ್ರೇಸ್ ಶಾಸಕನ ಸೋದರಳಿಯನ ತಲೆ ಕಡಿಯುವವರಿಗೆ ೫೧ ಲಕ್ಷ ರೂಪಾಯಿಯ ಬಹುಮಾನ ನೀಡುತ್ತೇನೆಂದ ಮತಾಂಧ

ಬೆಂಗಳೂರು ಗಲಭೆ ಪ್ರಕರಣ

ಈ ರೀತಿ ಬಹಿರಂಗವಾಗಿ ಬೆದರಿಕೆಯೊಡ್ಡಿದರೂ ಅದರ ಬಗ್ಗೆ ಜಾತ್ಯತೀತವಾದಿ, ಪ್ರಗತಿ(ಅಧೋಗತಿ)ಪರರು ಬಾಯಿ ತೆರೆಯುವುದಿಲ್ಲ. ಇದರಿಂದ ಅವರ ನಿಜವಾದ ಮುಖವಾಡ ಬಹಿರಂಗವಾಗುತ್ತದೆ!

ಮೀರತ್ (ಉತ್ತರಪ್ರದೇಶ) – ಮಹಮ್ಮದ ಪೈಗಂಬರರ ವಿರುದ್ಧ ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಆರೋಪದ ಪ್ರಕರಣದಲ್ಲಿ ಬೆಂಗಳೂರಿನ ಕಾಂಗ್ರೆಸ್‌ನ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯ ಸೋದರಳಿಯನ ತಲೆ ಕಡಿದವನಿಗೆ ೫೧ ಲಕ್ಷ ರೂಪಾಯಿ ನೀಡುತ್ತೇನೆ ಎಂದು ಘೋಷಿಸಿದ ಮೀರತ್‌ದಲ್ಲಿಯ ಶಾಹಜೇಬ ರಿಝ್ವಿ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಆತನ ಮೇಲೆ ಕ್ರಮ ಕೈಗೊಳ್ಳಲಾಗುವುದು, ಎಂದು ಪೊಲೀಸರು ತಿಳಿಸಿದ್ದಾರೆ. ರಿಝ್ವಿವಿಯು ಒಂದು ಖಾಸಗಿ ಸಂಸ್ಥೆಯೊಂದನ್ನು ನಡೆಸುತ್ತಿದ್ದಾನೆ. ನವೀನ್‌ನ ಪೋಸ್ಟ್‌ನಿಂದಾಗಿ ಬೆಂಗಳೂರಿನಲ್ಲಿ ಮತಾಂಧರು ಹಿಂಸಾಚಾರ ಮಾಡಿದ್ದರು. ಪೊಲೀಸರು ನವೀನ್‌ನನ್ನು ಬಂಧಿಸಿದ್ದಾರೆ.