ತೇಜೋಮಹಾಲಯದಲ್ಲಿ ಹಬ್ಬದ ಸಮಯಗಳಲ್ಲಿ ಪೂಜೆಗೆ ಅನುಮತಿ ಕೋರಿದ ಹಿಂದೂಗಳು !
ಆಗ್ರಾ (ಉತ್ತರ ಪ್ರದೇಶ) – ತಾಜಮಹಲ್ ತೇಜೋಮಹಾಲಯವಾಗಿದೆ. ಇಲ್ಲಿ ಹಿಂದೂಗಳ ಹಬ್ಬಗಳ ಸಂದರ್ಭದಲ್ಲಿ ಪೂಜೆ ಮತ್ತು ಜಲಾಭಿಷೇಕ ಮಾಡಲು ಅನುಮತಿಗಾಗಿ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಪ್ರಕರಣದಲ್ಲಿ ಮುಸಲ್ಮಾನ ಪಕ್ಷದ ಪರವಾಗಿ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದೂ, ತಾಜಮಹಲ್ ನಲ್ಲಿ ಕಬ್ರ ಇದೆ ಎಂಬುದಕ್ಕೆ ಸಾಕ್ಷಿ ಸಲ್ಲಿಸಲಾಗಿದೆ. ಈ ಕುರಿತು ಅರ್ಜಿದಾರರು ಆಕ್ಷೇಪಣೆಗಳನ್ನು ಸಲ್ಲಿಸಲು ನ್ಯಾಯಾಲಯದಿಂದ ಸಮಯ ಕೇಳಿದೆ. ಈಗ ಈ ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 7 ರಂದು ನಡೆಯಲಿದೆ.
ಯೋಗಿ ಯುವ ಬ್ರಿಗೇಡ್‌ನ ಅಜಯ ತೋಮರ ಮತ್ತು ವಕೀಲ ಶಿವ ಆಧಾರ ಸಿಂಗ ತೋಮರ ನ್ಯಾಯಾಲಯದಲ್ಲಿ ಖಟ್ಲೆ ದಾಖಲಿಸಿದ್ದಾರೆ. ಇದರ ಮೇಲೆ ನಡೆದ ವಿಚಾರಣೆಯ ವೇಳೆ ಸೈಯದ್ ಇಬ್ರಾಹಿಂ ಹುಸೇನ್ ಅವರು ತಮ್ಮ ವಕೀಲರ ಮೂಲಕ ಮುಸಲ್ಮಾನ ಪಕ್ಷದ ಪರವಾಗಿ ಅರ್ಜಿ ಸಲ್ಲಿಸಿದ್ದಾರೆ.