|
ನವದೆಹಲಿ – ತಿರುಪತಿ ದೇವಸ್ಥಾನದ ಲಡ್ಡುಗಳ ಸಂದರ್ಭದಲ್ಲಿನ ಘಟನೆಯು ವಿವಾದಕ್ಕಿಂತ ದೊಡ್ಡದಿದೆ. ಮಂಗಲ ಪಾಂಡೆಯವರಿಗೆ ಹಸುವಿನ ಕೊಬ್ಬಿರುವ ಬಂದೂಕಿನ ಕಾರ್ಟ್ರಿಡ್ಜ್ ಅನ್ನು ಬಾಯಿಂದ ತೆಗೆಯಲು ಹೇಳಿದ್ದರು ಮತ್ತು ಅದರಿಂದಾಗಿ ದೇಶದಲ್ಲಿ ಕ್ರಾಂತಿಯಾಗಿತ್ತು, ಎಂದು ಜ್ಯೋಷಿತ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರು ‘ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ’ ಎಂಬ ವಾರ್ತಾಸಂಸ್ಥೆಯ ಪ್ರತಿನಿಧಿಗಳೊಂದಿಗೆ ಮಾತನಾಡುವಾಗ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಶಂಕರಾಚಾರ್ಯರು ಮುಂದುವರಿದು, ಇಂದು ಕೋಟ್ಯಂತರ ಭಾರತೀಯರು ಬಾಯಿಗೆ ಗೋಮಾಂಸದ ಕೊಬ್ಬನ್ನು ಹಾಕಲಾಗಿದೆ, ಇದು ಯಾವುದೇ ಚಿಕ್ಕ ಘಟನೆಯಲ್ಲ. ಇದು ಹಿಂದೂ ಸಮಾಜದೊಂದಿಗೆ ಮಾಡಲಾದ ದೊಡ್ಡ ವಿಶ್ವಾಸಘಾತವಾಗಿದೆ. 4-5 ದಿನಗಳು ಕಳೆದಿವೆ. ಈ ಘಟನೆಯ ತನಿಖೆಯಲ್ಲಿ ವಿಳಂಬವಾದರೂ ಈ ಘಟನೆಯನ್ನು ಮರೆಯಲು ಸಾಧ್ಯವಿಲ್ಲ. ಇದು ಒಂದು ದೊಡ್ಡ ಮತ್ತು ಸಂಘಟಿತ ಅಪರಾಧವಾಗಿದೆ. ಇದಕ್ಕೆ ಜವಾಬ್ದಾರರಾಗಿರುವವರನ್ನು ಮುಂದೆ ತಂದು ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಗೋಮಾತೆ ಇರುವವರೆಗೆ ನಾವು ಅಪವಿತ್ರರಾಗಲು ಸಾಧ್ಯವಿಲ್ಲ ಎಂದು ಹೇಳಿದರು.