ರಾಷ್ಟ್ರಧ್ವಜದ ‘ಮಾಸ್ಕ್’ ಮಾರಾಟ ಮಾಡುವ ಅಮೇಝಾನ, ಫ್ಲಿಪ್‌ಕಾರ್ಟ್ ಇತ್ಯಾದಿ ಕಂಪನಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಿ ! – ಸುರಾಜ್ಯ ಅಭಿಯಾನ

ಗೋವಾ – ‘ಭಾರತೀಯ ರಾಷ್ಟ್ರಧ್ವಜ’ವು ಕೋಟಿಗಟ್ಟಲೆ ಭಾರತೀಯರಿಗೆ ಸ್ವಾಭಿಮಾನದ ವಿಷಯವಾಗಿದೆ; ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಅದನ್ನು ಇತರ ಯಾವುದಕ್ಕೂ ಉಪಯೋಗಿಸುವುದು ಕಾನೂನಿಗನುಸಾರ ದಾಖಲಾರ್ಹ ಹಾಗೂ ಜಾಮೀನುರಹಿತ ಅಪರಾಧವಾಗಿದೆ. ಹೀಗಿದ್ದರೂ, ಇಂತಹ ಸಂವೇದನಾಶೀಲ ವಿಷಯಗಳ ಬಗ್ಗೆ ಗಾಂಭೀರ್ಯತೆಯನ್ನಿಡದೇ ಅಮೇಝಾನ್, ಇಂಡಿಯಾಮಾರ್ಟ್, ಫೇಮಸ್‌ಶಾಪ್, ಮೀಂತ್ರಾ, ಸ್ನ್ಯಾಪಡೀಲ್, ಫ್ಲಿಪ್‌ಕಾರ್ಟ್‌ನಂತಹ ‘ಈ-ಕಾಮರ್ಸ್’ ಜಾಲತಾಣಗಳಲ್ಲಿ ಕೊರೋನಾ ಸೋಂಕನ್ನು ತಡೆಗಟ್ಟಲು ಆಗಸ್ಟ್ ೧೫ ರ ನಿಮಿತ್ತ ಭಾರತೀಯ ರಾಷ್ಟ್ರಧ್ವಜದ ಬಣ್ಣಗಳಿರುವ ‘ಮಾಸ್ಕ್’ ನಿರ್ಮಿಸಿ ಅದನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತಿದೆ. ಅಂತಹವರ ಮೇಲೆ ರಾಷ್ಟ್ರಧ್ವಜದ ಅವಮಾನ ಮಾಡಿದ ಪ್ರಕರಣದಲ್ಲಿ ಅಪರಾಧವನ್ನು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು, ಅದೇರೀತಿ ಇಂತಹ ಮಾಸ್ಕ್‌ಗಳ ಮಾರಾಟ, ಉತ್ಪಾದನೆ ಹಾಗೂ ವಿತರಣೆಯಾಗಬಾರದು ಈ ದೃಷ್ಟಿಯಿಂದ ಸರಕಾರವು ಶೀಘ್ರದಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು, ಎಂದು ‘ಸುರಾಜ್ಯ ಅಭಿಯಾನ’ ಉಪಕ್ರಮದ ಮನವಿಯ ಮಾಧ್ಯಮದಿಂದ ಹಿಂದೂ ಜನಜಾಗೃತಿ ಸಮಿತಿಯು ಮಾನ್ಯ ಪ್ರಧಾನಿ ಹಾಗೂ ಕೇಂದ್ರೀಯ ಗೃಹ ಸಚಿವರಲ್ಲಿ ಆಗ್ರಹಿಸಿದೆ. ಈ ಆಶಯದ ಮನವಿಯನ್ನು — ಜಿಲ್ಲೆಯ ಜಿಲ್ಲಾಧಿಕಾರಿ—(ಹೆಸರು ಬರೆಯಬೇಕು)/ ಇತರ ಸರಕಾರಿ ಅಧಿಕಾರಿ—(ಹೆಸರು ಬರೆಯಬೇಕು) ಇವರಿಗೂ ನೀಡಲಾಯಿತು.

ರಾಷ್ಟ್ರಧ್ವಜ ಇದು ಶೃಂಗಾರದ ಮಾಧ್ಯಮವಲ್ಲ. ಈ ರೀತಿಯ ಮಾಸ್ಕ್ ಉಪಯೋಗಿಸಿದರೆ ಸೀನುವುದು, ಅದಕ್ಕೆ ಉಗುಳು ತಾಗುವುದು, ಅದು ಅಸ್ವಚ್ಛವಾಗುವುದು, ಅದೇ ರೀತಿ ಉಪಯೋಗಿಸಿದ ನಂತರ ಕಸದಲ್ಲಿ ಬಿಸಾಡುವುದು ಇತ್ಯಾದಿಗಳಿಂದಾಗಿ ರಾಷ್ಟ್ರಧ್ವಜದ ಅವಮಾನವಾಗುತ್ತದೆ ಹಾಗೂ ಹೀಗೆ ಮಾಡುವುದೆಂದರೆ ಇದು ‘ರಾಷ್ಟ್ರೀಯ ಚಿಹ್ನೆಯ ದುರುಪಯೋಗ ತಡೆ ಕಾನೂನು ೧೯೫೦’, ಕಲಮ್ ೨ ಹಾಗೂ ೫ ಕ್ಕನುಸಾರ; ಅದೇರೀತಿ ‘ರಾಷ್ಟ್ರದ ಘನತೆಯ ಅವಮಾನ ಪ್ರತಿಬಂಧಕ ಅಧಿನಿಯಮ ೧೯೭೧’ರ ಕಲಂ ೨ ಕ್ಕನುಸಾರ ಹಾಗೂ ‘ಬೋಧಚಿಹ್ನೆ ಹಾಗೂ ಹೆಸರು (ದುರುಪಯೋಗ ನಿರ್ಬಂಧ) ಅಧಿನಿಯಮ ೧೯೫೦’ ಈ ಮೂರೂ ಕಾನೂನುಗಳಿಗನುಸಾರ ದಂಡನೀಯ ಅಪರಾಧವಾಗಿದೆ. ಆದ್ದರಿಂದ ಸರಕಾರ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು, ಎಂದು ನಮ್ಮ ಬೇಡಿಕೆಯಾಗಿದೆ.

ಹಿಂದೂ ಜನಜಾಗೃತಿ ಸಮಿತಿ ಕಳೆದ ೧೮ ವರ್ಷಗಳಿಂದ ‘ರಾಷ್ಟ್ರಧ್ವಜದ ಗೌರವವನ್ನು ಕಾಪಾಡಿ’ ಈ ಅಭಿಯಾನವನ್ನು ಹಮ್ಮಿಕೊಳ್ಳುತ್ತಿದೆ. ರಾಷ್ಟ್ರಧ್ವಜದ ಅವಮಾನವನ್ನು ತಡೆಗಟ್ಟಲು ಹಿಂದೂ ಜನಜಾಗೃತಿ ಸಮಿತಿಯು ೨೦೧೧ ರಲ್ಲಿ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿತ್ತು. ಅದರ ಬಗ್ಗೆ ತೀರ್ಪು ನೀಡುತ್ತಿರುವಾಗ ‘ಸರಕಾರ ರಾಷ್ಟ್ರಧ್ವಜ ಆಗುತ್ತಿರುವ ವಿಡಂಬನೆ ಹಾಗೂ ಅವಮಾನ ತಡೆಗಟ್ಟಬೇಕು’ ಎಂದು ಸರಕಾರಕ್ಕೆ ನಿರ್ದೇಶನವನ್ನು ನೀಡಿತ್ತು.

(ಲಿಂಕ್ : Amazon https://amzn.to/3h6yBch
India Marthttps://m.indiamart.com/proddetail/tri-color-kids-face-mask-22461845930.html
Fameus Shopbit.ly/3apS3hs
Myntrahttps://www.myntra.com/indian-flag-mask
Snapdealhttps://m.snapdeal.com/product/indpendence-day-indian-trianga-flag/640014277751
Flipkartbit.ly/3gXXaYv)