ಉತ್ತರಪ್ರದೇಶದಲ್ಲಿನ ಪ್ರತಿಯೊಂದು ಆಹಾರ ಪದಾರ್ಥದ ಅಂಗಡಿಯ ಮೇಲೆ ಅಂಗಡಿ ಮಾಲೀಕನ ಹೆಸರು ಬರೆಯುವುದು ಕಡ್ಡಾಯ !

  • ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರ ಶ್ಲಾಘನೀಯ ನಿರ್ಣಯ

  • ಸಿಸಿಟಿವಿ ಅಳವಡಿಸುವುದು ಮತ್ತು ಸಿಬ್ಬಂದಿಗಳಿಗೆ ಮಾಸ್ಕ್ ಮತ್ತು ಹ್ಯಾಂಡ್ ಗ್ಲೋವ್ಸ್ ಧರಿಸುವುದು ಕಡ್ಡಾಯ

  • ಅಂಗಡಿ, ಢಾಬಾಗಳು, ಹೋಟೆಲ ಮತ್ತು ರೆಸ್ಟೋರೆಂಟಗಳ ವಿಚಾರಣೆಗೆ ಆದೇಶ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶದಲ್ಲಿನ ಎಲ್ಲ ಆಹಾರ ಪದಾರ್ಥಗಳ ಅಂಗಡಿಗಳು, ಢಾಬಾಗಳು, ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಈಗ ಮಾಲೀಕರ ಹಾಗೂ ವ್ಯವಸ್ಥಾಪಕರ ಹೆಸರು ಬರೆಯುವುದು ಕಡ್ಡಾಯವಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ಮನುಷ್ಯ ತ್ಯಾಜ್ಯ ಪದಾರ್ಥ(ಉಗುಳು, ಮೂತ್ರ ಮಂತಾದವು)ಗಳ ಸಹಿತ ಇತರ ಹೊಲಸು ಪದಾರ್ಥಗಳನ್ನು ಆಹಾರದಲ್ಲಿ ಬೆರೆಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆದೇಶಿಸಿದ್ದಾರೆ. ಇತ್ತೀಚಿಗೆ ಬೆಳಕಿಗೆ ಬಂದಿರುವ ವಿವಿಧ ಘಟನೆಗಳ ಹಿನ್ನೆಲೆಯಲ್ಲಿ ಈ ಆದೇಶವನ್ನು ನೀಡಲಾಗಿದೆ.

೧. ಇಲ್ಲಿ ನಡೆದಿರುವ ಉನ್ನತ ಮಟ್ಟದ ಸಭೆಯಲ್ಲಿ ಮುಖ್ಯಮಂತ್ರಿಗಳು ಎಲ್ಲ ಹೋಟೆಲ್, ಢಾಬಾಗಳು ಮತ್ತು ರೆಸ್ಟೋರೆಂಟ್ ಮುಂತಾದ ಸಂಬಂಧಿತ ಸಂಸ್ಥೆಗಳು, ಹಾಗೂ ಅಲ್ಲಿನ ಪ್ರತಿಯೊಬ್ಬ ಸಿಬ್ಬಂದಿಯ ವಿಚಾರಣೆ ಮತ್ತು ಪರಿಶೀಲನೆ ನಡೆಸಲು ಆದೇಶಿಸಿದ್ದಾರೆ. ಸಾಮಾನ್ಯ ನಾಗರಿಕರ ಆರೋಗ್ಯದ ಸುರಕ್ಷೆಯ ಕಾಳಜಿ ವಹಿಸುತ್ತ ಆವಶ್ಯಕತೆಯನುಸಾರ ನಿಯಮಗಳಲ್ಲಿ ಸುಧಾರಣೆ ತರಲು ಸೂಚಿಸಿದ್ದಾರೆ.

೨. ಜ್ಯೂಸ್, ಬೇಳೆಗಳು ಮತ್ತು ಬ್ರೆಡ್ ನಂತಹ ಖಾದ್ಯ ಪದಾರ್ಥದಲ್ಲಿ ಮನುಷ್ಯ ತ್ಯಾಜ್ಯ ಪದಾರ್ಥಗಳನ್ನು ಬೆರೆಸುವುದು ಅಸಹ್ಯಕರವಾಗಿದ್ದು, ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ, ಎಂದು ಮುಖ್ಯಮಂತ್ರಿ ಯೋಗಿಯವರು ಸ್ಪಷ್ಟಪಡಿಸಿದರು. ಖಾದ್ಯ ಪದಾರ್ಥದ ಶುದ್ಧತೆ ಮತ್ತು ಪಾವಿತ್ರ್ಯವನ್ನು ಸುನಿಶ್ಚಿತಗೊಳಿಸಲು `ಆಹಾರ ಸುರಕ್ಷೆ ಮತ್ತು ಮಾನದಂಡ’ ಈ ಕಾನೂನಿನಲ್ಲಿ ಅಗತ್ಯ ಸುಧಾರಣೆ ಮಾಡುವ ಸೂಚನೆಯನ್ನೂ ಅವರು ನೀಡಿದ್ದಾರೆ.

೩. ಹೋಟೆಲ್, ಢಾಬಾಗಳು ಮುಂತಾದ ಭೋಜನ ಕೇಂದ್ರಗಳ ಸಂಚಾಲಕರು, ಮಾಲೀಕರು, ವ್ಯವಸ್ಥಾಪಕರ ಮುಂತಾದವರ ಹೆಸರು ಮತ್ತು ವಿಳಾಸ ಪ್ರಕಾಶಿತಗೊಳಿಸುವುದು ಕಡ್ಡಾಯವಾಗಿದೆ. ಅಡುಗೆಯವರು ಇರಲಿ ಅಥವಾ ವೇಟರ್, ಪ್ರತಿಯೊಬ್ಬರೂ ಮಾಸ್ಕ್ ಮತ್ತು ಕೈಗವಸುಗಳನ್ನು ಧರಿಸಬೇಕು. ಇಲ್ಲಿ ಸಿಸಿಟಿವಿ ಅಳವಡಿಸುವುದು ಕಡ್ಡಾಯವಾಗಿದೆ.

ಸಂಪಾದಕೀಯ ನಿಲುವು

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ಇಂತಹ ನಿರ್ಣಯ ತೆಗೆದುಕೊಳ್ಳಬಹುದಾದರೆ ಇತರ ರಾಜ್ಯದ ಮುಖ್ಯಮಂತ್ರಿಗಳಿಗೆ ಏಕೆ ಸಾಧ್ಯವಿಲ್ಲ ? ಅವರಿಗೆ ಜನರ ಆರೋಗ್ಯದ ಬಗ್ಗೆ ಕಾಳಜಿಯಿಲ್ಲವೇ ?