ಆಗಸ್ಟ್ ೧೫ ರ ಸ್ವಾತಂತ್ರ್ಯದಿನದ ನಿಮಿತ್ತ ಲೇಖನ

ಶಾಶ್ವತ ಆನಂದ ಮತ್ತು ಮನಃಶಾಂತಿಯನ್ನು ದೊರಕಿಸಿಕೊಡುವ ಭಾರತ !

‘ಭಾರತದಲ್ಲಿನ ಯುವಕರು ವಿದೇಶಕ್ಕೆ ಹೋದಾಗ ಅಲ್ಲಿ ಅವರ ‘ಬ್ರೆನ್‌ವಾಶ್’, ಅಂದರೆ ಬಲಪೂರ್ವಕ ಮತಪರಿವರ್ತನೆ ಮಾಡಲಾಗುತ್ತದೆ. ಆ ಯುವಕರು ಅವರಿಂದ ಎಷ್ಟು ಪ್ರಭಾವಿತರಾಗುತ್ತಾರೆಂದರೆ, ಯಾವ ಭೂಮಿಯಲ್ಲಿ ಅವರು ಜನ್ಮತಾಳಿದರೋ, ಯಾವುದು ಋಷಿಮುನಿಗಳ ಭೂಮಿಯಾಗಿದೆಯೋ, ಯಾವ ಭೂಮಿಯಲ್ಲಿ ಭಗವಂತನೂ ಅನೇಕ ಅವತಾರಗಳನ್ನು ತಾಳಿದನೋ, ಯಾವ ಭೂಮಿಯಲ್ಲಿ ಅನೇಕ ಸಂತ-ಮಹಾತ್ಮರು, ವೇದಾಂತಿ ಸತ್ಪುರುಷರು, ಅವತರಿಸುತ್ತಿರುತ್ತಾರೆಯೋ, ಅಂತಹ ನಮ್ಮ ಮಾತೃಭೂಮಿ ಭಾರತದ ಬಗ್ಗೆ ಅವರ ಮನಸ್ಸಿನಲ್ಲಿ ತಿರಸ್ಕಾರ ಮತ್ತು ಜುಗುಪ್ಸೆ ಉತ್ಪನ್ನವಾಗುತ್ತದೆ.’

೧. ವಿದೇಶಗಳಲ್ಲಿ ಎಲ್ಲ ಸುಖಸೌಲಭ್ಯಗಳಿರುವಾಗ ಅವರ ಹೃದಯದಲ್ಲಿನ ಪ್ರೇಮ ಹೇಗೆ ಕಡಿಮೆಯಾಗಿದೆ ?

ಸ್ವಾಮೀ ರಾಮತೀರ್ಥರ ಹೇಳಿಕೆಗನುಸಾರ ಮತ್ತು ರಶಿಯಾದಲ್ಲಿನ ಅನೇಕ ವಿದ್ವಾಂಸರ ಲೇಖನಗಳಿಗನುಸಾರ ಯೇಸು ಕ್ರಿಸ್ತನು ೧೭ ವರ್ಷಗಳ ವರೆಗೆ ಭಾರತದಲ್ಲಿದ್ದನು. ಅವನು ಕಾಶ್ಮೀರದಲ್ಲಿನ ಯೋಗಿಗಳಿಂದ ಯೋಗವನ್ನು ಕಲಿತನು. ನಂತರ ಅಲ್ಲಿಗೆ ಹೋಗಿ ಹೆಸರುವಾಸಿಯಾದನು. ಇಂತಹ ದಿವ್ಯ ಭಾರತಭೂಮಿಯ ಬಗ್ಗೆ ಈ ಯುವಕರು, ‘ಇಂಡಿಯಾ ಈಜ್ ನಥ್ಥಿಂಗ್; ಇಂಡಿಯಾ ಇಸ್ ವೇರಿ ಪುವರ್’ (ಭಾರತದಲ್ಲಿ ಏನೂ ಇಲ್ಲ. ಅದು ಬಡ ದೇಶವಾಗಿದೆ.)’ ಎಂದು ಹೇಳತೊಡಗುತ್ತಾರೆ. ಓರ್ವ ಸಂತರು ಅಮೇರಿಕಗೆ ಹೋದಾಗ, ಅಲ್ಲಿನ ಜನರು, “ತಾವು ಆಧ್ಯಾತ್ಮಿಕತೆಯ ಬಗ್ಗೆ ಮಾತಾಡುತ್ತಿರುವಿರಿ; ಆದರೆ ಭಾರತದಲ್ಲಿ ಆಧ್ಯಾತ್ಮಿಕತೆ ಇದ್ದರೂ ಭಾರತವು ಇಷ್ಟು ಬಡ ದೇಶ ಏಕಾಗಿದೆ ?” ಎಂದು ಪ್ರಶ್ನೆ ಕೇಳಿದರು. ಅದಕ್ಕೆ ಅವರು, ನಾನು “ನಮ್ಮ ಭಾರತ ಏಕೆ ಬಡದೇಶವಾಗಿದೆ ?, ಎಂಬುದನ್ನು ನಿಮಗೆ ಹೇಳುವೆನು; ಆದರೆ ಮೊದಲು ನೀವು ನನಗೆ, “ತಮ್ಮ ಬಳಿ ಎಲ್ಲ ಭೌತಿಕ ಸುಖಸೌಲಭ್ಯಗಳಿದ್ದರೂ ಹೃದಯದ ದಾರಿದ್ರ್ಯವು ಏಕೆ ಮುಗಿದಿಲ್ಲ ? ಪತಿ-ಪತ್ನಿ ಇಬ್ಬರೂ ಹಣ ಸಂಪಾದಿಸುತ್ತಾರೆ, ಮಕ್ಕಳೂ ಸಂಪಾದಿಸುತ್ತಾರೆ, ಆದರೂ ಯಾವ ರೀತಿ ವೃದ್ಧ ಪಶುಗಳನ್ನು ಗೋಶಾಲೆಗೆ ಕಳಿಸುತ್ತಾರೆಯೋ, ಹಾಗೆಯೇ ನೀವು ನಿಮ್ಮ ತಾಯಿ-ತಂದೆಯರನ್ನು ‘ನರ್ಸಿಂಗ್ ಹೋಮ್’ಗೆ (ಸರಕಾರಿ ಅನಾಥಾಶ್ರಮಕ್ಕೆ) ಏಕೆ ಕಳುಹಿಸುತ್ತೀರಿ ? ನಿಮ್ಮ ಹೃದಯದಲ್ಲಿ ಪ್ರೀತಿ ಇಷ್ಟು ಕಡಿಮೆ ಏಕಿದೆ ?” ಎಂಬುದನ್ನು ಹೇಳಿರಿ ಎಂದರು.

೨. ಒಂದು ಕಾಲದಲ್ಲಿ ಭಾರತದ ಜನರು ಬಂಗಾರದ ಪಾತ್ರೆಗಳ ಬದಲು ಆತ್ಮಧನದ ಬಗ್ಗೆ ವಿಚಾರ ಮಾಡುತ್ತಿದ್ದರು !

ಅವರು ಮುಂದೆ ಮಾತನಾಡುತ್ತಾ, “ಈಗ ನಾನು ಭಾರತ ಬಡದೇಶ ಏಕಾಯಿತು ಎಂಬುದನ್ನು ಹೇಳುತ್ತೇನೆ ? ಭಾರತದಲ್ಲಿ ಎಂತಹ ಒಂದು ಕಾಲವಿತ್ತೆಂದರೆ, ಅಲ್ಲಿಯ ಜನರು ಬಂಗಾರದ ಪಾತ್ರೆಗಳಲ್ಲಿ ಭೋಜನ ಮಾಡುತ್ತಿದ್ದರು. ಯುಧಿಷ್ಠಿರ ಮಹಾರಾಜರು ಯಜ್ಞ ಮಾಡಿದಾಗ, ಅವರು ಪ್ರತಿದಿನ ೧ ಲಕ್ಷ ಜನರಿಗೆ ಭೋಜನವನ್ನು ಬಡಿಸುತ್ತಿದ್ದರು. ೧೦ ಸಾವಿರ ಸಾಧುಸಂತರು ಮತ್ತು ಬ್ರಾಹ್ಮಣರಿಗೆ ಬಂಗಾರದ ತಟ್ಟೆಯಲ್ಲಿ ಭೋಜವನ್ನು ಬಡಿಸಲಾಗುತ್ತಿತ್ತು. ನಂತರ ಅವರಿಗೆ ಕೈಜೋಡಿಸಿ, ‘ಭೋಜನದ ನಂತರ ಕೃಪೆ ಮಾಡಿ ಬಂಗಾರದ ತಟ್ಟೆಯನ್ನು ಸ್ವೀಕರಿಸಿ ತೆಗೆದುಕೊಂಡು ಹೋಗಿರಿ’, ಎಂದು ವಿನಂತಿಸಿಕೊಳ್ಳುತ್ತಿದ್ದರು. ಕೆಲವು ಜನರು ತಟ್ಟೆಯನ್ನು ತೆಗೆದುಕೊಂಡು ಹೋಗುತ್ತಿದ್ದರು ಮತ್ತು ಕೆಲವರು, ‘ನಾವು ಈ ಬಂಗಾರದ ತುಂಡನ್ನು ಸಂಭಾಳಿಸಬೇಕೋ ಅಥವಾ ನಮ್ಮ ಆತ್ಮಧನದ ವಿಚಾರ ಮಾಡಬೇಕೋ ?’, ಎಂದು ಕೇಳುತ್ತಿದ್ದರು ಮತ್ತು ಬಂಗಾರದ ತಟ್ಟೆಯನ್ನು ಅಲ್ಲಿಯೇ ಬಿಟ್ಟು ಹೋಗುತ್ತಿದ್ದರು, ಹೀಗಿತ್ತು ನಮ್ಮ ಭಾರತ ದೇಶ !

೩. ಅಮೇರಿಕದ ರಾಷ್ಟ್ರಾಧ್ಯಕ್ಷರಿಗೆ ಭಾರತೀಯ ಸಾಧುವಿನಲ್ಲಿ ಯೇಸುವಿನ ದರ್ಶನವಾಗುವುದು

ಭಾರತದ ಓರ್ವ ಸಾಧು ಸ್ವಾಮಿ ರಾಮತೀರ್ಥರು ಅಮೇರಿಕಗೆ ತಲುಪಿದಾಗ, ಅಲ್ಲಿನ ರಾಷ್ಟ್ರಾಧ್ಯಕ್ಷ ರುಜವೆಲ್ಟ್‌ರವರು ಅವರ ದರ್ಶನ ಪಡೆದು, “ಇಂದು ನನ್ನ ಜೀವನವು ಧನ್ಯವಾಯಿತು. ಇಲ್ಲಿಯವರೆಗೆ ನಾನು
ಕೇವಲ ಯೇಸು ಕ್ರಿಸ್ತನ ಬಗ್ಗೆ ಕೇಳಿದ್ದೆನು. ಇಂದು ಈ ಸಾಧುಗಳಲ್ಲಿ ನನಗೆ ಜೀವಂತ ಯೇಸು ಕಾಣಿಸುತ್ತಿದ್ದಾನೆ”, ಎಂದು ಹೇಳಿದರು.

೪. ಪರಕೀಯರು ಭಾರತದ ಮೇಲೆ ಆಕ್ರಮಣ ಮಾಡಿ, ಭಾರತವನ್ನು ಲೂಟಿ ಮಾಡಿ ಅದನ್ನು ಪರಾಧೀನ ಮಾಡುವುದು ಮತ್ತು ಸ್ವಾರ್ಥಾಂಧರು ಭಾರತದ ಆರ್ಥಿಕ ಸ್ಥಿತಿಯನ್ನು ಪೂರ್ಣ ಹದಗೆಡಿಸುವುದು

ಕಾಲವು ಬದಲಾಯಿತು. ವಿದೇಶಿ ಲೂಟಿಕೋರರು ದೇಶದ ಮೇಲೆ ಆಕ್ರಮಣ ಮಾಡಿದರು. ಭಾರತೀಯರಲ್ಲಿ ದುರ್ಬಲತೆ ಸೇರಿಕೊಂಡಿತು. ‘ಎಲ್ಲರಲ್ಲಿ ಈಶ್ವರನಿದ್ದಾನೆ’, ಎಂಬ ಭಾವದಿಂದ ಎಲ್ಲ ವಿದೇಶಿಯರನ್ನು ತಮ್ಮವರನ್ನಾಗಿ ಮಾಡಿಕೊಂಡರು; ಆದರೆ ವಿದೇಶಿ ಲೂಟಿಕೋರರು ಭಾರತದ ಎಲ್ಲ ಆಸ್ತಿ-ಪಾಸ್ತಿಗಳನ್ನು ಲಪಟಾಯಿಸಿದರು. ನಂತರ ಅಫಘಾನಿಸ್ತಾನದವರು ಬಂದರು, ಹೂಣರು ಬಂದರು, ಶಕರು ಬಂದರು, ಗ್ರೀಕರು (ಯುನಾನಿ) ಬಂದರು, ಫಿರಂಗಿಗಳು (ಆಂಗ್ಲರು) ಬಂದರು. ನೂರಾರು ವರ್ಷಗಳ ಕಾಲ ಭಾರತವು ಪರಾಧೀನವಾಗಿತ್ತು. ಸ್ವಾರ್ಥಾಂಧರು ಭಾರತದ ಆರ್ಥಿಕ ಸ್ಥಿತಿಯನ್ನು ಸಂಪೂರ್ಣ ಕೆಡಿಸಿದರು. ಸುಲಿಗೆಗಾರರು ಹೆಚ್ಚಾದರು, ಕಂಸ ಮತ್ತು ರಾವಣ ವೃತ್ತಿಗಳ ಪ್ರಭಾವವು ಹೆಚ್ಚಾಯಿತು. ಸಮಾಜದ ರಕ್ತವನ್ನು ಹೀರುವ ಈ ದುಷ್ಟರನ್ನು ಜನರು ಮರೆತರು, ಜನರು ದುರ್ಲಕ್ಷ ಮಾಡಿದರು. ಅವರು ತಮ್ಮ ಶಕ್ತಿಯುತ ಸಂಕಲ್ಪ ಶಕ್ತಿಯನ್ನು ಕಳೆದುಕೊಂಡರು. ಅವರು ತಮ್ಮ ದಿಟ್ಟತನ ಮತ್ತು ಪ್ರಾಣಶಕ್ತಿಯನ್ನು ಮರೆಯುತ್ತಾ ಹೋದರು. ಆಧ್ಯಾತ್ಮಿಕತೆ, ವೇದ, ಉಪನಿಷತ್ತುಗಳು ಮತ್ತು ಅಮೃತೋಪದೇಶವು ಗುಡ್ಡ-ಗುಹೆಗಳಿಗಷ್ಟೇ ಸೀಮಿತವಾಗತೊಡಗಿದವು. ಜನರು ದಿಟ್ಟತನ, ಸಾಹಸ, ಪ್ರಸನ್ನತೆ, ಮತ್ತು ದಕ್ಷತೆಯನ್ನು ಮರೆಯತೊಡಗಿದರು. ‘ಭಯ, ಅಸಹಾಯಕತೆ, ಮುಖಸ್ತುತಿ ಮಾಡುವುದು, ಪಲಾಯನವಾದ’ ಈ ರೀತಿಯ ನಿಲುವಿನಿಂದ ಸಮಾಜವು ಹಿಂದೆ ಉಳಿಯಿತು. ಸುಲಿಗೆ ಮಾಡುವವರು ಇದರ ದುರುಪಯೋಗ ಮಾಡಿಕೊಂಡರು.

೫. ಭಾರತದಲ್ಲಿ ಅಮೇರಿಕಗಿಂತ ಸುಖ-ಸೌಲಭ್ಯಗಳು ಕಡಿಮೆ ಇದ್ದರೂ ಅದು ಆಧ್ಯಾತ್ಮಿಕ ದೃಷ್ಟಿಯಿಂದ ಅನೇಕ ಪಟ್ಟು ಶ್ರೇಷ್ಠವಾಗಿದೆ

ಭಾರತದ ಜನಸಂಖ್ಯೆಯು ಅಮೇರಿಕದ ಜನಸಂಖ್ಯೆಗಿಂತ ಮೂರು ಪಟ್ಟು ಹೆಚ್ಚಿದೆ. ಈ ರೀತಿ ನೋಡಿದರೆ ಅಮೇರಿಕದಲ್ಲಿ ಭಾರತಕ್ಕಿಂತ ಸುಮಾರು ಒಂಬತ್ತುವರೆ ಪಟ್ಟು ಹೆಚ್ಚು ಐಹಿಕ ಸುಖ-ಸೌಲಭ್ಯಗಳಿವೆ, ಆದರೂ ನಮಗೆ ದುಃಖವಿಲ್ಲ. ನಿಮ್ಮಲ್ಲಿ ಇಷ್ಟು ಸೌಲಭ್ಯಗಳಿವೆ; ಆದರೆ ಭಾರತವು ಆಧ್ಯಾತ್ಮಿಕ ಸುಪುತ್ರರ ಪ್ರಸಾದದಿಂದ ಪ್ರೇಮ, ಸಹನಶಕ್ತಿ, ಸಹಾನುಭೂತಿ, ಸ್ನೇಹ, ಸದ್ಭಾವನೆ ಮತ್ತು ಸಾಮಾಜಿಕ ಜೀವನದಲ್ಲಿ ನಿಮಗಿಂತ ಇನ್ನೂ ಅನೇಕ ಪಟ್ಟು ಶ್ರೇಷ್ಠವಾಗಿದೆ. ಸಿನೆಮಾ ಮತ್ತು ದೂರಚಿತ್ರವಾಣಿಗಳ ಮಾಧ್ಯಮದಿಂದ ಪಾಶ್ಚಾತ್ಯ ದೇಶಗಳ ಕಸವು ಭಾರತಕ್ಕೆ ಬರುತ್ತಿದೆ, ಆದರೂ ಆಧ್ಯಾತ್ಮಿಕ ಸುಗಂಧ, ಹೃದಯದ ಶಾಂತಿ (ಮನಃಶಾಂತಿ) ಯಾರಿಗಾದರೂ ಬೇಕೆಂದೆನಿಸಿದರೆ, ಅವರಿಗೆ ಅದು ಭಾರತದಿಂದಲೇ ದೊರಕುವುದು. (ಆಧಾರ : ಋಷಿ ಪ್ರಸಾದ, ಮೇ ೨೦೦೦)