ಹಂತಕರ ಹೆಸರು ಹೇಳಲು ಪೊಲೀಸ್ ಮತ್ತು ಗೃಹ ಸಚಿವರಿಂದ ಮೀನಾಮೇಶ !
ಬೆಂಗಳೂರು – ಇತ್ತೀಚೆಗೆ ಮಹಾಲಕ್ಷ್ಮಿ ಎಂಬ 29 ವರ್ಷದ ಯುವತಿಯನ್ನು ಬರ್ಬರವಾಗಿ ಹತ್ಯೆಗೈದು ಆಕೆಯ ದೇಹದ 20 ತುಂಡುಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ಇದೀಗ ಈ ಸಂಬಂಧ ಮಹಿಳೆಯ ಪತಿ ಮಹತ್ವದ ಹೇಳಿಕೆ ನೀಡಿದ್ದಾರೆ. ಕಳೆದ 9 ತಿಂಗಳಿಂದ ಇಬ್ಬರೂ ಬೇರೆಯಾಗಿದ್ದರು. ನಗರದ ವೈಯಾಲಿಕಾವಲ್ ಪ್ರದೇಶದಲ್ಲಿ ಮಹಾಲಕ್ಷ್ಮಿ ಒಂಟಿಯಾಗಿ ವಾಸಿಸುತ್ತಿದ್ದರು ಎಂದು ಪತಿ ಹೇಮಂತ್ ದಾಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಹಾಲಕ್ಷ್ಮಿಯ ಪ್ರಿಯಕರ ಅಶ್ರಫ್ ಅವಳನ್ನು ಕೊಂದಿದ್ದಾನೆ ಎಂದು ಖಚಿತವಾಗಿದೆ. ಮಹಾಲಕ್ಷ್ಮಿ ಅಶ್ರಫ್ ಜೊತೆ ಸಂಬಂಧ ಹೊಂದಿದ್ದಳು.
ದಾಸ್ ಮಾತು ಮುಂದುವರೆಸಿ, ಅಶ್ರಫ್ ಉತ್ತರಾಖಂಡ ರಾಜ್ಯದವನಾಗಿದ್ದಾನೆ. ಅವನ ವಿರುದ್ಧ ಕೆಲವು ತಿಂಗಳ ಹಿಂದೆ ಬೆಂಗಳೂರು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿತ್ತು. ಇದಾದ ನಂತರ ಬೆಂಗಳೂರಿಗೆ ಬರುವುದನ್ನು ನಿರ್ಬಂಧಿಸಲಾಗಿತ್ತು; ಆದರೆ ನಂತರ ಎಲ್ಲಿಗೆ ಹೋದ?, ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು ಪೊಲೀಸರ ಮತ್ತು ಗೃಹ ಸಚಿವರ ಪಾತ್ರ ಅನುಮಾನಾಸ್ಪದ !
‘ಸನಾತನ ಪ್ರಭಾತ’ವು ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ ಇವರನ್ನು ಈ ಕುರಿತು ಸಂಪರ್ಕಿಸಿದಾಗ ಅವರು ಈ ಬಗ್ಗೆ ಉತ್ತರಿಸಲು ನಿರಾಕರಿಸಿದರು. ನಾವು ಪ್ರಮುಖ ಆರೋಪಿಯನ್ನು ಗುರುತಿಸಿದ್ದೇವೆ ಮತ್ತು ಆತನಿಗಾಗಿ ಹುಡುಕಾಟ ಆರಂಭಿಸಿದ್ದೇವೆ ಎಂದು ಅವರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದರು; ಆದರೆ ಗುರುತನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಆರೋಪಿ ಬೇರೆ ರಾಜ್ಯದವನಾಗಿದ್ದಾನೆ ಎಂದು ಹೇಳಿದರು.
ಗೃಹ ಸಚಿವ ಜಿ. ಪರಮೇಶ್ವರ ಮಾತನಾಡಿ, ಪೊಲೀಸರು ಅಪರಾಧದ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಯನ್ನು ಶೀಘ್ರವೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹೇಳಿದರು.
ಏನಿದು ಪ್ರಕರಣ ?
ಹೇಮಂತ್ ದಾಸ್ ಮತ್ತು ಮಹಾಲಕ್ಷ್ಮಿ ಮದುವೆಯಾದ ನಂತರ 6 ವರ್ಷಗಳ ಕಾಲ ಒಟ್ಟಿಗೆ ಇದ್ದರು. ಅವರಿಗೆ ಒಬ್ಬ ಮಗಳೂ ಇದ್ದಾಳೆ. ಇಬ್ಬರಲ್ಲಿ ಹೊಂದಾಣಿಕೆ ಆಗದೇ ಇದ್ದರಿಂದ 9 ತಿಂಗಳ ಹಿಂದೆಯೇ ಪ್ರತ್ಯೇಕವಾಗಿ ವಾಸ ಆರಂಭಿಸಿದ್ದರು. ಮಹಾಲಕ್ಷ್ಮಿ ಉತ್ತರಾಖಂಡದ ಅಶ್ರಫ್ ಎಂಬ ಮುಸ್ಲಿಂನನ್ನು ಪ್ರೀತಿಸುತ್ತಿದ್ದಳು. ಹೇಮಂತ ದಾಸ್ ಮೊಬೈಲ್ ಫೋನ್ ಮಾರಾಟ ಮಾಡುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರೆ, ಮಹಾಲಕ್ಷ್ಮಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು.
ಸೆಪ್ಟೆಂಬರ್ 20 ರಂದು ಮಹಾಲಕ್ಷ್ಮಿ ಅವರ ಮೃತ ದೇಹವು ಅವರ ನಿವಾಸದ ರೆಫ್ರಿಜರೇಟರ್‌ನಲ್ಲಿ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ದೇಹವನ್ನು 20 ತುಂಡುಗಳಾಗಿ ಕತ್ತರಿಸಲಾಗಿತ್ತು. ಮನೆಯ ಹೊರಗೆ ದುರ್ವಾಸನೆ ಹರಡಿದ ಹಿನ್ನೆಲೆಯಲ್ಲಿ ನೆರೆಹೊರೆಯವರು ಮಹಾಲಕ್ಷ್ಮಿ ತಾಯಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ವಿಷಯ ಬೆಳಕಿಗೆ ಬಂದಿದೆ.