ಸರಕಾರವು ಮಠ ಮತ್ತು ದೇವಸ್ಥಾನಗಳನ್ನು ದತ್ತಿ ಇಲಾಖೆಯ ಅಧಿಕಾರದಿಂದ ಮುಕ್ತಗೊಳಿಸಬೇಕು ! – ತೀರ್ಥಕ್ಷೇತ್ರ ‘ಮಂತ್ರಾಲಯ’ದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀ

ರಾಯಚೂರು – ತಿರುಪತಿ ಬಾಲಾಜಿ ದೇವಸ್ಥಾನದಲ್ಲಿನ ಲಡ್ಡುವಿನ ಪ್ರಕರಣದಲ್ಲಿ ಆಂದ್ರಪ್ರದೇಶದ ತೀರ್ಥಕ್ಷೇತ್ರ ‘ಮಂತ್ರಾಲಯ’ದ ಮಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀ ಇವರು, ಶ್ರೀ ತಿರುಪತಿ ದೇವಸ್ಥಾನ ಹಿಂದುಗಳ ಪ್ರಮುಖ ಧಾರ್ಮಿಕ ಸ್ಥಾನವಾಗಿದ್ದು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಉಪಯೋಗಿಸಿರುವುದನ್ನು ಸರಕಾರ ಕುಲಂಕುಶವಾಗಿ ವಿಚಾರಣೆ ನಡೆಸಬೇಕು. ಇದು ಯಾರ ಬೇಜವಾಬ್ದಾರಿಯಿಂದ ಆಗಿದೆ ? ಎಂದಿನಿಂದ ನಡೆಯುತ್ತಿದೆ ? ಮುಂತಾದ ಸಂಪೂರ್ಣ ವಿಚಾರಣೆ ನಡೆಯಬೇಕು. ಅನ್ಯಾಯ ಮಾಡಿದವರಿಗೆ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಬೇಕು. ಇದರ ಜೊತೆಗೆ ಸರಕಾರವು ಮಠ ಮತ್ತು ದೇವಸ್ಥಾನಗಳನ್ನು ದತ್ತಿ ಇಲಾಖೆಯ ಅಧಿಕಾರದಿಂದ ಮುಕ್ತಗೊಳಿಸಬೇಕು. ಈ ಕುರಿತು ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಎಂದು ಅವರು ಆಗ್ರಹಿಸಿದ್ದಾರೆ.
ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀ ಇವರು ಮಾತು ಮುಂದುವರಿಸಿ, ಮಠ ಮತ್ತು ದೇವಸ್ಥಾನಗಳು ಪ್ರತಿಯೊಂದು ಪ್ರಾಂತದಲ್ಲಿನ ಭಕ್ತರ ಶ್ರದ್ಧಾ ಕೇಂದ್ರ ಆಗಿದ್ದು ಅವುಗಳ ಪರಂಪರೆಯೊಂದಿಗೆ ಸಂಬಂಧವಿದೆ. ಈ ರಾಷ್ಟ್ರದ ರಾಜಧಾನಿ ಅಥವಾ ರಾಜ್ಯದ ರಾಜಧಾನಿಯಲ್ಲಿ ವಾಸಿಸುವರು ನಡೆಸಲು ಸಾಧ್ಯವಿಲ್ಲ. ದೇವಸ್ಥಾನದ ಉಸ್ತುವಾರಿಯಲ್ಲಿ ಸರಕಾರ ಕೈಯಾಡಿಸುವುದು ಯೋಗ್ಯವಲ್ಲ. ಇಲ್ಲಿಯ ಪಾವಿತ್ರ್ಯ ಮತ್ತು ಪರಂಪರೆ ಬದಲಾಯಿಸುವ ಅಧಿಕಾರ ಸರಕಾರಕ್ಕೆ ಇಲ್ಲ ಎಂದು ಹೇಳಿದರು.

ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸುವುದಕ್ಕಾಗಿ ರಾಜ್ಯಗಳಲ್ಲ, ಕೇಂದ್ರ ಸರಕಾರ ನಿರ್ಣಯ ತೆಗೆದುಕೊಳ್ಳಬೇಕು !(ಅಂತೆ) – ಸಚಿವ ರಾಮಲಿಂಗ ರೆಡ್ಡಿ

ನಂಬುವಂತೆಸುಳ್ಳನ್ನು ಹೇಳಿ, ಈ ಪ್ರವೃತ್ತಿಯ ಕಾಂಗ್ರೆಸ್ ಸರಕಾರದ ಸಚಿವ ! ರೆಡ್ಡಿ ಹಿಂದುಗಳನ್ನು ಮೂರ್ಖರೆಂದು ತಿಳಿದಿದ್ದಾರೆ, ಹೀಗೆ ಅವರಿಗೆ ಅನಿಸಿದೆಯೇ ? ದೇವಸ್ಥಾನಗಳು ಕೇಂದ್ರದಲ್ಲ, ಅದು ರಾಜ್ಯ ಸರಕಾರದ ವಶದಲ್ಲಿರುವುದು ಮತ್ತು ತೆಗೆದುಕೊಂಡಿದೆ. ದತ್ತಿ ಇಲಾಖೆ ರಾಜ್ಯದ ವ್ಯಾಪ್ತಿಯಲ್ಲಿ ಬರುವುದು ಮತ್ತು ದೇವಸ್ಥಾನಗಳು ರಾಜ್ಯ ಸರಕಾರದ ಆಧೀನದಲ್ಲಿ ಇರುವುದು ಇದು ಸ್ಪಷ್ಟವಾಗಿದೆ !

ಸುಬುಧೇಂದ್ರ ಶ್ರೀಗಳ ಹೇಳಿಕೆಯ ಕುರಿತು ಸಚಿವ ರಾಮಲಿಂಗಾ ರೆಡ್ಡಿ ಇವರು, ರಾಜ್ಯದಲ್ಲಿ ೧ ಲಕ್ಷ ೮೦ ಸಾವಿರ ದೇವಸ್ಥಾನಗಳು ಇವೆ. ಇದರಲ್ಲಿನ ೩೪ ಸಾವಿರ ದೇವಸ್ಥಾನಗಳು ದತ್ತಿ ಇಲಾಖೆಯ ಆಧೀನದಲ್ಲಿರುವುದು. ಅದು ಇಂದಿನಿಂದ ಅಲ್ಲ, ಅದು ಬ್ರಿಟಿಷರ ಕಾಲದಿಂದ ಇರುವುದು. ಮಠಗಳು ಯಾವುದೇ ಸರಕಾರದ ಆಧೀನದಲ್ಲಿ ಇಲ್ಲ. ದೇವಸ್ಥಾನಗಳು ದತ್ತಿ ಇಲಾಖೆಯ ಆಡಳಿತದಿಂದ ಮುಕ್ತಗೊಳಿಸಿ ಸ್ವತಂತ್ರಗೊಳಿಸಬೇಕು, ಇದು ರಾಜ್ಯ ಸರಕಾರದ ಕೆಲಸವಲ್ಲ ಅದಕ್ಕಾಗಿ ಕೇಂದ್ರ ಸರಕಾರವೇ ನಿರ್ಣಯ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

ದೇಶದಲ್ಲಿನ ಸರಕಾರಿಕರಣ ಆಗಿರುವ ಎಲ್ಲಾ ದೇವಸ್ಥಾನಗಳು ಮುಕ್ತಗೊಳಿಸುವುದಕ್ಕಾಗಿ ಎಲ್ಲಾ ಸಂತರು ಹಾಗೂ ಧಾರ್ಮಿಕ ಸಂಘಟನೆಗಳು, ಸಂಸ್ಥೆಗಳು, ಸಂಪ್ರದಾಯ ಇವರು ಸಂಘಟಿತರಾಗಿ ಸರಕಾರದ ಮೇಲೆ ಒತ್ತಡ ತರಬೇಕು. ಹಾಗೂ ದೇವಸ್ಥಾನ ನಡೆಸಲು ವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕು !