ತಮಿಳುನಾಡಿನ ಮುಜರಾಯಿ ಇಲಾಖೆಯಿಂದ ೪೫ ದೇವಸ್ಥಾನಗಳ ಮೇಲೆ ಅಕ್ರಮವಾಗಿ ನಿಯಂತ್ರಣ !

‘ಇಂಡಿಕ್ ಕಲೆಕ್ಟಿವ್ ಟ್ರಸ್ಟ್’ನ ಶ್ರೀ. ಟಿ.ಆರ್. ರಮೇಶರವರು ಮದ್ರಾಸ್ ಉಚ್ಚ ನ್ಯಾಯಾಲಯಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ (‘ಎಚ್.ಆರ್. ಅಂಡ್ ಸಿ.ಇ.’ಯ) ಅಧಿಕಾರಿಗಳು ತಮಿಳುನಾಡಿನ ೪೫ ದೇವಸ್ಥಾನಗಳನ್ನು ಅಕ್ರಮವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬಾರಾಬಂಕಿ (ಉತ್ತರಪ್ರದೇಶ)ಯಲಿ ತನ್ನ ೧೬ ವರ್ಷದ ಮಗಳ ಮೇಲೆ ಲೈಂಗಿಕ ಅತ್ಯಾಚಾರಗೈದ ಮತಾಂಧ

ಇಲ್ಲಿಯ ಫತೇಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ತನ್ನ ೧೬ ವರ್ಷದ ಬಾಲಕಿಯ ಮೇಲೆ ಮತಾಂಧನು ನಿರಂತರ ಅತ್ಯಾಚಾರ ಮಾಡಿರುವ ಹಾಗೂ ಇದರಿಂದ ಆಕೆ ಗರ್ಭ ಧರಿಸಿದ ಘಟನೆ ನಡೆದಿದೆ. ಸಂತ್ರಸ್ತ ಬಾಲಕಿ ತನ್ನ ತಂದೆ ಗುಲಾಮ್ ರಸೂಲ್ ವಿರುದ್ಧ ದೂರನ್ನು ದಾಖಲಿಸಿದ್ದಳು. ಆಕೆ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದ್ದಾಳೆ.

ಸಾಧಕ-ರೋಗಿಗಳಿಗೆ ಚಿಕಿತ್ಸೆ ನೀಡಲು ಸನಾತನ ಆಶ್ರಮಗಳಲ್ಲಿ ಮರ್ದನ, ಬಿಂದುಒತ್ತಡ, ಪಂಚಕರ್ಮ, ಆಯುರ್ವೇದೀಯ ನ್ಯೂರೋಥೆರಪಿ, ಯೋಗಾಸನ ಈ ವಿಷಯಗಳಲ್ಲಿನ ತಜ್ಞರ ಆವಶ್ಯಕತೆ !

ಈ ಸಾಧಕರಿಗೆ ಉಪಚಾರ ಮಾಡಲು ಸನಾತನದ ರಾಮನಾಥಿ ಮತ್ತು ದೇವದ ಆಶ್ರಮಗಳಲ್ಲಿ ‘ಫಿಸಿಯೋ ಥೆರಪಿಸ್ಟ್’ (ಮರ್ದನ (ಮಾಲಿಶ್), ಬಿಂದು ಒತ್ತಡ, ಪಂಚಕರ್ಮ, ಆಯುರ್ವೇದೀಯ ನ್ಯೂರೋಥೆರೆಪಿ, ಯೋಗಾಸನಗಳು ಈ ವಿಷಯಗಳಲ್ಲಿನ ತಜ್ಞರ) ಆವಶ್ಯಕತೆಯಿದೆ. ಈ ಸೇವೆಯನ್ನು ಪೂರ್ಣವೇಳೆ ಮಾಡುವುದು ಸಾಧ್ಯವಿಲ್ಲದಿದ್ದಲ್ಲಿ ವಾರದಲ್ಲಿನ ಕೆಲವು ದಿನಗಳು ಅಥವಾ ದಿನದಲ್ಲಿ ಕೆಲವು ಗಂಟೆಗಳ ಕಾಲ ಈ ಸೇವೆಯನ್ನು ಮಾಡಬಹುದು.

ಚೈತನ್ಯಮಯ ರಾಮನಾಥಿ ಆಶ್ರಮದಲ್ಲಿ ಸೇವಾನಂದವನ್ನು ಅನುಭವಿಸುವ ಅಮೂಲ್ಯ ಅವಕಾಶ !

ಸನಾತನದ ರಾಮನಾಥಿ ಆಶ್ರಮವೆಂದರೆ ಚೈತನ್ಯದ ಸ್ರೋತ ! ರಾಮನಾಥಿ ಆಶ್ರಮದಲ್ಲಿನ ಅನ್ನಪೂರ್ಣಾ ಕಕ್ಷೆಯಲ್ಲಿ (ಅಡುಗೆ ಮನೆ) ವಿವಿಧ ಸೇವೆಗಳಿಗಾಗಿ ಸಾಧಕರ ಸಂಖ್ಯೆಯು ಕಡಿಮೆ ಇದೆ. ಈ ಸೇವೆಗಳನ್ನು ಮಾಡಲು ಶಾರೀರಿಕ ಕ್ಷಮತೆಯಿರುವ ಸ್ತ್ರೀ ಮತ್ತು ಪುರುಷ ಸಾಧಕರ ಆವಶ್ಯಕತೆಯಿದೆ. ಆಸಕ್ತಿಯುಕ್ತ ಸಾಧಕರು ಪೂರ್ಣವೇಳೆ ಅಥವಾ ಕೆಲವು ಅವಧಿಗಾಗಿ ಆಶ್ರಮದಲ್ಲಿದ್ದು ಈ ಅವಕಾಶದ ಲಾಭವನ್ನು ಪಡೆಯಬಹುದು.

ಉದ್ಯಮಿಗಳಿಗೆ ಸವಿನಯ ವಿನಂತಿ !

ವ್ಯಾಪಾರಿ ಕೆಲಸಕಾರ್ಯದಲ್ಲಿ ವ್ಯಸ್ತವಾಗಿರುವುದರಿಂದ ಅನೇಕ ಉದ್ಯಮಿಗಳಿಗೆ ಪ್ರತ್ಯಕ್ಷ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಮೇಲಿನ ಎರಡೂ ಉದ್ದೇಶಗಳು ಪೂರ್ಣವಾಗಲು ಉದ್ಯಮಿಗಳು ‘ಸನಾತನ ಪಂಚಾಂಗ’ದಲ್ಲಿನ ಜಾಹೀರಾತುಗಳ ಸ್ಥಳದಲ್ಲಿ ಕೇವಲ ತಮ್ಮ ಜಾಹೀರಾತುಗಳನ್ನು ಹಾಕಿ ಪಂಚಾಂಗವನ್ನು ವಿತರಿಸಬಹುದು.

ಸಾಧಕರಿಗಾಗಿ ಸೂಚನೆ ಮತ್ತು ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

‘ಮನೆ ಅಥವಾ ಕಾರ್ಯಾಲಯ ಇವುಗಳಿಗಾಗಿ ಎಷ್ಟು ವ್ಯಾಟ್‌ನ ಸೌರಯಂತ್ರವನ್ನು ಅಳವಡಿಸಬೇಕು ? ಅಲ್ಲಿ ಎಷ್ಟು ಪವರ್‌ನ ಬಳಕೆಯಾಗುತ್ತದೆ ?, ವಿದ್ಯುತ್ ಯಂತ್ರವು ಇಲ್ಲದಿದ್ದರೆ ಕನಿಷ್ಠ ಎಷ್ಟು ಪವರ್‌ನ ಆವಶ್ಯಕತೆಯಿದೆ ?’, ಮುಂತಾದ ಬಗ್ಗೆ ಮೊದಲು ಅಭ್ಯಾಸ ಮಾಡಬೇಕು. ಇದಕ್ಕಾಗಿ ಅಂತರ್ಜಾಲದ ಉಪಯೋಗ ಮಾಡಬಹುದು.

ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ವಿನಂತಿ

ಜಿ. ವೈ. ಶಿತೋಳೆ ಎಂಬ ಯಾವುದೇ ವ್ಯಕ್ತಿಯು ಸನಾತನ ಸಂಸ್ಥೆಯ ಆಶ್ರಮದಲ್ಲಿ ವಾಸಿಸುವುದಿಲ್ಲ ಮತ್ತು ಸನಾತನ ಸಂಸ್ಥೆಯು ಅಂತಹ ಯಾವುದೇ ವ್ಯಕ್ತಿಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಈ ವ್ಯಕ್ತಿಯು ಸನಾತನ ಸಂಸ್ಥೆಯ ಹೆಸರನ್ನು ಬಳಸಿಕೊಂಡು ಇತರರನ್ನು ದಾರಿ ತಪ್ಪಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದ್ದರಿಂದ ಸಾಧಕರು, ವಾಚಕರು ಮತ್ತು ಹಿತಚಿಂತಕರು ಈ ವ್ಯಕ್ತಿಯ ಬಗ್ಗೆ ಎಚ್ಚರದಿಂದಿರಬೇಕು.

ಸಾಧಕರಿಗೆ ಸೂಚನೆ ಹಾಗೆಯೇ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ವಿನಂತಿ !

ಆಪತ್ಕಾಲದಲ್ಲಿ ಪೆಟ್ರೋಲ್, ಡೀಸೆಲ್ ಮುಂತಾದ ಇಂಧನಗಳ ಕೊರತೆಯಾಗಬಹುದು. ಇನ್ನೂ ಮುಂದೆ ಈ ಇಂಧನಗಳೂ ಸಿಗಲಾರದು. ಆಗ ಇಂಧನದಿಂದ ನಡೆಯುವ ದ್ವಿಚಕ್ರ ಮತ್ತು ಚತುಷ್ಚಕ್ರ ವಾಹನಗಳು ನಿರುಪಯುಕ್ತವಾಗುವವು. ಇಂತಹ ಸಮಯದಲ್ಲಿ ಪ್ರಯಾಣ ಮಾಡುವುದು, ರೋಗಿಗಳನ್ನು ವೈದ್ಯರ ಬಳಿ ಕರೆದುಕೊಂಡು ಹೋಗುವುದು, ಸಾಮಾನುಗಳನ್ನು ತರುವುದು ಮುಂತಾದವುಗಳಿಗೆ ಸಾರಿಗೆಯ ಪಾರಂಪಾರಿಕ ಸಾಧನಗಳನ್ನು (ಉದಾ. ಎತ್ತಿನಗಾಡಿ, ಕುದುರೆ ಗಾಡಿ ಇವುಗಳನ್ನು) ಉಪಯೋಗಿಸಬೇಕಾಗುವುದು.

ಸಾಧಕರಿಗೆ ಸೂಚನೆ, ಹಾಗೆಯೇ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ವಿನಂತಿ !

ಮುಂಬರುವ ಕಾಲದಲ್ಲಿ ಎಲ್ಲ ಆಶ್ರಮ ಮತ್ತು ಸೇವಾಕೇಂದ್ರಗಳಿಗೆ ಎತ್ತಿನಗಾಡಿ ಮತ್ತು ಕುದುರೆಗಾಡಿಗಳ ಆವಶ್ಯಕತೆಗಳು ಭಾಸವಾಗಲಿದೆ. ಇಂದಿಗೂ ಗ್ರಾಮೀಣ ಪ್ರದೇಶದ ಕೆಲವು ರೈತರು ಎತ್ತಿನಗಾಡಿಗಳನ್ನು ಬಳಸುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಗಾಡಿಗಳನ್ನು ತಯಾರಿಸಲಾಗುತ್ತದೆ. ತಮ್ಮ ಪ್ರದೇಶದಲ್ಲಿನ ಎತ್ತಿನಗಾಡಿ ಅಥವಾ ಕುದುರೆಗಾಡಿ ತಯಾರಿಸುವವರ ಮಾಹಿತಿಯನ್ನು ಸ್ಥಳೀಯ ಸಾಧಕರಿಗೆ ನೀಡಿರಿ.

ನೇಪಾಳಿ ಹಿಂದೂಗಳು ದೇಶದಾದ್ಯಂತ ಚೀನಾವಿರೋಧಿ ಆಂದೋಲನವನ್ನು ನಡೆಸಬೇಕು !

ನೇಪಾಳದ ಗಡಿಯಲ್ಲಿರುವ ಹುಮಲಾ ಗ್ರಾಮದಲ್ಲಿ ಚೀನಾ ನಿರ್ಮಿಸಿದ ೯ ಕಟ್ಟಡಗಳ ವಿರುದ್ಧ ನೇಪಾಳಿ ನಾಗರಿಕರು ಚೀನಾದ ರಾಯಭಾರಿ ಕಚೇರಿಯ ಹೊರಗೆ ಆಂದೋಲನ ನಡೆಸಿದರು. ‘ಇದು ನೇಪಾಳದ ಭೂಪ್ರದೇಶವನ್ನು ವಶಪಡಿಸಿಕೊಳ್ಳಲು ಚೀನಾ ನಡೆಸಿದ ಕುತಂತ್ರವಾಗಿದೆ’ ಎಂದು ಆರೋಪಿಸಿದರು.