ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ವಿನಂತಿ

ಜಿ. ವೈ. ಶಿತೋಳೆ ಹೆಸರಿನಲ್ಲಿ ಸನಾತನ ಸಂಸ್ಥೆಯ ವಿಳಾಸವನ್ನು ನೀಡಿ ಸುಳ್ಳು ದೂರು ನೀಡುವ ವ್ಯಕ್ತಿಯ ಬಗ್ಗೆ ಎಚ್ಚರ !

ಸನಾತನ ಸಂಸ್ಥೆಯೊಂದಿಗೆ ಯಾವುದೇ ಸಂಬಂಧವಿಲ್ಲದ ಜಿ.ವೈ. ಶಿತೋಳೆ ಹೆಸರಿನ ಅಪರಿಚಿತ ವ್ಯಕ್ತಿಯೊಬ್ಬನು ಒಂದು ಮಹಾವಿದ್ಯಾಲಯದ ವಿರುದ್ಧ ಬೆಂಗಳೂರಿನಲ್ಲಿರುವ ‘ನ್ಯಾಕ್’ನ (ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ) ಕಚೇರಿಗೆ ದೂರನ್ನು ದಾಖಲಿಸಿದ್ದಾನೆ. ಈ ದೂರು ನೀಡುವಾಗ, ವ್ಯಕ್ತಿಯು ಗೋವಾದ ರಾಮನಾಥಿಯಲ್ಲಿ ಸನಾತನ ಸಂಸ್ಥೆಯ ಆಶ್ರಮದ ವಿಳಾಸವನ್ನು ನೀಡಿದ್ದಾನೆ ಎಂದು ತಿಳಿದುಬಂದಿದೆ. ‘ನ್ಯಾಕ್’ನ ಕಚೇರಿಯಿಂದ ಸನಾತನ ಸಂಸ್ಥೆಯ ಹೆಸರಿನಲ್ಲಿ ಪತ್ರ ಬಂದ ನಂತರ ಇದು ನಮಗೆ ತಿಳಿಯಿತು.

ಜಿ. ವೈ. ಶಿತೋಳೆ ಎಂಬ ಯಾವುದೇ ವ್ಯಕ್ತಿಯು ಸನಾತನ ಸಂಸ್ಥೆಯ ಆಶ್ರಮದಲ್ಲಿ ವಾಸಿಸುವುದಿಲ್ಲ ಮತ್ತು ಸನಾತನ ಸಂಸ್ಥೆಯು ಅಂತಹ ಯಾವುದೇ ವ್ಯಕ್ತಿಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಈ ವ್ಯಕ್ತಿಯು ಸನಾತನ ಸಂಸ್ಥೆಯ ಹೆಸರನ್ನು ಬಳಸಿಕೊಂಡು ಇತರರನ್ನು ದಾರಿ ತಪ್ಪಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದ್ದರಿಂದ ಸಾಧಕರು, ವಾಚಕರು ಮತ್ತು ಹಿತಚಿಂತಕರು ಈ ವ್ಯಕ್ತಿಯ ಬಗ್ಗೆ ಎಚ್ಚರದಿಂದಿರಬೇಕು. ಅಲ್ಲದೇ, ಅಂತಹ ಹೆಸರಿನ ಯಾವುದೇ ವ್ಯಕ್ತಿಯು ಸನಾತನ ಸಂಸ್ಥೆಯನ್ನು ಉಲ್ಲೇಖಿಸಿ ಯಾವುದೇ ರೀತಿಯ ವಹಿವಾಟು ನಡೆಸುತ್ತಿದ್ದರೆ, ಸಂಬಂಧಪಟ್ಟವರು ಕಾನೂನು ಕ್ರಮ ತೆಗೆದುಕೊಳ್ಳಬೇಕು. ಅಲ್ಲದೇ, ಈ ನಿಟ್ಟಿನಲ್ಲಿ ಯಾವುದೇ ಮಾಹಿತಿ ಲಭ್ಯವಿದ್ದರೆ, ದಯವಿಟ್ಟು ಅದರ ಬಗ್ಗೆ ಈ ಮುಂದಿನ ವಿಳಾಸಕ್ಕೆ ತಕ್ಷಣ ಸಂಪರ್ಕಿಸಬೇಕೆಂದು ವಿನಂತಿ.

ಹೆಸರು ಮತ್ತು ಸಂಪರ್ಕ ಸಂಖ್ಯೆ

ಶ್ರೀ. ವೀರೇಂದ್ರ ಮರಾಠೆ, ದೂ. ಕ್ರ. (0823) 12312334

ಗಣಕೀಯ ವಿಳಾಸ :  [email protected]

ಅಂಚೆ ವಿಳಾಸ : ಶ್ರೀ. ವೀರೇಂದ್ರ ಮರಾಠೆ, C/o ‘ಸನಾತನ ಆಶ್ರಮ’, 24/B, ರಾಮನಾಥಿ, ಬಂಡಿವಾಡೆ, ಫೋಂಡಾ, ಗೋವಾ. ಪಿನ್ – 403401

– ಶ್ರೀ. ವೀರೇಂದ್ರ ಮರಾಠೆ, ಕಾರ್ಯನಿರ್ವಾಹಕ ವಿಶ್ವಸ್ಥರು, ಸನಾತನ ಸಂಸ್ಥೆ.