ತಮಿಳುನಾಡಿನ ಮುಜರಾಯಿ ಇಲಾಖೆಯಿಂದ ೪೫ ದೇವಸ್ಥಾನಗಳ ಮೇಲೆ ಅಕ್ರಮವಾಗಿ ನಿಯಂತ್ರಣ !

‘ಇಂಡಿಕ್ ಕಲೆಕ್ಟಿವ್ ಟ್ರಸ್ಟ್’ನ ಟಿ.ಆರ್. ರಮೇಶ ಇವರಿಂದ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ

ಹಿಂದೂಗಳ ದೇವಸ್ಥಾನಗಳನ್ನು ಅಕ್ರಮವಾಗಿ ನಿಯಂತ್ರಣದಲ್ಲಿಟ್ಟುಕೊಳ್ಳುವ ಸರಕಾರವು ಇತರ ಪಂಥಗಳ ಪ್ರಾರ್ಥನಾ ಸ್ಥಳಗಳನ್ನು ತನ್ನ ನಿಯಂತ್ರಣಕ್ಕೆ ಪಡೆಯುವ ಧೈರ್ಯ ತೋರಿಸುವುದೇನು ? ಇದು ಹಿಂದೂಗಳ ಸಹಿಷ್ಣುತನದ ಪರಿಣಾಮವಾಗಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು !

ಚೆನ್ನೈ – ‘ಇಂಡಿಕ್ ಕಲೆಕ್ಟಿವ್ ಟ್ರಸ್ಟ್’ನ ಶ್ರೀ. ಟಿ.ಆರ್. ರಮೇಶರವರು ಮದ್ರಾಸ್ ಉಚ್ಚ ನ್ಯಾಯಾಲಯಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ (‘ಎಚ್.ಆರ್. ಅಂಡ್ ಸಿ.ಇ.’ಯ) ಅಧಿಕಾರಿಗಳು ತಮಿಳುನಾಡಿನ ೪೫ ದೇವಸ್ಥಾನಗಳನ್ನು ಅಕ್ರಮವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಮತ್ತು ಆರ್. ಹೇಮಲತಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಲಿಸಿದ ನಂತರ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ. ಈ ದೇವಸ್ಥಾನಗಳಲ್ಲಿ ಮಧುರೈನ ಮೀನಾಕ್ಷಿ ದೇವಸ್ಥಾನ, ಶ್ರೀರಂಗಂ ರಂಗನಾಥ ಸ್ವಾಮಿ ದೇವಸ್ಥಾನ, ತಿರುವರೂರು ಥಿಯಾಗರಾಜ್ ಸ್ವಾಮಿ ದೇವಸ್ಥಾನ, ಶ್ರೀವಿಲಿಪುಥುರ ನಚಿಯಾರ ದೇವಸ್ಥಾನಮ್, ತಿರುಚೇಂದ್ರ ಸುಬ್ರಹ್ಮಣ್ಯಮ್ ದೇವಸ್ಥಾನ, ಅರುಣ ದೇವಸ್ಥಾನ, ಅರುಣ ತಿರುವಣ್ಣಾಮಲೈ ದೇವಸ್ಥಾನಗಳು ಸೇರಿವೆ.
ಶ್ರೀ. ಟಿ.ಆರ್. ರಮೇಶ ಅವರು, ನಾನು ತಮಿಳುನಾಡು ಸರಕಾರ ಹಾಗೂ ಮಾನವಶಕ್ತಿ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಮ್ಮಲ್ಲಿ ಕಾನೂನುರೀತ್ಯಾ ಅಧಿಕಾರವಿಲ್ಲದಿರುವಾಗಲೂ ಅಕ್ರಮವಾಗಿ ರಾಜ್ಯದ್ಲ ಹಲವಾರು ದೊಡ್ಡ ದೇವಸ್ಥಾನಗಳ ನಿರ್ವಹಣೆಯನ್ನು ನಿಭಾಯಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದೇನೆ’ ಎಂದು ಹೇಳಿದರು. ಸರಕಾರಿ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುವವರು ದೇವಸ್ಥಾನಗಳಿಗೆ ಮೋಸ ಮಾಡಿದ್ದಾರೆ. ಸರಕಾರಿ ಅಧಿಕಾರಿಗಳು ದೇವಸ್ಥಾನಗಳಲ್ಲಿ ಬೀಡುಬಿಟ್ಟು ಅತಿಕ್ರಮಣಕಾರರಂತೆ ವರ್ತಿಸುತ್ತಾರೆ.