ಬಾರಾಬಂಕಿ (ಉತ್ತರಪ್ರದೇಶ)ಯಲಿ ತನ್ನ ೧೬ ವರ್ಷದ ಮಗಳ ಮೇಲೆ ಲೈಂಗಿಕ ಅತ್ಯಾಚಾರಗೈದ ಮತಾಂಧ

ಗರ್ಭಿಣಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿ ಪೀಡಿತೆ ಸಾವು

  • ಸ್ವಂತ ಮಗಳನ್ನೇ ಲೈಂಗಿಕವಾಗಿ ಶೋಷಣೆಗೈಯ್ಯುವ ವಾಸನಾಂಧ ಮತಾಂಧರು ಇತರ ಯುವತಿಯರನ್ನು, ಮಹಿಳೆಯರನ್ನು ಯಾವ ದೃಷ್ಟಿಯಿಂದ ನೋಡುತ್ತಿರಬಹುದು, ಎಂಬುದು ಗಮನಕ್ಕೆ ಬರುತ್ತದೆ !
  • ಯಾವಾಗಲೂ ಶರಿಯತ್ ಕಾನೂನನ್ನು ಜಾರಿಗೊಳಿಸುವ ಬಗ್ಗೆ ಹಾಗೂ ಆ ಮೂಲಕ ಸೌಲಭ್ಯವನ್ನು ತೆಗೆದುಕೊಳ್ಳಲು ಪ್ರಯತ್ನಿಸುವ ಮತಾಂಧರು ಶರಿಯತ್ ಕಾನೂನಿನಲ್ಲಿ ಇಂತಹ ಅಪರಾಧಗಳಿಗೆ ಹೇಳಿರುವಂತಹ ಪ್ರಕಾರ ಕೈ-ಕಾಲು ಮುರಿಯುವ, ಗಲ್ಲಿಗೇರಿಸುವ ಅಥವಾ ನಡುರಸ್ತೆಯಲ್ಲಿ ಕಟ್ಟಿ ಆತನ ಮೇಲೆ ಕಲ್ಲೆಸೆಯುವ ಶಿಕ್ಷೆಯನ್ನು ನೀಡಬೇಕೆಂಬ ಬಗ್ಗೆ ಮಾತ್ರ ಬಾಯಿಬಿಚ್ಚುವುದಿಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಬರಾಬಂಕಿ (ಉತ್ತರ ಪ್ರದೇಶ) – ಇಲ್ಲಿಯ ಫತೇಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ತನ್ನ ೧೬ ವರ್ಷದ ಬಾಲಕಿಯ ಮೇಲೆ ಮತಾಂಧನು ನಿರಂತರ ಅತ್ಯಾಚಾರ ಮಾಡಿರುವ ಹಾಗೂ ಇದರಿಂದ ಆಕೆ ಗರ್ಭ ಧರಿಸಿದ ಘಟನೆ ನಡೆದಿದೆ. ಸಂತ್ರಸ್ತ ಬಾಲಕಿ ತನ್ನ ತಂದೆ ಗುಲಾಮ್ ರಸೂಲ್ ವಿರುದ್ಧ ದೂರನ್ನು ದಾಖಲಿಸಿದ್ದಳು. ಆಕೆ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದ್ದಾಳೆ. ರಸೂಲ್ ದೊಡ್ಡ ಅಪರಾಧಿಯಾಗಿದ್ದು, ದರೋಡೆ ಮತ್ತು ಹಲ್ಲೆಗಳ ಆರೋಪಗಳು ಆತನ ಮೇಲಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಆತನನ್ನು ಹಲವಾರು ಬಾರಿ ಬಂಧಿಸಲಾಗಿದೆ. ೨ ವರ್ಷಗಳ ಹಿಂದೆ ಆತನ ಹೆಂಡತಿಯು ೮ ನೇ ಮಗುವಿಗೆ ಜನ್ಮ ನೀಡುವಾಗ ತೀರಿಕೊಂಡಿದ್ದಳು. ಹೆಂಡತಿಯು ತೀರಿಕೊಂಡ ನಂತರ ಆತನು ತನ್ನ ಮಗಳಿಗೆ ಲೈಂಗಿಕ ಶೋಷಣೆಯನ್ನು ಪ್ರಾರಂಭಿಸಿದ್ದನು. ರಸೂಲ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.