ಉದ್ಯಮಿಗಳಿಗೆ ಸವಿನಯ ವಿನಂತಿ !

ಉದ್ಯಮಿಗಳೇ, ‘ಸನಾತನ ಪಂಚಾಂಗ’ದಲ್ಲಿ ತಮ್ಮ ಕಂಪನಿಯ ಜಾಹೀರಾತುಗಳನ್ನು ಮುದ್ರಿಸಿ ಧರ್ಮಪ್ರಸಾರದ ಕಾರ್ಯದಲ್ಲಿ ಪಾಲ್ಗೊಳ್ಳಿರಿ !

ಪಂಚಾಂಗ (ಕ್ಯಾಲೆಂಡರ್‌ಗಳ ಮಾಧ್ಯಮದಿಂದ ಪರಿಚಿತರಿಗೆ ತಮ್ಮ ವ್ಯವಸಾಯದ ಮಾಹಿತಿಯನ್ನು ನೀಡುವಾಗ ಧರ್ಮಕಾರ್ಯವೂ ಆಗಬೇಕೆಂದು, ತಮ್ಮ ಜಾಹೀರಾತುಗಳಿರುವ ‘ಸನಾತನ ಪಂಚಾಂಗ’ವನ್ನು ಮುದ್ರಿಸಿಕೊಳ್ಳಿ !

ಅನೇಕ ಉದ್ಯಮಿಗಳು ತಮ್ಮ ಕಂಪನಿಯ ಪ್ರಸಾರವನ್ನು ಮಾಡಲು ತಮ್ಮದೇ ಜಾಹೀರಾತುಗಳಿರುವ ಪಂಚಾಂಗ (ಕ್ಯಾಲೆಂಡರ್) ವನ್ನು ಪ್ರಕಾಶಿಸಿ ಅದನ್ನು ತಮ್ಮ ಗ್ರಾಹಕರು, ಸಿಬ್ಬಂದಿಗಳು, ಸಂಬಂಧಿಕರು ಮುಂತಾದವರಿಗೆ ಉಡುಗೊರೆ ಎಂದು ಕೊಡುತ್ತಾರೆ. ವ್ಯಾಪಾರಿ ಕೆಲಸಕಾರ್ಯದಲ್ಲಿ ವ್ಯಸ್ತವಾಗಿರುವುದರಿಂದ ಅನೇಕ ಉದ್ಯಮಿಗಳಿಗೆ ಪ್ರತ್ಯಕ್ಷ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಮೇಲಿನ ಎರಡೂ ಉದ್ದೇಶಗಳು ಪೂರ್ಣವಾಗಲು ಉದ್ಯಮಿಗಳು ‘ಸನಾತನ ಪಂಚಾಂಗ’ದಲ್ಲಿನ ಜಾಹೀರಾತುಗಳ ಸ್ಥಳದಲ್ಲಿ ಕೇವಲ ತಮ್ಮ ಜಾಹೀರಾತುಗಳನ್ನು ಹಾಕಿ ಪಂಚಾಂಗವನ್ನು ವಿತರಿಸಬಹುದು. ಇದರಿಂದ ವಾಚಕರಿಗೆ ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯ ಲೇಖನಗಳಿಂದ ಲಾಭವಾಗುವುದು ಮತ್ತು ಉದ್ಯಮಿಗಳಿಗೆ ಧರ್ಮಕಾರ್ಯದಲ್ಲಿ ಸಹಕಾರ ನೀಡಿದ ಲಾಭವಾಗುವುದು, ಹಾಗೆಯೇ ಅವರ ಉದ್ಯೋಗದ ಪ್ರಸಾರವೂ ಆಗುವುದು. ಸನಾತನದ ಈ ನಿಸ್ವಾರ್ಥ ಕಾರ್ಯವನ್ನು ನೋಡಿ ಇಲ್ಲಿಯವರೆಗೆ ಪುಣೆಯ ‘ಬಾಫನಾ ಜ್ವೆಲರ್ಸ್’, ಗುಜರಾತನಲ್ಲಿನ ‘ಇಲೆಕ್ಟ್ರೋಥರ್ಮ್’,  ದೆಹಲಿಯ ‘ಮೆಟ್ರೋ ಬಿಲ್ಡಟೆಕ್’ ಮತ್ತು ಚೆನ್ನೈನ ‘ಕುಮಾರನ್ ಸಿಲ್ಕ್’ ಮುಂತಾದ ಕಂಪನಿಗಳು ಕೇವಲ ತಮ್ಮದೇ ಜಾಹೀರಾತುಗಳಿರುವ ‘ಸನಾತನ ಪಂಚಾಂಗ’ವನ್ನು ಮುದ್ರಿಸಿಕೊಂಡಿವೆ.

‘ಸನಾತನ ಪಂಚಾಂಗ’ದ ವೈಶಿಷ್ಟ್ಯಗಳು !

೧. ಆಕರ್ಷಕ ವರ್ಣಸಂಯೋಜನೆ, ಸಾತ್ತ್ವಿಕ ಅಂಕೆ ಮತ್ತು ಅಕ್ಷರಗಳಿರುವ ಬರವಣಿಗೆ !

೨. ದೇವತೆಗಳ ಸಾತ್ತ್ವಿಕ ಚಿತ್ರಗಳು, ರಾಷ್ಟ್ರ ಮತ್ತು ಧರ್ಮದ ಬಗೆಗಿನ ಬೋಧನೆ, ಹಾಗೆಯೇ ಆಪತ್ಕಾಲವನ್ನು ಎದುರಿಸಲು ಆವಶ್ಯಕವಾಗಿರುವ ಪೂರ್ವಸಿದ್ಧತೆ ಮತ್ತು ಮನೋಬಲವನ್ನು ಹೆಚ್ಚಿಸುವ ಉಪಾಯಗಳು !

೩. ಕನ್ನಡ, ಮರಾಠಿ, ಹಿಂದಿ, ಆಂಗ್ಲ, ತಮಿಳು, ತೆಲುಗು, ಗುಜರಾತಿ ಈ ಭಾಷೆಗಳಲ್ಲಿ ಲಭ್ಯ !

ಉದ್ಯಮಿಗಳೇ, ಹಿಂದೂಗಳಿಗೆ ಧರ್ಮಶಿಕ್ಷಣವನ್ನು ನೀಡಿ ಧರ್ಮರಕ್ಷಣೆಗಾಗಿ ಉದ್ಯುಕ್ತಗೊಳಿಸುವ ‘ಸನಾತನ ಪಂಚಾಂಗ’ದಲ್ಲಿ ತಮ್ಮ ಕಂಪನಿಯ ಜಾಹೀರಾತುಗಳನ್ನು ಮುದ್ರಿಸಿಕೊಂಡು ಅವುಗಳ ವಿತರಣೆಯ ಮೂಲಕ ಧರ್ಮಪ್ರಸಾರದ ಕಾರ್ಯದಲ್ಲಿ ಪಾಲ್ಗೊಳ್ಳಿರಿ ! ಈ ಪಂಚಾಂಗವನ್ನು ಮುದ್ರಿಸಿಕೊಳ್ಳಲು ಇಚ್ಛಿಸುವ ಉದ್ಯಮಿಗಳು ತಮ್ಮ ಮಾಹಿತಿಯನ್ನು [email protected] ಈ ಗಣಕೀಯ ವಿಳಾಸಕ್ಕೆ ಆದಷ್ಟು ಬೇಗನೆ ಕಳುಹಿಸಬೇಕು. ಈ ಬಗ್ಗೆ ಸಂದೇಹಗಳಿದ್ದರೆ ಸೌ. ಭಾಗ್ಯಶ್ರೀ ಸಾವಂತ ಇವರನ್ನು 7058885610 ಈ ಕ್ರಮಾಂಕಕ್ಕೆ ಸಂಪರ್ಕಿಸಬೇಕೆಂದು ವಿನಂತಿ !

ಟಿಪ್ಪಣಿ – ಉದ್ಯಮಿಗಳು ಪಂಚಾಂಗದಲ್ಲಿ ಪ್ರಕಾಶಿಸಬೇಕಾದ ತಮ್ಮ ಜಾಹೀರಾತುಗಳ ಕಲಾಕೃತಿಗಳನ್ನು (‘ಆರ್ಟವರ್ಕ್’) ತಾವೇ ತಯಾರು ಮಾಡಿಕೊಟ್ಟರೆ ನಮಗೆ ಸಹಾಯವಾಗುವುದು.