ಸಾಧಕರಿಗಾಗಿ ಸೂಚನೆ ಮತ್ತು ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

ವಿದ್ಯುತ್ ಘಟಕಕ್ಕೆ ಪರ್ಯಾಯವೆಂದು ಸೌರಯಂತ್ರವನ್ನು ಅಳವಡಿಸುವಾಗ ‘ಸಂಬಂಧಿತ ಕಂಪನಿಗಳಿಂದ ಮೋಸಕ್ಕೊಳಗಾದಿರಿ’, ಎಂಬುದಕ್ಕಾಗಿ ಜಾಗರೂಕತೆ ವಹಿಸಿ !

ಒಂದು ನಗರದ ಕೆಲವು ಗ್ರಾಮಸ್ಥರು ಒಂದು ಕಂಪನಿಯಿಂದ ಸೌರ ಯಂತ್ರವನ್ನು (ಸೋಲಾರ್ ಸಿಸ್ಟಮ್) ಅಳವಡಿಸಿಕೊಂಡರು. ಯಂತ್ರವನ್ನು ಅಳವಡಿಸುವಾಗ ಈ ಕಂಪನಿಯು ಗ್ರಾಹಕರಿಗೆ ಮುಂದಿನಂತೆ ಮೋಸ ಮಾಡಿತು.

೧. ಗ್ರಾಹಕರನ್ನು ಮೋಸಗೊಳಿಸುವ ಸಂದರ್ಭದಲ್ಲಿ ಗಮನಕ್ಕೆ ಬಂದ ಅಂಶಗಳು

ಅ. ಎರಡು ‘ಕಿಲೋವ್ಯಾಟ್’ನ (KW) ಸೌರಯಂತ್ರದ ಬೇಡಿಕೆ ನೀಡಿರುವಾಗ ೨ ‘ಕಿಲೋ ವೋಲ್ಟ್ ಆಂಪಿಯರ್’ನ (KVA) ಯಂತ್ರವನ್ನು ಅಳವಡಿಸಿದರು.

ಆ. ಯಂತ್ರದಲ್ಲಿ ಕನಿಷ್ಠ ೧,೫೦೦ ವ್ಯಾಟ್‌ನ ಸೌರ ಪ್ಯಾನಲ್‌ಗಳನ್ನು (೩೦೦ ವ್ಯಾಟ್‌ನ ೫ ಪ್ಯಾನಲ್‌ಗಳನ್ನು) ಅಳವಡಿಸುವುದು ಅಪೇಕ್ಷಿತವಿರುವಾಗ ಕೇವಲ ೪ ಪ್ಯಾನಲ್‌ಗಳನ್ನು ಅಳವಡಿಸಿದರು. ‘ಕಡಿಮೆ ಪ್ಯಾನಲ್‌ಗಳಿಂದಲೇ ಕೆಲಸವಾಗುವುದು’, ಎಂದು ಹೇಳಲಾಯಿತು.

ಇ. ‘ಸೌರಯಂತ್ರವು ಎಷ್ಟು ಗಂಟೆಗಳ ‘ಬ್ಯಾಕ್‌ಅಪ್’ ಕೊಡುವುದು ?, ಸೌರಪ್ಯಾನಲ್‌ಗಳು, ಇನ್ವರ್ಟರ್ ಮತ್ತು ಬ್ಯಾಟರಿಗಳು ಯಾವ ಕಂಪನಿಗಳದ್ದಾಗಿರುವುದು ?’, ಎಂದು ಕಂಪನಿಯು ಸ್ಪಷ್ಟಪಡಿಸಲಿಲ್ಲ.

ಈ. ಕಡಿಮೆ ಗುಣಮಟ್ಟದ ‘ಚಾರ್ಜ್ ಕಂಟ್ರೋಲರ್’ (ಪ್ರಭಾರಿ ನಿಯಂತ್ರಕ) ವನ್ನು ಬಳಸಲಾಯಿತು.

‘ಈ ಕಂಪನಿಯು ಒಂದೇ ಬಾರಿಗೆ ಅನೇಕರ ಕೆಲಸವನ್ನು ತೆಗೆದುಕೊಂಡು ಅದನ್ನು ಪೂರ್ತಿಗೊಳಿಸಿಲ್ಲ’, ಎಂದೂ ಗಮನಕ್ಕೆ ಬಂದಿದೆ.

೨. ಸೌರಯಂತ್ರವನ್ನು ಅಳವಡಿಸುವಾಗ ಮುಂದಿನ ಸೂಚನೆಗಳನ್ನು ಪಾಲಿಸಬೇಕು !

ಅ. ‘ಮನೆ ಅಥವಾ ಕಾರ್ಯಾಲಯ ಇವುಗಳಿಗಾಗಿ ಎಷ್ಟು ವ್ಯಾಟ್‌ನ ಸೌರಯಂತ್ರವನ್ನು ಅಳವಡಿಸಬೇಕು ? ಅಲ್ಲಿ ಎಷ್ಟು ಪವರ್‌ನ ಬಳಕೆಯಾಗುತ್ತದೆ ?, ವಿದ್ಯುತ್ ಯಂತ್ರವು ಇಲ್ಲದಿದ್ದರೆ ಕನಿಷ್ಠ ಎಷ್ಟು ಪವರ್‌ನ ಆವಶ್ಯಕತೆಯಿದೆ ?’, ಮುಂತಾದ ಬಗ್ಗೆ ಮೊದಲು ಅಭ್ಯಾಸ ಮಾಡಬೇಕು. ಇದಕ್ಕಾಗಿ ಅಂತರ್ಜಾಲದ ಉಪಯೋಗ ಮಾಡಬಹುದು.

ಆ. ‘ಯಾವ ಕಂಪನಿಯು ಕಡಿಮೆ ಖರ್ಚಿನಲ್ಲಿ ಮೇಲಿನ ಯಂತ್ರವನ್ನು ಅಳವಡಿಸಿಕೊಡುವುದು ?’, ಎಂದು ಮೊದಲು ಅಭ್ಯಾಸ ಮಾಡಬೇಕು. ಈ ಸಂದರ್ಭದಲ್ಲಿ ಕಂಪನಿಗಳಿಂದ ಖಚಿತಪಡಿಸಿಕೊಳ್ಳಬೇಕು. ಯಂತ್ರವನ್ನು ಅಳವಡಿಸಿಕೊಳ್ಳಲು ಆಯ್ಕೆ ಮಾಡಿದ ಕಂಪನಿಯು, ‘ಉತ್ತಮ ಗುಣಮಟ್ಟದ ಕೆಲಸ ಮಾಡುತ್ತದೆಯೇ ?’, ಸೋಲಾರನ ಅನುಭವವಿರುವವರಿಂದ ಮಾಹಿತಿ ಪಡೆದುಕೊಳ್ಳಬೇಕು.

ಇ. ‘ಯಾವ ಕಂಪನಿಯ ಬ್ಯಾಟರಿ, ಇನ್ವರ್ಟರ್, ಪ್ಯಾನಲ್ಸ್ ಉತ್ತಮ ಗುಣಮಟ್ಟದ್ದಾಗಿವೆ ?’, ಎಂದು ಅಭ್ಯಾಸ ಮಾಡಬೇಕು.

ಈ. ಒಂದೇ ಕಂಪನಿಯ ಪ್ಯಾನಲ್‌ಗಳು, ಬ್ಯಾಟರಿ ಮತ್ತು ಇನ್ವರ್ಟರ್ ತೆಗೆದುಕೊಂಡರೆ ಅದರ ಮೇಲೆ ಶೇ. ೫ ರಷ್ಟು ವಸ್ತು ಮತ್ತು ಸೇವಾಶುಲ್ಕ (ಜಿಎಸ್‌ಟಿ)ವನ್ನು ವಿಧಿಸಲಾಗುತ್ತದೆ; ಆದರೆ ವಿವಿಧ ಕಂಪನಿಗಳದ್ದು ತೆಗೆದುಕೊಂಡರೆ ಅನುಕ್ರಮವಾಗಿ ಶೇ. ೫, ೧೮ ಮತ್ತು ೨೮ ರಷ್ಟು ವಸ್ತು ಮತ್ತು ಸೇವಾಶುಲ್ಕವನ್ನು ವಿಧಿಸಲಾಗುತ್ತದೆ.

ಈ ದೃಷ್ಟಿಯಿಂದ ವಿಚಾರ ಮಾಡಬೇಕು.

ಉ. ಯಾವುದೇ ಕಂಪನಿಗೆ ಸೌರ ಯಂತ್ರವನ್ನು ಅಳವಡಿಸಲು ಒಪ್ಪಿಗೆ ನೀಡುವ ಮೊದಲು ಅದರ ಅಂತಿಮ ಬೆಲೆಸೂಚಿಯನ್ನು ತರಿಸಿ ಒಪ್ಪಂದ ಮಾಡಿಕೊಳ್ಳಬೇಕು ಮತ್ತು ಅದರ ಒಂದು ಪ್ರತಿಯನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು.

‘ಸೌರ ಯಂತ್ರವನ್ನು ಅಳವಡಿಸುವ ಕಂಪನಿಗಳು ನಮ್ಮ ಅಜ್ಞಾನವನ್ನು ದುರುಪಯೋಗಿಸಿಕೊಂಡು ನಮ್ಮನ್ನು ಮೋಸಗೊಳಿಸ ಬಾರದು’, ಎಂದು ಮೇಲಿನ ಸೂಚನೆಗಳ ಪಾಲಿಸಿ ಮತ್ತು ತಮ್ಮ ಆರ್ಥಿಕ ಹಾನಿಯನ್ನು ತಡೆಗಟ್ಟಿರಿ !

ಉತ್ತಮ ಗುಣಮಟ್ಟದ ಸೌರಯಂತ್ರವನ್ನು ಅಳವಡಿಸುವ ವಿಶ್ವಾಸಾರ್ಹ ಕಂಪನಿಗಳ ಪರಿಚಯವಿದ್ದರೆ ಅದರ ಮಾಹಿತಿಯನ್ನು [email protected] ಈ ಗಣಕೀಯ ವಿಳಾಸಕ್ಕೆ ಕಳುಹಿಸಬೇಕು. ಇದರಿಂದ ಅದನ್ನು ಎಲ್ಲರಿಗೂ ತಿಳಿಸಲು ಸಾಧ್ಯವಾಗುವುದು.