ಸಾಧಕರೇ, ರಾಮನಾಥಿ ಆಶ್ರಮದ ಅನ್ನಪೂರ್ಣಾಕಕ್ಷೆಯಲ್ಲಿರುವ (ಅಡುಗೆಮನೆ) ಸೇವೆಯಲ್ಲಿ ಪಾಲ್ಗೊಂಡು ತಮ್ಮ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಳ್ಳಿ !

ಸನಾತನದ ರಾಮನಾಥಿ ಆಶ್ರಮವೆಂದರೆ ಚೈತನ್ಯದ ಸ್ರೋತ ! ರಾಮನಾಥಿ ಆಶ್ರಮದಲ್ಲಿನ ಅನ್ನಪೂರ್ಣಾ ಕಕ್ಷೆಯಲ್ಲಿ (ಅಡುಗೆ ಮನೆ) ವಿವಿಧ ಸೇವೆಗಳಿಗಾಗಿ ಸಾಧಕರ ಸಂಖ್ಯೆಯು ಕಡಿಮೆ ಇದೆ. ಈ ಸೇವೆಗಳನ್ನು ಮಾಡಲು ಶಾರೀರಿಕ ಕ್ಷಮತೆಯಿರುವ ಸ್ತ್ರೀ ಮತ್ತು ಪುರುಷ ಸಾಧಕರ ಆವಶ್ಯಕತೆಯಿದೆ. ಆಸಕ್ತಿಯುಕ್ತ ಸಾಧಕರು ಪೂರ್ಣವೇಳೆ ಅಥವಾ ಕೆಲವು ಅವಧಿಗಾಗಿ ಆಶ್ರಮದಲ್ಲಿದ್ದು ಈ ಅವಕಾಶದ ಲಾಭವನ್ನು ಪಡೆಯಬಹುದು. ಈ ಸೇವೆಯನ್ನು ಮಾಡುವವರು ಅಥವಾ ಕಲಿಯಲು ಸಿದ್ಧ ಇರುವ ಸಾಧಕರು ಜಿಲ್ಲಾಸೇವಕರ ಮೂಲಕ ಕೆಳಗಿನ ನೀಡಿರುವ ಕೋಷ್ಟಕದಲ್ಲಿದ್ದಂತೆ ತಮ್ಮ ಮಾಹಿತಿಯನ್ನು ಕಳುಹಿಸಬೇಕು.
ಹೆಸರು ಮತ್ತು ಸಂಪರ್ಕ ಕ್ರಮಾಂಕ : ಸೌ. ಭಾಗ್ಯಶ್ರೀ ಸಾವಂತ, 7058885610
ಗಣಕೀಯ ವಿಳಾಸ : [email protected]
ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ ‘ಸನಾತನ ಆಶ್ರಮ’, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್-403401
ಅನ್ನಪೂರ್ಣಾಕಕ್ಷೆಯಲ್ಲಿನ ಸೇವೆಯಿಂದ ತನುವಿನೊಂದಿಗೆ ಮನಸ್ಸಿನ ತ್ಯಾಗವೂ ಆಗುತ್ತದೆ. ಈ ಸೇವೆಯನ್ನು ಮಾಡಿ ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಂಡ ಅನೇಕ ಸಾಧಕರ ಉದಾಹರಣೆಗಳಿವೆ. ಆದ್ದರಿಂದ ಸಾಧಕರೇ, ಈ ಸೇವೆಯಿಂದ ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಳ್ಳಲು ಭಗವಂತನು ನೀಡಿರುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ !
ಸಾಧಕರೇ, ಶಬ್ದಶಕ್ತಿಯ ಮೂಲಕ ವಿಕಲ್ಪಗಳನ್ನು ಹರಡಲು ಕಾರ್ಯನಿರತವಾಗಿರುವ ಏಳನೇ ಪಾತಾಳದ ಬಲಿಷ್ಠ ಕೆಟ್ಟ ಶಕ್ತಿಗಳ ಸಂಚನ್ನು ಗುರುತಿಸಿ ಸಾಧನೆಯನ್ನು ಹೆಚ್ಚಿಸಿ !
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !