ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರಸಮಿತಿ ಸರಕಾರವು ಅಲ್ಪಸಂಖ್ಯಾತರಿಗೆ ನಾಗರಿಕ ಸೇವಾ ಪರೀಕ್ಷೆಗಳಿಗೆ ಉಚಿತವಾಗಿ ಬೋಧನೆ ನೀಡಲಿದೆ

ರಾಜ್ಯದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು ಅಲ್ಪಸಂಖ್ಯಾತ ಸಮುದಾಯದ ಯುವಕರಿಗೆ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಉಚಿತವಾಗಿ ಶಿಕ್ಷಣ ನೀಡುವಂತೆ ಘೋಷಣೆ ಮಾಡಿದೆ.

ಭರತಪುರ (ರಾಜಸ್ಥಾನ)ದಲ್ಲಿ ಗೋಕಳ್ಳಸಾಗಾಣಿಕೆಯಾಗುತ್ತಿದ್ದ ಬಗ್ಗೆ ಮಾಹಿತಿ ನೀಡಿಯೂ ಕಾರ್ಯಾಚರಿಸದ ನಿಷ್ಕ್ರೀಯ ಪೊಲೀಸರು

ಇಲ್ಲಿನ ಸ್ಥಳೀಯ ವ್ಯಕ್ತಿಯೊಬ್ಬರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಚತುಷ್ಚಕ್ರ ವಾಹನದಲ್ಲಿ ದನಗಳ ಕಳ್ಳಸಾಗಣೆಯಾಗುತ್ತಿದೆ ಎಂಬ ಮಾಹಿತಿಯನ್ನು ನೀಡಿದರು; ಆದರೆ ಪೊಲೀಸರು ಅದರತ್ತ ದುರ್ಲಕ್ಷ ಮಾಡಿದ್ದರಿಂದ ಗೋ ಕಳ್ಳಸಾಗಣೆ ಮಾಡುವವರು ಹಸುವನ್ನು ತೆಗೆದುಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

‘ಝಿ ೫’ ಈ ಒಟಿಟಿ ಆಪ್‌ನಿಂದ ಪ್ರಸಾರವಾಗಲಿರುವ ‘ಕಾಮಿಡಿ ಕಪಲ್’ ಈ ವೆಬ್‌ಸಿರಿಸ್‌ನಲ್ಲಿ ಗೋ ಮೂತ್ರದ ಅವಮಾನ

ಒಟಿಟಿ ಆಪ್ ‘ಝೀ ೫’ ನಿಂದ ಪ್ರಸಾರವಾಗಲಿರುವ ಮುಂಬರುವ ವೆಬ್ ಸಿರಿಸ್ ‘ಕಾಮಿಡಿ ಕಪಲ್’ನಲ್ಲಿ ಗೋಮೂತ್ರವನ್ನು ಅವಮಾನಿಸಲಾಗಿದೆ. ಈ ವೆಬ್‌ಸಿರಿಸ್ ಅಕ್ಟೋಬರ್ ೨೧ ರಿಂದ ಪ್ರಸಾರವಾಗಲಿದೆ.

ಬಾಗ್‌ಪತ್‌ನಲ್ಲಿ (ಉತ್ತರ ಪ್ರದೇಶ) ಯಮುನಾ ನದಿಯಲ್ಲಿ ಶರೀರದ ಮೇಲೆ ಅನೇಕ ಕಡೆಗಳಲ್ಲಿ ಗಾಯಗಳಾಗಿರುವ ಅಪರಿಚಿತ ಸಾಧುವಿನ ಶವ ಪತ್ತೆ

ಬಾಗಪತ್ ನಗರದ ಮೂಲಕ ಹರಿಯುವ ಯಮುನಾ ನದಿಯಲ್ಲಿ ಒಬ್ಬ ಸಾಧುವಿನ ಶವ ಪತ್ತೆಯಾಗಿದೆ. ಅವರನ್ನು ಇನ್ನೂ ಗುರುತಿಸಲಾಗಿಲ್ಲ. ಈ ಶವದ ಮೇಲೆ ಅನೇಕ ಗಾಯಗಳಿವೆ. ಅವರನ್ನು ಥಳಿಸಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ರಾಜದಂಡದ ಅಂಕುಶವಿಲ್ಲದ್ದರಿಂದ ಸಮಾಜದ ಸ್ಥಿತಿ ಅರಾಜಕವಾಗಿದೆ !

‘ಮನುಷ್ಯನು ಮೂಲತಃ ಮತ್ತು ಸ್ವಭಾವತಃ ಸ್ವಾರ್ಥಿ, ಲೋಭಿಯಾಗಿರುತ್ತಾನೆ. ಅವನ ನಡವಳಿಕೆಯ ಮೇಲೆ ರಾಜದಂಡದ ಅಂಕುಶವಿಲ್ಲದಿದ್ದರೆ ಅವನು ಅನಿಯಂತ್ರಿತವಾಗಲು ತಡವಾಗಲಾರದು. ಅಂತಹ ಮನುಷ್ಯನನ್ನು ನಿಯಂತ್ರಿಸುವುದು, ಧರ್ಮದ ಮತ್ತು ದಂಡದ ಕರ್ತವ್ಯವಾಗಿದೆ. ರಾಜದಂಡವು ಆ ಕಾರ್ಯವನ್ನು ನಿರ್ವಹಿಸದಿದ್ದರೆ ಸಮಾಜದಲ್ಲಿ ಮಾತ್ಸ್ಯನ್ಯಾಯ (ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ನುಂಗುತ್ತವೆ.) ಉದ್ಭವಿಸುತ್ತದೆ.

ಸನಾತನ ಸಂಸ್ಥೆಯ ವತಿಯಿಂದ ಅಕ್ಟೋಬರ್ ೧೧ ರಿಂದ ‘ಆನಂದಮಯ ಜೀವನಕ್ಕಾಗಿ ಅಧ್ಯಾತ್ಮದ ಮಹತ್ವ’ ಈ ವಿಷಯದಲ್ಲಿ ೯ ಭಾಷೆಗಳಲ್ಲಿ ‘ಆನ್‌ಲೈನ್’ ಸಾಧನೆ ಪ್ರವಚನ ಮಾಲಿಕೆ !

ದಿನನಿತ್ಯದ ಜೀವನದಲ್ಲಿ ಮಾರ್ಗದರ್ಶಕವಾಗಲಿರುವ ಇಂತಹ ವಿಷಯಗಳ ಪ್ರವಚನವನ್ನು ಆನ್‌ಲೈನ್‌ನ ಮಾಧ್ಯಮದಿಂದ ಆಯೋಜಿಸಲಾಗಿದೆ. ಎಲ್ಲ ಜಿಜ್ಞಾಸು ಬಂಧು-ಭಗಿನಿಯರು ಇದರ ಲಾಭವನ್ನು ಪಡೆದುಕೊಳ್ಳಿರಿ, ಎಂದು ವಿನಂತಿ.

ನಾಗಾಲ್ಯಾಂಡ್ ಭಾರತದ ಹೊರಗಿನ ಪ್ರದೇಶ ಎಂದು ಹೇಳಿದ್ದಕ್ಕಾಗಿ ‘ಫ್ಲಿಪ್‌ಕಾರ್ಟ್’ನಿಂದ ಕ್ಷಮೆಯಾಚನೆ

ನಾಗಾಲ್ಯಾಂಡ್ ಭಾರತದ ಹೊರಗಿನ ಪ್ರದೇಶವಾಗಿದೆ ಎಂದು ಹೇಳುವ ಆನ್‌ಲೈನ್ ವಸ್ತುಗಳನ್ನು ಮಾರಾಟ ಮಾಡುವ ‘ಫ್ಲಿಪ್‌ಕಾರ್ಟ್’ ಭಾರತೀಯರ ವಿರೋಧದ ನಂತರ ಕ್ಷಮೆಯಾಚಿಸಿದೆ. ‘ನಿಷ್ಕಾಳಜಿಯಿಂದಾಗಿ ಈ ತಪ್ಪಾಗಿದೆ’ ಎಂದು ಫ್ಲಿಪ್‌ಕಾರ್ಟ್ ಹೇಳಿದೆ.

ಸ್ವಾಮಿ ವಿವೇಕಾನಂದರ ಛಾಯಾಚಿತ್ರ; ಮನೆಮನೆಗಳಲ್ಲಿ ಹಾಕಿದರೇ ಭಾಜಪ ೩೦ ವರ್ಷಗಳ ಕಾಲ ಅಧಿಕಾರದಲ್ಲಿ ಇರುತ್ತದೆ ! – ತ್ರಿಪುರಾದ ಮುಖ್ಯಮಂತ್ರಿ ಬಿಪ್ಲಾಬ್‌ಕುಮಾರ ದೇವ್

ನನ್ನ ಹಳ್ಳಿಯಲ್ಲಿ ನಾನು ಕೆಲವು ವಿಷಯಗಳನ್ನು ನೋಡಿದೆ. ಅನೇಕರ ಮನೆಗಳಲ್ಲಿ ಜ್ಯೋತಿಬಸು, ಜೋಸೆಫ್ ಸ್ಟಾಲಿನ್, ಮಾವೋ ತ್ಸೆ ತುಂಗ್ ಛಾಯಾಚಿತ್ರಗಳು ನೋಡಲು ಸಿಕ್ಕಿತು. ದೇವತೆಗಳ ಚಿತ್ರಗಳನ್ನು ಇಡುವಲ್ಲಿ, ಈ ಚಿತ್ರಗಳು ಇದ್ದವು.

ಮುಸಲ್ಮಾನ ಹುಡುಗಿಯೊಬ್ಬಳನ್ನು ಪ್ರೀತಿಸಿದ ಹಿಂದೂ ಯುವಕನನ್ನು ಹತ್ಯೆಗೈದ ಆಕೆಯ ಕುಟುಂಬ

ಮುಸಲ್ಮಾನ ಹುಡುಗಿಯನ್ನು ಪ್ರೀತಿಸುತ್ತಿದ್ದ ಕೆ. ಲಕ್ಷ್ಮೀಪತಿ ಎಂಬ ಹಿಂದೂ ಯುವಕನನ್ನು ಹುಡುಗಿಯ ತಂದೆ ನಿಜಾಮುದ್ದೀನ್ ಹತ್ಯೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ನಿಜಾಮುದ್ದೀನ್ ಮತ್ತು ಅವರ ಪುತ್ರ ಸಿಕಂದರ್‌ನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇಬ್ರತ ಮತ್ತು ಮಹಮ್ಮದ ಎಂಬ ಇತರ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ಭೂ ಮಾಫಿಯಾದವರಿಂದ ಕರೌಲಿ (ರಾಜಸ್ಥಾನ)ಯಲ್ಲಿ ದೇವಸ್ಥಾನದ ಅರ್ಚಕನನ್ನು ಜೀವಂತವಾಗಿ ಸುಟ್ಟರು

ಇಲ್ಲಿಯ ಸಪೋಟರಾ ತಾಲ್ಲೂಕಿನ ರಾಧಾ ಗೋವಿಂದ ದೇವಸ್ಥಾನದ ೫೦ ವರ್ಷದ ಅರ್ಚಕ ಬಾಬುಲಾಲ ವೈಷ್ಣವ ಇವರನ್ನು ಅಕ್ಟೋಬರ್ ೮ ರಂದು ಭೂ ಮಾಫಿಯಾ ಹಾಗೂ ಅದರ ೫ ಸಹಚರರು ಸೇರಿ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟಿರುವ ಘಟನೆಯಾಗಿದೆ. ಆಸ್ಪತ್ರೆಗೆ ದಾಖಲಿಸಿದ ನಂತರ ಅಕ್ಟೋಬರ್ ೯ ರಂದು ಅವರು ಮೃತಪಟ್ಟರು.