ಸಾಧಕರಿಗೆ ಸೂಚನೆ, ಹಾಗೆಯೇ ವಾಚಕರು ಮತ್ತು ಹಿತಚಿಂತಕರಲ್ಲಿ ವಿನಂತಿ

ಕೊರೋನಾ ಮಹಾಮಾರಿ, ಆರ್ಥಿಕ ಮಹಾಕುಸಿತ ಮತ್ತು ಗಡಿಯಲ್ಲಿರುವ ಯುದ್ಧಜನ್ಯ ಸ್ಥಿತಿ, ಇಂತಹ ಆಪತ್ಕಾಲದ ಲಕ್ಷಣಗಳನ್ನು ಸದ್ಯ ನಾವು ಅನುಭವಿಸುತ್ತಿದ್ದೇವೆ. ಅಂದರೆ ಆಪತ್ಕಾಲವು ಈಗಾಗಲೇ ಬಂದಾಗಿದೆ. ಈ ಆಪತ್ಕಾಲದ ತೀವ್ರತೆಯು ಹೆಚ್ಚಾಗುವ ಮೊದಲೇ, ಅಧ್ಯಾತ್ಮಪ್ರಸಾರದ ಕಾರ್ಯವನ್ನು ಮಾಡಲು ಅವಕಾಶವಿದೆ. ಅಧ್ಯಾತ್ಮಪ್ರಸಾರವು, ಸನಾತನದ ಮುಖ್ಯ ಕಾರ್ಯವಾಗಿದೆ. ಕೊರೋನಾದ ಸಂಕಟದಿಂದಾಗಿ ‘ಆನ್‌ಲೈನ್’ ಮಾಧ್ಯಮಗಳಿಂದಲೇ ಅಧ್ಯಾತ್ಮಪ್ರಸಾರದ ಕಾರ್ಯವು ದೊಡ್ಡ ಪ್ರಮಾಣದಲ್ಲಿ ಮುನ್ನಡೆಯುತ್ತಿದೆ.

ಸನಾತನದ ಆಶ್ರಮಗಳಲ್ಲಿ ಸಾಧಕ ರೋಗಿಗಳಿಗೆ ಚಿಕಿತ್ಸೆ ನೀಡಲು ‘ಫಿಜಿಯೋಥೆರಪಿಸ್ಟ್ತಜ್ಞರ ಆವಶ್ಯಕತೆ !

‘ಸಾಧಕರ ಶಾರೀರಿಕ ಕ್ಷಮತೆ ಹೆಚ್ಚಾಗಲು ಹಾಗೂ ಅವರು ಆರೋಗ್ಯವಂತರಾಗಿರಲು ‘ವ್ಯಾಯಾಮ ಒಂದು ಪ್ರಭಾವಿ ಮಾಧ್ಯಮವಾಗಿದೆ. ವ್ಯಾಯಾಮಕ್ಕಾಗಿ ಯೋಗ್ಯ ವೈದ್ಯಕೀಯ ಸಲಹೆಯನ್ನು ನೀಡಲು ಮತ್ತು ರೋಗಿ-ಸಾಧಕರಿಗೆ ವ್ಯಾಯಾಮದ ಪ್ರಶಿಕ್ಷಣವನ್ನು ನೀಡಿ ಅವರು ‘ಮೊದಲಿನಂತೆ ಆರೋಗ್ಯವಂತರಾಗಲು (rehabilitation) ಸನಾತನದ ರಾಮನಾಥಿ ಮತ್ತು ದೇವದ ಆಶ್ರಮದಲ್ಲಿ ಪೂರ್ಣವೇಳೆ ‘ಫಿಜಿಯೋಥೆರಪಿಸ್ಟರ ಆವಶ್ಯಕತೆಯಿದೆ.

ಲಡಾಖ್‌ನಲ್ಲಿನ ಪರಾಕ್ರಮದ ಗೌರವಾನ್ವಿತರು : ಎಸ್.ಎಫ್.ಎಫ್.’ (ಸ್ಪೆಶಲ್ ಫ್ರಂಟಿಯರ್ ಫೋರ್ಸ್) ಸೈನಿಕರು !

‘ಲಡಾಖ್‌ನಲ್ಲಿ ಪೆಂಗಾಂಗ್ ತ್ಸೋ ಸರೋವರದ ದಕ್ಷಿಣದಲ್ಲಿ ಆಗಸ್ಟ್ ೨೯ ಮತ್ತು ೩೦ ರಂದು ಚೀನಾದ ೫೦೦ ರಿಂದ ೬೦೦ ಸೈನಿಕರು ಭಾರತೀಯ ಪ್ರದೇಶದೊಳಗೆ ನುಗ್ಗಲು ಪ್ರಯತ್ನಿಸುತ್ತಿರುವುದು ಭಾರತೀಯ ಸೈನಿಕರಿಗೆ ಕಾಣಿಸಿತು. ಆಗ ಭಾರತೀಯ ಸೈನಿಕರು ಅವರನ್ನು ಒಳಗೆ ಬರಲು ಬಿಟ್ಟರು, ಆ ಮೇಲೆ ಹೋರಾಟ ಆರಂಭವಾಯಿತು.

ಹಿಂದೂ ಸಂಘಟನೆ ಮತ್ತು ಧರ್ಮಾಧಿಷ್ಠಿತ ಹಿಂದೂರಾಷ್ಟ್ರ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ

ಸ್ವಾತಂತ್ರ್ಯವೀರ ಸಾವರಕರರು, ‘ರಾಜಕಾರಣದ ಹಿಂದೂಕರಣ ಮತ್ತು ಹಿಂದೂಗಳ ಸೈನಿಕೀಕರಣವಾಗಬೇಕು ಎಂದು ಹೇಳಿದ್ದರು, ಆದರೆ ನಾವು ಅದನ್ನು ಮರೆತಿದ್ದೇವೆ. ನಾವು ರಾಜಕಾರಣ ಮತ್ತು ಸೈನಿಕೀಕರಣವನ್ನು ಮಾಡಿದಾಗಲೇ ಹಿಂದೂ ಧರ್ಮದ ರಕ್ಷಣೆಯನ್ನು ಮಾಡಬಹುದು, ಹೀಗೆ ಮಾಡಿದರೆ ಮಾತ್ರ ಹಿಂದೂ ರಾಷ್ಟ್ರವನ್ನು ಸ್ಥಾಪಿಸಬಹುದು.

ಟೆರರ್ ಮ್ಯಾಗಝಿನ್ !

ಭಾರತ ಮತ್ತು ಅಮೇರಿಕಾದ ಭೌಗೋಲಿಕ ಪರಿಸ್ಥಿತಿ, ಅರ್ಥ ಕಾರಣ, ಸಮಾಜಕಾರಣ ಭಿನ್ನವಾಗಿದೆ. ಅದಕ್ಕಿಂತಲೂ ಹೆಚ್ಚು ಎರಡೂ ದೇಶಗಳ ಸಂಸ್ಕೃತಿ ಬೇರೆಯೇ ಆಗಿದೆ. ಆದ್ದರಿಂದ ಭಾರತದಲ್ಲಿ ಬಂದು ಪತ್ರಿಕೋದ್ಯಮ ಮಾಡಲಿಕ್ಕಿದ್ದರೆ ಇಲ್ಲಿನ ಇತಿಹಾಸ, ಭೂಗೋಲ ಮತ್ತು ಸಂಸ್ಕೃತಿಯನ್ನು ಅಧ್ಯಯನ ಮಾಡಬೇಕಾಗುತ್ತದೆ. ‘ಗೂಗಲ್ನಲ್ಲಿ ‘ಸರ್ಚ್ ಮಾಡಿ ಭಾರತವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರೆ, ಸುಳ್ಳು ಇತಿಹಾಸವೇ ಮುಂದೆ ಬರುತ್ತದೆ.

ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ಸಿಗುವ ಲಾಭ ಮತ್ತು ಸೌಲಭ್ಯಗಳು !

ಕೆಲವೊಮ್ಮೆ ಹುತಾತ್ಮ ಸೈನಿಕರ ವಿಧವೆಯರು ಕೌಟುಂಬಿಕ ತೊಂದರೆಗಳನ್ನು ಸಹಿಸಬೇಕಾಗುತ್ತದೆ. ಪತಿಯ ಮರಣಕ್ಕೆ ಇವಳೆ ಅಪಶಕುನವೆಂದು ಹೀಯಾಳಿಸುತ್ತಾರೆ, ಯುದ್ಧದಲ್ಲಿನ ಹುತಾತ್ಮ ಸೈನಿಕನ ವಿಧವೆಯೆಂದು ಅವಳಿಗೆ ಸಿಗುವ ಲಾಭ ಅಂದರೆ ಪೆನ್ಶನ್, ನಗದು ಹಣ ಇತ್ಯಾದಿ ಮಾವನ ಮನೆಗೆ ಕೊಡಬೇಕೆಂದು ಅವಳಿಗೆ ಒತ್ತಡ ಹೇರುತ್ತಾರೆ.

ಎಲ್ಲ ಅರ್ಪಣೆದಾರರಿಗೆ ಅನ್ನದಾನ ಮಾಡುವ ಅಮೂಲ್ಯ ಅವಕಾಶ !

‘೧೮.೯.೨೦೨೦ ರಿಂದ ೧೬.೧೦.೨೦೨೦ ಈ ಅವಧಿಯಲ್ಲಿ ‘ಅಧಿಕ ಮಾಸವಿದೆ. ಈ ಮಾಸದಲ್ಲಿ ನಾಮಜಪ, ಸತ್ಸಂಗ, ಸತ್ಸೇವೆ, ತ್ಯಾಗ, ದಾನ ಇತ್ಯಾದಿಗಳಿಗೆ ಹೆಚ್ಚು ಮಹತ್ವವಿರುತ್ತದೆ. ಈ ಮಾಸದಲ್ಲಿ ದಾನ ಮಾಡಿದರೆ ಹೆಚ್ಚು ಪ್ರಮಾಣದಲ್ಲಿ ಫಲ ಸಿಗುವುದರಿಂದ ಅನೇಕ ಜನರು ಅನ್ನದಾನ, ವಸ್ತ್ರದಾನ ಮತ್ತು ಜ್ಞಾನದಾನ ಇತ್ಯಾದಿ ಮಾಡುತ್ತಾರೆ. ದಾನವು ಪಾಪನಾಶಕವಾಗಿದ್ದು ಅದು ಪುಣ್ಯವನ್ನು ಪ್ರಾಪ್ತಿ ಮಾಡಿಕೊಡುತ್ತದೆ.

ಇಡೀ ವಿಶ್ವವು ಚಿರಂತನ ತತ್ತ್ವದ ಶೋಧದಲ್ಲಿದೆ, ಆದುದರಿಂದ ಹಿಂದುತ್ವದ ಸಂಕಲ್ಪನೆಯ ಘೋಷಣೆಯನ್ನು ಮಾಡಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಬೇಕು !

‘ನಮ್ಮ ಜೀವನವು ಆಧ್ಯಾತ್ಮಿಕ, ಆದಿಭೌತಿಕ ಮತ್ತು ಆದಿದೈವಿಕ ಹೀಗೆ ಮೂರು ಸ್ತರಗಳದ್ದಾಗಿದೆ, ಆದರೆ ‘ನಮ್ಮ ಜೀವನವು ಒಂದೇ ಸ್ತರದಲ್ಲಿದೆ. ಆದಿಭೌತಿಕ ಸ್ತರದಲ್ಲಿಯೇ ಇದೆ, ಎಂದು ತಿಳಿಯುವ ಕೆಲವು ಜನರು ವಿಜ್ಞಾನವಾದದ ಅಥವಾ ಬುದ್ಧಿವಾದದ ಡಂಗುರ ಸಾರುತ್ತಾರೆ; ಆದರೆ ಆ ಆಧಾರವು ಕಾಣಲು ಚೆನ್ನಾಗಿದ್ದರೂ, ಅಸ್ಥಿರ ಅಂದರೆ ಅವಿಶ್ವಾಸಾರ್ಹವಾಗಿರುತ್ತದೆ.

ಸಾಧಕರಿಗೆ ಸೂಚನೆ ಹಾಗೆಯೇ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ವಿನಂತಿ !

ಆಧುನೀಕರಣದಿಂದ ಸದ್ಯ ಎತ್ತಿನಗಾಡಿ ಅಥವಾ ಕುದುರೆ ಗಾಡಿ ತಯಾರಿಸುವ ಪ್ರಮಾಣವು ಕಡಿಮೆಯಾಗಿದ್ದರೂ, ಹಿಂದೆ ಎತ್ತಿನಗಾಡಿ ಅಥವಾ ಕುದುರೆಗಾಡಿ ತಯಾರಿಸಿದ ಅನೇಕ ಕುಶಲಕರ್ಮಿಗಳು ಇಂದಿಗೂ ಹಳ್ಳಿಗಳಲ್ಲಿದ್ದಾರೆ. ಅದರಲ್ಲಿ ನಿರ್ವಹಣೆ-ದುರುಸ್ತಿ ಮಾಡುವವರೂ ಒಳಗೊಂಡಿದ್ದಾರೆ. ತಮಗೆ ಇಂತಹ ಕುಶಲಕರ್ಮಿಗಳ ಪರಿಚಯವಿದ್ದಲ್ಲಿ ಅವರ ಮಾಹಿತಿಯನ್ನು ಕೆಳಗೆ ನೀಡಿದಂತೆ ಸ್ಥಳೀಯ ಸಾಧಕರಿಗೆ ತಿಳಿಸಬೇಕು.

ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ಸವಿನಯ ವಿನಂತಿ !

ಮೃತ್ಯುಪತ್ರವನ್ನು ತಯಾರಿಸಿ ತಮ್ಮ ಆಸ್ತಿಯನ್ನು ಒಬ್ಬರ ಹೆಸರಿಗೆ ಮಾಡುವುದಕ್ಕಿಂತ ಬದುಕಿರುವಾಗಲೇ ಆಸ್ತಿಯನ್ನು ಅರ್ಪಿಸುವುದು ಹೆಚ್ಚು ಅನುಕೂಲಕರವಾಗಿದೆ. ಏಕೆಂದರೆ ವ್ಯಕ್ತಿಯ ಮೃತ್ಯುವಿನ ನಂತರ ಅವರ ಮೃತ್ಯುಪತ್ರದಲ್ಲಿ ಉಲ್ಲೇಖಿಸಿದಂತೆ ಅವರು ಸತ್ ಕಾರ್ಯಕ್ಕೆ ಅರ್ಪಣೆ ಮಾಡಿದ ಆಸ್ತಿಯನ್ನು ಸನಾತನ ಸಂಸ್ಥೆಗೆ ದೊರಕಿಸಿಕೊಳ್ಳಲು ಮಾಡಬೇಕಾದ ಕಾನೂನುಬದ್ಧ ಮತ್ತು ನ್ಯಾಯಾಂಗ ಪ್ರಕ್ರಿಯೆಯು ಅತ್ಯಂತ ಜಟಿಲವಿದೆ.