ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರಸಮಿತಿ ಸರಕಾರವು ಅಲ್ಪಸಂಖ್ಯಾತರಿಗೆ ನಾಗರಿಕ ಸೇವಾ ಪರೀಕ್ಷೆಗಳಿಗೆ ಉಚಿತವಾಗಿ ಬೋಧನೆ ನೀಡಲಿದೆ

ಜಾತ್ಯತೀತ ಭಾರತದಲ್ಲಿ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಯೋಜನೆಗಳು ಮತ್ತು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ, ಇದೇ ದೊಡ್ಡ ತಮಾಷೆಯಾಗಿದೆ !

ಭಾಗ್ಯನಗರ (ತೆಲಂಗಾಣ) – ರಾಜ್ಯದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು ಅಲ್ಪಸಂಖ್ಯಾತ ಸಮುದಾಯದ ಯುವಕರಿಗೆ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಉಚಿತವಾಗಿ ಶಿಕ್ಷಣ ನೀಡುವಂತೆ ಘೋಷಣೆ ಮಾಡಿದೆ.

ಈ ಇಲಾಖೆಯಿಂದ ಆಯ್ಕೆಯಾದ ೧೦೦ ಅಭ್ಯರ್ಥಿಗಳಿಗೆ ಮಾತ್ರ ಉಚಿತವಾಗಿ ಬೋಧನೆ ನೀಡಲಾಗುವುದು. ಇದಕ್ಕಾಗಿ ಆಯ್ಕೆ ಪರೀಕ್ಷೆ ನಡೆಸಲಾಗುವುದು. ಈ ಅಭ್ಯರ್ಥಿಗಳಿಗೆ ರಾಜ್ಯ ಮಾನ್ಯತೆ ಪಡೆದ ‘ಇನ್ಸಿಟ್ಯೂಟ್’ನಲ್ಲಿ ಕಲಿಸಲಾಗುವುದು. ಅದರ ಹಣವನ್ನು ಸರಕಾರದಿಂದ ಪಾವತಿಸಲಾಗುವುದು. ಈ ಯೋಜನೆಯು ವಾರ್ಷಿಕ ಆದಾಯ ೨ ಲಕ್ಷ ರೂಪಾಯಿಗಿಂತ ಕಡಿಮೆ ಇರುವವರಿಗಾಗಿ ಇರಲಿದೆ.