ರಾಜಕೀಯ ಪಕ್ಷಗಳು ಮಹಾಪುರುಷರಂತೆ ಕಾರ್ಯ ಮಾಡಿದರೇ ಅವರಿಗೆ ಅಧಿಕಾರಕ್ಕಾಗಿ ಅಂತಹ ಪ್ರಯತ್ನಗಳನ್ನು ಮಾಡುವ ಅಗತ್ಯ ಬೀಳುವುದಿಲ್ಲ. ಜನರು ತಾವಾಗಿಯೇ ಅವರನ್ನು ಆಯ್ಕೆ ಮಾಡುತ್ತಾರೆ !
ಅಗರ್ತಲಾ (ತ್ರಿಪುರಾ) – ನನ್ನ ಹಳ್ಳಿಯಲ್ಲಿ ನಾನು ಕೆಲವು ವಿಷಯಗಳನ್ನು ನೋಡಿದೆ. ಅನೇಕರ ಮನೆಗಳಲ್ಲಿ ಜ್ಯೋತಿಬಸು, ಜೋಸೆಫ್ ಸ್ಟಾಲಿನ್, ಮಾವೋ ತ್ಸೆ ತುಂಗ್ ಛಾಯಾಚಿತ್ರಗಳು ನೋಡಲು ಸಿಕ್ಕಿತು. ದೇವತೆಗಳ ಚಿತ್ರಗಳನ್ನು ಇಡುವಲ್ಲಿ, ಈ ಚಿತ್ರಗಳು ಇದ್ದವು. ಕಳೆದ ಎರಡುವರೆ ವರ್ಷಗಳಲ್ಲಿ ನಿಮ್ಮ ಮನೆಯಲ್ಲಿ ಸ್ವಾಮಿ ವಿವೇಕಾನಂದರ ಚಿತ್ರವನ್ನು ಹಾಕಿದ್ದೀರಾ ? ತ್ರಿಪುರದ ಶೇ. ೮೦ ರಷ್ಟು ಮನೆಗಳಲ್ಲಿ ಸ್ವಾಮಿ ವಿವೇಕಾನಂದರ ಚಿತ್ರವನ್ನು ಹಾಕಿದರೆ ಭಾಜಪ ಸರಕಾರ ೩೦ ರಿಂದ ೩೫ ವರ್ಷಗಳ ಕಾಲ ಅಧಿಕಾರದಲ್ಲಿರುತ್ತದೆ ಎಂದು ತ್ರಿಪುರ ಮುಖ್ಯಮಂತ್ರಿ ಬಿಪ್ಲಾಬ್‌ಕುಮಾರ ದೇವ್ ಹೇಳಿದ್ದಾರೆ.
Hang Swami Vivekananda's Picture At Home And BJP Will Be In Power For 30 Years: Biplab Deb https://t.co/RkEKwkEovP pic.twitter.com/cfdthsmusX
— NDTV (@ndtv) October 9, 2020
ಅವರು ಭಾಜಪದ ಮಹಿಳಾ ಮೋರ್ಚಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ವಿವೇಕಾನಂದರ ಛಾಯಾಚಿತ್ರವನ್ನು ರಾಜ್ಯದ ಪ್ರತಿಯೊಂದು ಮನೆಯಲ್ಲೂ ವಿತರಿಸಬೇಕು, ಎಂದು ಸಲಹೆಯನ್ನೂ ನೀಡಿದರು.