ಲವ್ ಜಿಹಾದ್ ಅನ್ನು ತಿರಸ್ಕರಿಸಿ ಅದನ್ನು ‘ಪ್ರೀತಿ’ ಎಂದೆನ್ನುವ ತಥಾಕಥಿತ ಜಾತ್ಯತೀತವಾದಿಗಳು ಹಾಗೂ ಪ್ರಗತಿ (ಅಧೋಗತಿ) ಪರರು ಈಗ ಏಕೆ ಮಾತನಾಡುತ್ತಿಲ್ಲ ಅಥವಾ ‘ಘಟಿಸಿದ ಪ್ರಸಂಗವು ಸರಿ ಇದೆ’ ಎಂದು ಅವರಿಗೆ ಅನಿಸುತ್ತಿದೆಯೇ ?
ಬೆಂಗಳೂರು (ಕರ್ನಾಟಕ) – ಮುಸಲ್ಮಾನ ಹುಡುಗಿಯನ್ನು ಪ್ರೀತಿಸುತ್ತಿದ್ದ ಕೆ. ಲಕ್ಷ್ಮೀಪತಿ ಎಂಬ ಹಿಂದೂ ಯುವಕನನ್ನು ಹುಡುಗಿಯ ತಂದೆ ನಿಜಾಮುದ್ದೀನ್ ಹತ್ಯೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ನಿಜಾಮುದ್ದೀನ್ ಮತ್ತು ಅವರ ಪುತ್ರ ಸಿಕಂದರ್‌ನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇಬ್ರತ ಮತ್ತು ಮಹಮ್ಮದ ಎಂಬ ಇತರ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
On the pretext of discussing their marriage, the father took the 24-year-old man to a secluded place and strangled him with the help of his son and others.#Bengaluru #Crimehttps://t.co/D9WndQ7xmr
— IndiaToday (@IndiaToday) October 8, 2020
ವಿವಾಹದ ಮಾತುಕತೆಗಾಗಿ ನಿಜಾಮುದ್ದೀನರು ಲಕ್ಷ್ಮೀಪತಿಯನ್ನು ಕರೆದಿದ್ದರು. ಆ ಸಮಯದಲ್ಲಿ ಲಕ್ಷ್ಮಿಪತಿಯ ಸಹೋದರ ನಟರಾಜ ಇವರೂ ಉಪಸ್ಥಿತರಿದ್ದರು. ಮಾತುಕತೆಯ ಸಮಯದಲ್ಲಿ ಲಕ್ಷ್ಮೀಪತಿಯನ್ನು ಕತ್ತು ಹಿಸುಕಿ ಹತ್ಯೆ ಮಾಡಲಾಯಿತು. ಇದನ್ನು ನೋಡಿದ ನಟರಾಜನು ಅಲ್ಲಿಂದ ಓಡಿಹೋದನು.