ಸನಾತನ ಸಂಸ್ಥೆಯ ವತಿಯಿಂದ ಅಕ್ಟೋಬರ್ ೧೧ ರಿಂದ ‘ಆನಂದಮಯ ಜೀವನಕ್ಕಾಗಿ ಅಧ್ಯಾತ್ಮದ ಮಹತ್ವ’ ಈ ವಿಷಯದಲ್ಲಿ ೯ ಭಾಷೆಗಳಲ್ಲಿ ‘ಆನ್‌ಲೈನ್’ ಸಾಧನೆ ಪ್ರವಚನ ಮಾಲಿಕೆ !

ಸನಾತನ ಸಂಸ್ಥೆಯು ಕಳೆದ ಮೂರು ದಶಕಗಳಿಂದ ಜಿಜ್ಞಾಸು ಹಾಗೂ ಸಾಧಕರಿಗೆ ಅಧ್ಯಾತ್ಮ ಹಾಗೂ ಸಾಧನೆಯ ಬಗ್ಗೆ ಸಂದೇಹಗಳನ್ನು ನಿವಾರಿಸಿ ಅವರಿಗೆ ಈಶ್ವರಪ್ರಾಪ್ತಿಗಾಗಿ ಮಾರ್ಗದರ್ಶನ ಮಾಡುತ್ತಿದೆ. ಸದ್ಯ ಕೊರೋನಾ ಮಹಾಮಾರಿಯಿಂದಾಗಿ ಎಲ್ಲ ಜನರಿಗೆ ಸತ್ಸಂಗ ಹಾಗೂ ಪ್ರವಚನಕ್ಕಾಗಿ ಪ್ರತ್ಯಕ್ಷವಾಗಿ ಮನೆಯಿಂದ ಹೊರಹೋಗಲು ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ಮನೆಯಲ್ಲೇ ಇದ್ದು ಜನರಿಗೆ ಸಾಧನೆಯ ಬಗ್ಗೆ ಮಾರ್ಗದರ್ಶನ ಸಿಗಬೇಕು, ಅದಕ್ಕಾಗಿ ಸನಾತನ ಸಂಸ್ಥೆಯು ‘ಆನಂದಮಯ ಜೀವನ ಹಾಗೂ ಆಪತ್ಕಾಲದ ದೃಷ್ಟಿಯಿಂದ ಅಧ್ಯಾತ್ಮದ ಮಹತ್ವ’ ಈ ವಿಷಯದಲ್ಲಿ ‘ಆನ್‌ಲೈನ್ ಸಾಧನೆ ಪ್ರವಚನ ಮಾಲಿಕೆ’ ಆಯೋಜಿಸಲಾಗಿದೆ. ಈ ಆನ್‌ಲೈನ್ ಪ್ರವಚನವು ಅಕ್ಟೋಬರ್ ೧೧, ಅಕ್ಟೋಬರ್ ೧೮ ಹಾಗೂ ಅಕ್ಟೋಬರ್ ೨೪, ೨೦೨೦ ರಂದು ಕನ್ನಡ, ಹಿಂದಿ, ಆಂಗ್ಲ, ಗುಜರಾತಿ, ಮರಾಠಿ, ತೆಲುಗು, ಮಲ್ಯಾಳಮ್, ತಮಿಳು ಹಾಗೂ ಬಂಗಾಲಿ ಈ ೯ ಭಾಷೆಗಳಲ್ಲಿ ನಡೆಯಲಿದೆ. ಆದ್ದರಿಂದ ಎಲ್ಲ ಜಿಜ್ಞಾಸು ಬಂಧು-ಭಗಿನಿಯರು ಇದರ ಲಾಭವನ್ನು ಪಡೆದುಕೊಳ್ಳಬೇಕು, ಎಂದು ಸನಾತನ ಸಂಸ್ಥೆಯ ವತಿಯಿಂದ ಕರೆ ನೀಡಿದೆ.
ಧರ್ಮಶಾಸ್ತ್ರದಲ್ಲಿ ಈಶ್ವರಪ್ರಾಪ್ತಿಯ ಅನೇಕ ಮಾರ್ಗಗಳು ಹೇಳಲಾಗಿದೆ; ಆದರೆ ಈ ಸಾವಿರಾರು ಸಾಧನೆಯ ಮಾರ್ಗಗಳ ಪೈಕಿ ಯಾವ ಸಾಧನೆಯನ್ನು ಇಂದು ಆರಂಭಿಸಬೇಕು ? ದಿನನಿತ್ಯದ ಬಿಡುವಿಲ್ಲದ ಜೀವನ ಹಾಗೂ ಸದ್ಯದ ಕೊರೋನಾದಂತಹ ಆಪತ್ಕಾಲದಲ್ಲಿ ಅಧ್ಯಾತ್ಮದ ಮಹತ್ವವೇನು ? ಪಿತೃದೋಷ ಎಂದರೇನು ಹಾಗೂ ಅದರ ಪರಿಹಾರಕ್ಕಾಗಿ ಯಾವ ಸಾಧನೆಯನ್ನು ಮಾಡಬೇಕು ? ಜೀವನವನ್ನು ಆನಂದಮಯವನ್ನಾಗಿಸಲು ಯಾವ ಸಾಧನೆಯನ್ನು ಮಾಡಬೇಕು ? ಇಂತಹ ವಿಷಯಗಳ ಬಗ್ಗೆ ಈ ಪ್ರವಚನಗಳಲ್ಲಿ ಅಮೂಲ್ಯ ಮಾರ್ಗದರ್ಶನ ಮಾಡಲಿದೆ. ಸಾಧನೆಯಿಂದಾಗಿ ಆತ್ಮಬಲ ಹೆಚ್ಚಾಗುತ್ತದೆ ಹಾಗೂ ಇದರಿಂದ ಪ್ರತಿಕೂಲ ವಾತಾವರಣದಲ್ಲಿಯೂ ಆನಂದವಾಗಿ ಜೀವನವನ್ನು ಸಾಗಿಸಬಹುದು. ಅದಕ್ಕಾಗಿ ಈ ಸಾಧನೆಯ ಪ್ರವಚನ ಮಾಲಿಕೆ ಇದೆ. ಈ ಪ್ರವಚನದ ಮಾಲಿಕೆಯು ಈ ಮುಂದಿನ ಯೂ-ಟ್ಯೂಬ್ ಲಿಂಕ್‌ನಲ್ಲಿ ಪ್ರಸಾರವಾಗಲಿದೆ. ಜಿಜ್ಞಾಸುಗಳು ಇದರ ಲಾಭವನ್ನು ಪಡೆದುಕೊಳ್ಳಬೇಕು.

ಮೊದಲ ಪ್ರವಚನ : ಆನಂದಮಯ ಜೀವನ ಹಾಗೂ ಆಪತ್ಕಾಲ ಇವುಗಳ ದೃಷ್ಟಿಯಿಂದ ಅಧ್ಯಾತ್ಮದ ಮಹತ್ವ

ದಿನಾಂಕ : ರವಿವಾರ, ೧೧ ಅಕ್ಟೋಬರ್ ೨೦೨೦

  • ಬಿಡುವಿಲ್ಲದ ದಿನನಿತ್ಯದ ಜೀವನ ಹಾಗೂ ಸದ್ಯದ ಕೊರೋನಾನದ ವಿಪತ್ತಿನ ಕಾಲದಲ್ಲಿ ಅಧ್ಯಾತ್ಮದ ಮಹತ್ವವೇನು ?
  • ಪಿತೃದೋಷ ಎಂದರೇನು ಹಾಗೂ ಅದರ ಪರಿಹಾರಕ್ಕಾಗಿ ಯಾವ ಸಾಧನೆಯನ್ನು ಮಾಡಬೇಕು ?
  • ಆನಂದಮಯ ಜೀವನಕ್ಕಾಗಿ ಯಾವ ಸಾಧನೆಯನ್ನು ಮಾಡಬೇಕು ?

ದಿನನಿತ್ಯದ ಜೀವನದಲ್ಲಿ ಮಾರ್ಗದರ್ಶಕವಾಗಲಿರುವ ಇಂತಹ ವಿಷಯಗಳ ಪ್ರವಚನವನ್ನು ಆನ್‌ಲೈನ್‌ನ ಮಾಧ್ಯಮದಿಂದ ಆಯೋಜಿಸಲಾಗಿದೆ. ಎಲ್ಲ ಜಿಜ್ಞಾಸು ಬಂಧು-ಭಗಿನಿಯರು ಇದರ ಲಾಭವನ್ನು ಪಡೆದುಕೊಳ್ಳಿರಿ, ಎಂದು ವಿನಂತಿ.