ದೇವಸ್ಥಾನದ ಜಮೀನಿನ ಮೇಲೆ ಅಕ್ರಮ ನಿಯಂತ್ರಣವನ್ನು ವಿರೋಧಿಸಿದುದರೆಂದು ಮಾಡಿದ ಸೇಡಿನ ಕೃತ್ಯ
|
ಕರೌಲಿ (ರಾಜಸ್ಥಾನ) – ಇಲ್ಲಿಯ ಸಪೋಟರಾ ತಾಲ್ಲೂಕಿನ ರಾಧಾ ಗೋವಿಂದ ದೇವಸ್ಥಾನದ ೫೦ ವರ್ಷದ ಅರ್ಚಕ ಬಾಬುಲಾಲ ವೈಷ್ಣವ ಇವರನ್ನು ಅಕ್ಟೋಬರ್ ೮ ರಂದು ಭೂ ಮಾಫಿಯಾ ಹಾಗೂ ಅದರ ೫ ಸಹಚರರು ಸೇರಿ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟಿರುವ ಘಟನೆಯಾಗಿದೆ. ಆಸ್ಪತ್ರೆಗೆ ದಾಖಲಿಸಿದ ನಂತರ ಅಕ್ಟೋಬರ್ ೯ ರಂದು ಅವರು ಮೃತಪಟ್ಟರು. ಅರ್ಚಕ ಬಾಬುಲಾಲರು ಈ ಭೂ ಮಾಫಿಯಾಗಳು ದೇವಸ್ಥಾನದ ಭೂಮಿಯ ಅತಿಕ್ರಮಣ ಮಾಡುವುದನ್ನು ತಡೆಗಟ್ಟಿದ್ದರು. ಆದ್ದರಿಂದ ಅವರ ಹತ್ಯೆ ಗೈದಿದ್ದಾರೆ. ಪೊಲೀಸರು ೬ ಜನರ ವಿರುದ್ಧ ಅಪರಾಧವನ್ನು ದಾಖಲಿಸಿದ್ದಾರೆ. ಮುಖ್ಯ ಆರೋಪಿ ಕೈಲಾಶ್ ಮೀಣಾನನ್ನು ಪೊಲೀಸರು ಬಂಧಿಸಿದ್ದಾರೆ.
Rajasthan horror shocks India: Priest allegedly set on fire, died fighting mandir land grab. @INCIndia sarkar apparently hints at suicide, @BJP4India rakes up ‘Palghar pattern’.
Watch Rahul Shivshankar on India Upfront. | #PalgharRerunUnderCong pic.twitter.com/kHlEuQcxR1
— TIMES NOW (@TimesNow) October 9, 2020
೧. ಮೂಲಗಳ ಪ್ರಕಾರ, ಭೀಮ್ ಆರ್ಮಿ ಎಂಬ ಸಂಘಟನೆಯಿಂದ ಇಲ್ಲಿಯ ಹಿಂದುಳಿದ ವರ್ಗಗಳನ್ನು ಉದ್ರೇಕಿಸಲಾಗುತ್ತಿದೆ, ಅದೇರೀತಿ ಹಿಂದೂ ಧರ್ಮದ ಬಗ್ಗೆ ದ್ವೇಷ ಹಬ್ಬಿಸುವುದು ಹಾಗೂ ಅದನ್ನು ಅವಮಾನಿಸಲು ಇವರನ್ನೆಲ್ಲ ಉದ್ಯುಕ್ತಗೊಳಿಸಲಾಗುತ್ತಿದೆ. ಅದಕ್ಕಾಗಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
೨. ಅರ್ಚಕ ಬಾಬುಲಾಲರಿಗೆ ದೇವಸ್ಥಾನದ ಹೆಸರಿನಲ್ಲಿ ಜಮೀನು ನೀಡಲಾಗಿತ್ತು. ಇಲ್ಲಿ ಅವರು ತಮ್ಮ ಮನೆಯನ್ನೂ ಕಟ್ಟಿಕೊಂಡಿದ್ದರು. ಭೂ ಮಾಫಿಯಾದವರು ಈ ಭೂಮಿಯನ್ನು ಅತಿಕ್ರಮಿಸಲು ಬಯಸಿದ್ದರು. ಸ್ಥಳೀಯ ಹಿಂದುಳಿದ ವರ್ಗದವರು ದೇವಸ್ಥಾನದ ಮೇಲೆ ಹಿಡಿತ ಸಾಧಿಸಲು ಬಯಸಿದ್ದರು ಮತ್ತು ಅರ್ಚಕ ಬಾಬುಲಾಲರು ಇದನ್ನು ವಿರೋಧಿಸುತ್ತಿದ್ದರು, ಎಂದು ಸ್ಥಳೀಯರು ಹೇಳುತ್ತಿದ್ದಾರೆ.