ಸಾಮಾಜಿಕ ಮಾಧ್ಯಮಗಳ ಮೂಲಕ ವೆಬ್‌ಸಿರಿಸ್‌ಗೆ ವಿರೋಧ
ವೆಬ್‌ಸಿರಿಸ್‌ಗಳ ಮೂಲಕ ನಿರಂತರವಾಗಿ ಹಿಂದೂ ಧರ್ಮದ ವಿವಿಧ ರೀತಿಯಲ್ಲಿ ಅವಮಾನಿಸುತ್ತಿರುವುದು ಬೆಳಕಿಗೆ ಬರುತ್ತಿದ್ದರೂ ಅದರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಪ್ರಯತ್ನಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !
ನವ ದೆಹಲಿ – ಒಟಿಟಿ ಆಪ್ ‘ಝೀ ೫’ ನಿಂದ ಪ್ರಸಾರವಾಗಲಿರುವ ಮುಂಬರುವ ವೆಬ್ ಸಿರಿಸ್ ‘ಕಾಮಿಡಿ ಕಪಲ್’ನಲ್ಲಿ ಗೋಮೂತ್ರವನ್ನು ಅವಮಾನಿಸಲಾಗಿದೆ. ಈ ವೆಬ್‌ಸಿರಿಸ್ ಅಕ್ಟೋಬರ್ ೨೧ ರಿಂದ ಪ್ರಸಾರವಾಗಲಿದೆ. ಅವರ ‘ಟೀಝರ್’ (ಸಂಕ್ಷಿಪ್ತ ಭಾಗ) ಪ್ರಕಾಶಿತವಾದಾಗ ಈ ಅವಮಾನ ಮಾಡಿರುವುದು ಗಮನಕ್ಕೆ ಬಂದಿದೆ. ಇದನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ವಿರೋಧಿಸಲಾಗುತ್ತಿದೆ.
The promo of the yet to be released movie attracted sharp criticism on social media after the lead actor in the movie Saqib Saleem is seen making a ‘gaumutra’ jibe in what he tries to pass off as comedyhttps://t.co/1DEVXHusWQ
— OpIndia.com (@OpIndia_com) October 11, 2020
ಈ ವೆಬ್ ಸಿರಿಸ್‌ನಲ್ಲಿ ನಟ ಸಾಕಿಬ್ ಸಲೀಮ್, ‘ನನಗೆ ಕುಡಿಯಲು ತಂಪುಪಾನೀಯ ನೀಡಿ’ ನಿಮ್ಮಲ್ಲಿ ತಣ್ಣೀರು ಇದೆಯೇ ? ನಿಮ್ಮಲ್ಲಿ ಗೋಮೂತ್ರ ಇದೆಯೇ ? ನಾನು ಗೋ ಮೂತ್ರವನ್ನು ಕುಡಿಯಲು ಸಿದ್ಧನಿದ್ದೇನೆ. ಕನಿಷ್ಠಪಕ್ಕಷ ನನ್ನ ಎಲ್ಲಾ ಪಾಪಗಳಾದರೂ ನಾಶವಾಗುವುವು’ ಎಂದು ಹೇಳುತ್ತಾನೆ.