|
ನವ ದೆಹಲಿ – ನಾಗಾಲ್ಯಾಂಡ್ ಭಾರತದ ಹೊರಗಿನ ಪ್ರದೇಶವಾಗಿದೆ ಎಂದು ಹೇಳುವ ಆನ್‌ಲೈನ್ ವಸ್ತುಗಳನ್ನು ಮಾರಾಟ ಮಾಡುವ ‘ಫ್ಲಿಪ್‌ಕಾರ್ಟ್’ ಭಾರತೀಯರ ವಿರೋಧದ ನಂತರ ಕ್ಷಮೆಯಾಚಿಸಿದೆ. ‘ನಿಷ್ಕಾಳಜಿಯಿಂದಾಗಿ ಈ ತಪ್ಪಾಗಿದೆ’ ಎಂದು ಫ್ಲಿಪ್‌ಕಾರ್ಟ್ ಹೇಳಿದೆ.
Although not with Flipkart, Even I had this experience once.
Nagaland is India #Flipkart . pic.twitter.com/WDS7kodF94
— Rupin Sharma IPS (@rupin1992) October 8, 2020
ಫ್ಲಿಪ್‌ಕಾರ್ಟ್‌ನ ಫೇಸ್‌ಬುಕ್ ಪುಟದಲ್ಲಿ ಒಬ್ಬ ವ್ಯಕ್ತಿಯು ಪೋಸ್ಟ್ ಮಾಡುವ ಮೂಲಕ ‘ಫ್ಲಿಪ್‌ಕಾರ್ಟ್ ನಾಗಾಲ್ಯಾಂಡ್‌ನಲ್ಲಿ ವಸ್ತುಗಳನ್ನು ಏಕೆ ವಿತರಿಸುವುದಿಲ್ಲ ? ಅದು ಭಾರತದ ಒಂದು ರಾಜ್ಯವಾಗಿದೆ. ಫ್ಲಿಪ್ ಕಾರ್ಟ್ ಎಲ್ಲಾ ರಾಜ್ಯಗಳನ್ನು ಸಮಾನವಾಗಿ ಪರಿಗಣಿಸಬೇಕು’, ಎಂದು ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಫ್ಲಿಪ್‌ಕಾರ್ಟ್, ‘ನೀವು ನಮ್ಮಿಂದ ಸಾಹಿತ್ಯವನ್ನು ಖರೀದಿಸಲು ಬಯಸುತ್ತಿರುವುದು ಸಂತೋಷವಾಗಿದೆ; ಆದರೆ ನಮ್ಮ ಮಾರಾಟಗಾರರು ಭಾರತದ ಹೊರಗೆ ಸೇವೆ ಸಲ್ಲಿಸುವುದಿಲ್ಲ.’ ಈ ಬಗ್ಗೆ ಫ್ಲಿಪ್ ಕಾರ್ಟ್‌ಗೆ ವಿರೋಧ ಆರಂಭವಾದಾಗ ಅದು ಕ್ಷಮೆಯಾಚಿಸಿತು.
To those who were questioning me ! Here is the @Flipkart reply ! Don’t shoot the messenger 💪 Nagaland and NE is India even if your heart may not think so pic.twitter.com/qocNMXqH3N
— Pradyot_Tripura (@PradyotManikya) October 8, 2020