ಭರತಪುರ (ರಾಜಸ್ಥಾನ)ದಲ್ಲಿ ಗೋಕಳ್ಳಸಾಗಾಣಿಕೆಯಾಗುತ್ತಿದ್ದ ಬಗ್ಗೆ ಮಾಹಿತಿ ನೀಡಿಯೂ ಕಾರ್ಯಾಚರಿಸದ ನಿಷ್ಕ್ರೀಯ ಪೊಲೀಸರು

  • ನಿರ್ದಯಿ ಹಾಗೂ ಹಿಂದೂದ್ರೋಹಿ ಪೊಲೀಸರು !
  • ಕಾಂಗ್ರೆಸ್ ರಾಜ್ಯದಲ್ಲಿ ಹಿಂದೂಗಳು ಮಾತ್ರವಲ್ಲ ಗೋಮಾತೆಯೂ ಅಸುರಕ್ಷಿತವಾಗಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
  • ಇಂತಹ ಪೊಲೀಸರನ್ನು ನೌಕರಿಯಿಂದ ವಜಾ ಮಾಡಿ ಜೀವಾವಧಿ ಸೆರೆಮನೆಗೆ ಹಾಕಬೇಕು !
  • ಇಂತಹ ಪೊಲೀಸರಿರುವುದರಿಂದಲೇ ಗೋರಕ್ಷಕರು ರಸ್ತೆಗಿಳಿದು ಗೋರಕ್ಷಣೆ ಮಾಡಬೇಕಾಗುತ್ತದೆ. ಆದರೂ ಅವರನ್ನು ‘ಸಮಾಜಕಂಟಕರು’ ಎನ್ನಲಾಗುತ್ತದೆ !

ಭರತಪುರ (ರಾಜಸ್ಥಾನ) – ಇಲ್ಲಿನ ಸ್ಥಳೀಯ ವ್ಯಕ್ತಿಯೊಬ್ಬರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಚತುಷ್ಚಕ್ರ ವಾಹನದಲ್ಲಿ ದನಗಳ ಕಳ್ಳಸಾಗಣೆಯಾಗುತ್ತಿದೆ ಎಂಬ ಮಾಹಿತಿಯನ್ನು ನೀಡಿದರು; ಆದರೆ ಪೊಲೀಸರು ಅದರತ್ತ ದುರ್ಲಕ್ಷ ಮಾಡಿದ್ದರಿಂದ ಗೋ ಕಳ್ಳಸಾಗಣೆ ಮಾಡುವವರು ಹಸುವನ್ನು ತೆಗೆದುಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ರಾಜಕುಮಾರ ಸಿಂಗ್ ಅವರು ಪೊಲೀಸರಿಗೆ ಕರೆ ಮಾಡಿದಾಗ, ಅವರು ಸಿಂಗ್ ಅವರನ್ನು ಗೇಲಿ ಮಾಡಲು ಪ್ರಾರಂಭಿಸಿದರು. ಈ ಗೋಕಳ್ಳಸಾಗಣೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿರುವುದು ಬೆಳಕಿಗೆ ಬಂದಿದೆ. ಅದರಲ್ಲಿ ೩ ಗೋ ಕಳ್ಳರು ಹಸುವನ್ನು ಹಿಡಿದು ಚತುಷ್ಚಕ್ರ ವಾಹನದಲ್ಲಿ ಹಾಕುತ್ತಿರುವುದು ಕಾಣಿಸುತ್ತದೆ. ಅಕ್ಟೋಬರ್ ೯ ರಂದು ಈ ಘಟನೆಯು ನಡೆದಿದೆ.