ಆಂಧ್ರಪ್ರದೇಶದ ದೇವಾಲಯಗಳ ಮೇಲಿನ ದಾಳಿಯ ತನಿಖೆಗಾಗಿ ಸರಕಾರದಿಂದ ವಿಶೇಷ ತನಿಖಾ ತಂಡ

ರಾಜ್ಯದ ದೇವಾಲಯಗಳ ಮೇಲಿನ ದಾಳಿಗಳ ತನಿಖೆಗಾಗಿ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರ ನೇತೃತ್ವದಲ್ಲಿ ೧೬ ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಸೆಪ್ಟೆಂಬರ್ ೨೦೨೦ ರಿಂದ ನಡೆಯುತ್ತಿರುವ ದಾಳಿಗ ಬಗ್ಗೆ ತಂಡ ತನಿಖೆ ನಡೆಸಲಿದೆ.

ಸೀತಾ ಮಾತೆಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಕ್ಕಾಗಿ ತೃಣಮೂಲ ಕಾಂಗ್ರೆಸ್ ಸಂಸದ ವಿರುದ್ಧ ಅಪರಾಧ ದಾಖಲು

ರಾಜ್ಯದ ತೃಣಮೂಲ ಕಾಂಗ್ರೆಸ್ ಸಂಸದ ಮತ್ತು ಕೋಲಕಾತಾ ಉಚ್ಚ ನ್ಯಾಯಾಲಯದ ವಕೀಲರಾದ ಕಲ್ಯಾಣ ಬ್ಯಾನರ್ಜಿಯವರು ಸೀತಾ ಮಾತೆಯ ಬಗ್ಗೆ ಅಗೌರವ ತೋರಿರುವ ವಿರುದ್ಧ ಅಪರಾಧ ದಾಖಲಾಗಿದೆ. ಬಿಜೆಪಿ ಯುವ ಮೋರ್ಚಾ ಸದಸ್ಯ ಆಶಿಷ ಜೈಸ್ವಾಲ್ ಅವರು ದೂರು ನೀಡಿದ ನಂತರ ಈ ಅಪರಾಧವನ್ನು ದಾಖಲಿಸಲಾಗಿದೆ.

ಹಿಂದೂ ಮಹಾಸಭಾದಿಂದ ಗ್ವಾಲಿಯರ್‌ನಲ್ಲಿ ‘ಗಾಡ್ಸೆ ಜ್ಞಾನಶಾಲೆ’ಯ ಆರಂಭ !

ಹಿಂದೂ ಮಹಾಸಭಾ ‘ಗೋಡ್ಸೆ ಜ್ಞಾನಶಾಲೆ’ ಎಂಬ ಗ್ರಂಥಾಲಯ ಪ್ರಾರಂಭಿಸಿದ್ದು ಈ ಮೂಲಕ ಪಂಡಿತ ನಾಥುರಾಮ ಗೋಡ್ಸೆ ಅವರ ವಿಚಾರಗಳನ್ನು ಯುವಕರಿಗೆ ತಲುಪಿಸಲಾಗುವುದು ಎಂದು ತಿಳಿಸಿದೆ. ಇಲ್ಲಿಯ ದೌಲತ್‌ಗಂಜ್‌ನಲ್ಲಿರುವ ಹಿಂದೂ ಮಹಾಸಭಾ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂ. ನಾಥುರಾಮ್ ಗೋಡ್ಸೆ ಸೇರಿದಂತೆ ಅನೇಕ ಶ್ರೇಷ್ಠ ವ್ಯಕ್ತಿಗಳ ಛಾಯಾಚಿತ್ರಗಳು ಇಡಲಾಗಿತ್ತು, ಇಲ್ಲಿಯೇ ಈ ಜ್ಞಾನಶಾಲೆಯನ್ನು ಪ್ರಾರಂಭಿಸಲಾಗಿದೆ.

ಮಧ್ಯಪ್ರದೇಶದಲ್ಲಿರುವ ಚೋಪಾನಾ ರಾಷ್ಟ್ರೀಯ ಉದ್ಯಾನವನವನ್ನು ಪಾಕಿಸ್ತಾನದಲ್ಲಿ ತೋರಿಸಿದ ಗೂಗಲ್ !

ಗೂಗಲ್‌ನಿಂದ ಬೆತುಲ್‌ನ ಚಾಪ್ನಾ ಪ್ರದೇಶವನ್ನು ಪಾಕಿಸ್ತಾನದ ಭಾಗವಾಗಿದೆ ಎಂದು ತೋರಿಸಿದ್ದರಿಂದ ಜನರು ಅಸಮಧಾನಗೊಂಡಿದ್ದು, ಅವರು ಗೂಗಲ್ ವಿರುದ್ಧ ದೂರು ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಇಲ್ಲಿನ ರಾಷ್ಟ್ರೀಯ ಉದ್ಯಾನವನವನ್ನು ಪಾಕಿಸ್ತಾನದ ಭಾಗವಾಗಿ ತೋರಿಸಲಾಗಿದೆ.

‘ಆಂಧ್ರಪ್ರದೇಶದಲ್ಲಿ ದೇವಾಲಯಗಳ ಮೇಲಿನ ಆಘಾತಗೈಯ್ಯುವ ಷಡ್ಯಂತ್ರ ?’ ಈ ಕುರಿತು ವಿಶೇಷ ಸಂವಾದ !

2020 ರಲ್ಲಿ ಆಂಧ್ರಪ್ರದೇಶದಲ್ಲಿ 228 ದೇವಾಲಯಗಳಲ್ಲಿ ವಿಧ್ವಂಸದ ಘಟನೆಗಳು ನಡೆದಿವೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ. ಈ ಹಿಂದೂವಿರೋಧಿ ಘಟನೆಗಳ ಹಿಂದೆ ಯೋಜಿತ ಪಿತೂರಿ ಇದೆ. ವಾಸ್ತವದಲ್ಲಿ ಸರಕಾರವು ಎಲ್ಲಾ ಧರ್ಮಗಳಿಗೆ ಭದ್ರತೆಯನ್ನು ಒದಗಿಸಬೇಕು; ಆದರೆ ಸರ್ಕಾರ ಒಂದು ನಿರ್ದಿಷ್ಟ ಧರ್ಮದತ್ತ ವಾಲುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆಯ ನಕ್ಷೆಯಲ್ಲಿ ಜಮ್ಮು – ಕಾಶ್ಮೀರ ಮತ್ತು ಲಡಾಖ್ ಭಾರತದಿಂದ ಬೇರೆ ತೋರಿಸಲಾಗಿದೆ !

ವಿಶ್ವ ಆರೋಗ್ಯ ಸಂಸ್ಥೆಯಿಂದ ಜಾರಿ ಮಾಡಲದ ನಕ್ಷೆಯಲ್ಲಿ ಜಮ್ಮು – ಕಾಶ್ಮೀರ ಮತ್ತು ಲಡಾಖ್ ಭೂಭಾಗವನ್ನು ಭಾರತದಿಂದ ಬೇರೆಯಾಗಿರುವಂತೆ ತೋರಿಸಲಾಗಿದೆ. ಈ ಬಣ್ಣದ ನಕ್ಷೆಯು ಸಂಸ್ಥೆಯ ಅಧಿಕೃತ ಜಾಲತಾಣದಲ್ಲಿ ಲಭ್ಯವಿದೆ ಮತ್ತು ಭಾರತೀಯ ಪ್ರದೇಶವನ್ನು ಕಡು ನೀಲಿ ಬಣ್ಣದಲ್ಲಿ ತೋರಿಸಲಾಗಿದ್ದು, ಜಮ್ಮು – ಕಾಶ್ಮೀರ ಮತ್ತು ಲಡಾಖ್‌ನ ಭಾಗವನ್ನು ಬೂದು ಬಣ್ಣದಲ್ಲಿ ತೋರಿಸಲಾಗಿದೆ.

ಬಾಲಾಕೋಟ್ ಏರ್ ಸ್ಟ್ರೈಕ್‌ನಲ್ಲಿ ೩೦೦ ಜಿಹಾದಿ ಭಯೋತ್ಪಾದಕರು ಸಾವನ್ನಪ್ಪಿದ್ದು ನಿಜ !

ಭಾರತವು ಫೆಬ್ರವರಿ ೨೬, ೨೦೧೯ ರಂದು ಬೆಳಗ್ಗೆ ಪಾಕಿಸ್ತಾನದ ಬಾಲಕೋಟ್‌ನಲ್ಲಿ ಜಿಹಾದಿ ಉಗ್ರಗಾಮಿ ಗುಂಪು ಜೈಶ್-ಎ-ಮೊಹಮ್ಮದಿನ ತರಬೇತಿ ನೆಲೆಯ ಮೇಲೆ ನಡೆಸಿದ ವಾಯುದಾಳಿಯಲ್ಲಿ (ಏರ್ ಸ್ಟ್ರೈಕ್‌ನಲ್ಲಿ) ೩೦೦ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನದ ಮಾಜಿ ರಾಜಕೀಯ ಅಧಿಕಾರಿ ಆಗಾ ಹಿಲಾಲಿ ಇವರು ಒಪ್ಪಿಕೊಂಡಿದ್ದಾರೆ.

‘ಅಮೆಜಾನ್’ನ ‘ತಾಂಡವ’ ವೆಬ್ ಸರಣಿಯಿಂದ ಹಿಂದೂಗಳ ಬಗ್ಗೆ ನಕಾರಾತ್ಮಕ ಚಿತ್ರಣ

ಅಮೆಜಾನ್‌ನ ‘ಓಟಿಟಿ ಆಪ’ ಮೂಲಕ ತಾಂಡವ ಹೆಸರಿನ ವೆಬ್ ಸರಣಿ ಪ್ರದರ್ಶನಗೊಳ್ಳಲಿದೆ. ಸಧ್ಯ ಈ ವೆಬ್ ಸರಣಿಯನ್ನು ಒಂದು ಜಾಹಿರಾತಿನ ಮೂಲಕ ಪ್ರಕಾಶಿಸಲಾಗುತ್ತದೆ. ಇದರಲ್ಲಿ ಹಿಂದೂಗಳನ್ನು ನಕಾರಾತ್ಮಕವಾಗಿ ಚಿತ್ರೀಕರಿಸಲಾಗಿದ್ದು, ಮುಸಲ್ಮಾನರನ್ನು ಒಳ್ಳೆಯವರನ್ನಾಗಿ ತೋರಿಸಲಾಗಿದೆ.

ಆಂಧ್ರಪ್ರದೇಶದ ಹಿಂದೂ ದೇವಾಲಯಗಳ ಮೇಲಿನ ದಾಳಿಯ ವಿರುದ್ಧ ಟ್ವಿಟರ್ ನಲ್ಲಿ #SaveAndhraTemples ಹ್ಯಾಶ್‌ಟ್ಯಾಗ್ ಟ್ರೆಂಡ್ !

ಆಂಧ್ರಪ್ರದೇಶದ ದೇವಾಲಯಗಳ ಮೇಲೆ ಕಳೆದ ೧೮ ತಿಂಗಳಿನಿಂದ ನಿರಂತರವಾಗಿ ದಾಳಿ ನಡೆಯುತ್ತಿದೆ. ಇದರ ಬಗ್ಗೆ ದೇಶದಾದ್ಯಂತ ಹಿಂದೂಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಸಂಬಂಧ ಜನವರಿ ೯ ರಂದು ಧರ್ಮಾಭಿಮಾನಿಗಳಿಂದ #SaveAndhraTemples ಎಂಬ ‘ಹ್ಯಾಶ್‌ಟ್ಯಾಗ್’ ‘ಟ್ರೆಂಡ್’ ಮಾಡಲಾಯಿತು.

ಕೊಡವರ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು

‘ಕೊಡವರೂ(ಕೊಡವ ಸಮುದಾಯ) ಗೋಮಾಂಸವನ್ನು ತಿನ್ನುತ್ತಾರೆ’ ಎಂದು ಹೇಳಿಕೆ ನೀಡಿದ ಪ್ರಕರಣದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧಪಕ್ಷದ ಹಾಲಿ ನಾಯಕ ಸಿದ್ದರಾಮಯ್ಯ ವಿರುದ್ಧ ಧಾರ್ಮಿಕ ಭಾವನೆಗಳನ್ನು ನೋಯಿಸಿದ ಪ್ರಕರಣದಲ್ಲಿ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಸಿಆರ್‌ಪಿಸಿ ಕಲಂ ೧೫೩ಅ (ಧಾರ್ಮಿಕ ಧ್ವೇಷವನ್ನು ಹಬ್ಬಿಸುವ) ಅನ್ವಯ ಅಪರಾಧ ದಾಖಲಿಸಲಾಗಿದೆ.