‘ಆಂಧ್ರಪ್ರದೇಶದಲ್ಲಿ ದೇವಾಲಯಗಳ ಮೇಲಿನ ಆಘಾತಗೈಯ್ಯುವ ಷಡ್ಯಂತ್ರ ?’ ಈ ಕುರಿತು ವಿಶೇಷ ಸಂವಾದ !

ಸರಕಾರಕ್ಕೆ ಹಿಂದೂ ದೇವಾಲಯಗಳು ಬೇಕಿದ್ದರೆ ಅವರು ಮೊದಲಿಗೆ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕು ! – ಎಂ. ನಾಗೇಶ್ವರ ರಾವ್, ‘ಸಿಬಿಐ’ನ ಮಾಜಿ ಪ್ರಭಾರಿ ನಿರ್ದೇಶಕ

2020 ರಲ್ಲಿ ಆಂಧ್ರಪ್ರದೇಶದಲ್ಲಿ 228 ದೇವಾಲಯಗಳಲ್ಲಿ ವಿಧ್ವಂಸದ ಘಟನೆಗಳು ನಡೆದಿವೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ. ಈ ಹಿಂದೂವಿರೋಧಿ ಘಟನೆಗಳ ಹಿಂದೆ ಯೋಜಿತ ಪಿತೂರಿ ಇದೆ. ವಾಸ್ತವದಲ್ಲಿ ಸರಕಾರವು ಎಲ್ಲಾ ಧರ್ಮಗಳಿಗೆ ಭದ್ರತೆಯನ್ನು ಒದಗಿಸಬೇಕು; ಆದರೆ ಸರ್ಕಾರ ಒಂದು ನಿರ್ದಿಷ್ಟ ಧರ್ಮದತ್ತ ವಾಲುತ್ತಿದೆ. ಇದು ಜಾತ್ಯತೀತತೆಯ ಲಕ್ಷಣವಲ್ಲ. ಹಿಂದೂ ಸಮುದಾಯವು ಒಗ್ಗೂಡಿ ಆಂಧ್ರಪ್ರದೇಶ ಸರಕಾರವು ಆಕ್ರಮಿಸಿಕೊಂಡಿರುವ 24,632 ದೇವಾಲಯಗಳ ರಕ್ಷಣೆಗಾಗಿ ‘ಶ್ಯಾಡೋ ಕ್ಯಾಬಿನೆಟ್’ನಂತಹ ‘ಶ್ಯಾಡೋ’ ಟ್ರಸ್ಟ್‌ಗಳನ್ನು ಪ್ರತಿಯೊಂದು ದೇವಾಲಯಗಳಲ್ಲಿ ಸ್ಥಾಪಿಸುವ ಮೂಲಕ ಹೋರಾಡಬೇಕು. ವಾಸ್ತವದಲ್ಲಿ ಜಾತ್ಯತೀತ ಸರಕಾರಕ್ಕೆ ಹಿಂದೂ ದೇವಾಲಯಗಳನ್ನು ವಶಪಡಿಸಿಕೊಳ್ಳುವ ಹಕ್ಕಿಲ್ಲ. ಸರಕಾರಕ್ಕೆ ಹಿಂದೂ ದೇವಾಲಯಗಳು ಬೇಕಿದ್ದರೆ ಮೊದಲಿಗೆ ಅದು ದೇಶವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕು ಮತ್ತು ನಂತರ ದೇವಾಲಯಗಳನ್ನು ನೋಡಿಕೊಳ್ಳಬೇಕು, ಎಂದು ಭಾರತೀಯ ಪೊಲೀಸ್ ಸೇವೆಯ ಮಾಜಿ ಅಧಿಕಾರಿ ಹಾಗೂ ‘ಸಿಬಿಐ’ನ ಮಾಜಿ ಪ್ರಭಾರಿ ಸಂಚಾಲಕರಾದ ಶ್ರೀ. ಎಮ್. ನಾಗೇಶ್ವರ ರಾವ್ ಇವರು ಪ್ರಖರ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಚರ್ಚಾ ಹಿಂದೂ ರಾಷ್ಟ್ರ ಕಿ’ ಕಾರ್ಯಕ್ರಮದಲ್ಲಿ ‘ಆಂಧ್ರಪ್ರದೇಶದಲ್ಲಿ ದೇವಾಲಯಗಳ ಮೇಲೆ ಆಘಾತಗೈಯ್ಯುವ ಷಡ್ಯಂತ್ರ’ ಎಂಬ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ಫೇಸ್‌ಬುಕ್ ಮತ್ತು ಯೂಟ್ಯೂಬ್ ಮೂಲಕ ೪೪,೪೯೬ ಜನರು ವೀಕ್ಷಿಸಿದ್ದಾರೆ.

ಈ ಸಮಯದಲ್ಲಿ ತೆಲಂಗಾಣ ರಾಜ್ಯದ ‘ಪ್ರಜ್ಞಾ ಭಾರತಿ’ ಇದರ ರಾಜ್ಯ ಉಪಾಧ್ಯಕ್ಷರಾದ ಶ್ರೀ. ಗಿರಿಧರ್ ಮಮಿಡಿಯವರು ಮಾತನಾಡುತ್ತಾ, ‘ಗೋವಾದಲ್ಲಿ ಪೋರ್ಚುಗೀಸರ ಆಳ್ವಿಕೆ ಇದ್ದಾಗ ಸೇಂಟ್ ಜೇವಿಯರ್ ಮುಂದಿನಂತೆ ಹೇಳುತ್ತಿದ್ದ, ‘ಮಕ್ಕಳು ನನ್ನ ಮನೆಗೆ ಬಂದು ತಮ್ಮ ತಂದೆ-ತಾಯಿಯರು ಪೂಜಿಸುವ ವಿಗ್ರಹಗಳನ್ನು ಒಡೆದೆವು ಎಂದು ಹೇಳಿದಾಗ ನನಗೆ ತುಂಬಾ ಸಂತೋಷವಾಗುತ್ತಿತ್ತು.’ ಇಂತಹ ವಿಚಾರವುಳ್ಳವರ ಕೈವಾಡ ಈ ಮೂರ್ತಿಧ್ವಂಸದ ಹಿಂದಿದೆ. ರಾಜ್ಯ ಸರಕಾರವು ಈ ಘಟನೆಗಳನ್ನು ತಡೆಯದಿದ್ದರೆ, ಕೇಂದ್ರ ಸರಕಾರ ಮಧ್ಯ ಪ್ರವೇಶಿಸಬೇಕು; ಅಲ್ಲದೆ ಹಿಂದೂಗಳು ಈ ವಿಷಯದ ಬಗ್ಗೆ ದೇಶಾದ್ಯಂತ ಜಾಗೃತಿ ಮೂಡಿಸಬೇಕು, ಎಂದರು

ತೆಲಂಗಾಣದಲ್ಲಿ ರಾಷ್ಟ್ರೀಯ ಶಿವಾಜಿ ಸೇನೆಯ ಅಧ್ಯಕ್ಷ ಶ್ರೀ. ಶ್ರೀನಿವಾಸ ಚಾರಿಯವರು ಮಾತನಾಡುತ್ತಾ, ‘ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ಮೂರ್ತಿ ಭಗ್ನದ ಘಟನೆಗಳನ್ನು ತಡೆಯುವ ಭರವಸೆ ನೀಡಿದ ನಂತರವೂ, ನಾಲ್ಕು ಸ್ಥಳಗಳಲ್ಲಿ ಮೂರ್ತಿಧ್ವಂಸವಾಗಿದೆ. ಆದ್ದರಿಂದ, ನಾವು ಸರಕಾರದ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದೇವೆ, ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆಯವರು ಮಾತನಾಡುತ್ತಾ, ‘ಆಂಧ್ರಪ್ರದೇಶದ ಸರಕಾರವು ದೇವಾಲಯಗಳಿಂದ ಕೋಟಿ ರೂಪಾಯಿಗಳನ್ನುತೆಗೆದುಕೊಳ್ಳುತ್ತಿದ್ದರೂ ಅವುಗಳಿಗೆ ಏಕೆ ಭದ್ರತೆ ನೀಡುತ್ತಿಲ್ಲ. 200 ಕ್ಕೂ ಹೆಚ್ಚು ದೇವಾಲಯಗಳಲ್ಲಿ ಒಂದೇ ರೀತಿಯ ದಾಳಿಗಳು ನಡೆಯುತ್ತಿರುವಾಗ ಇದು ಹಿಂದೂಗಳ ಶ್ರದ್ಧೆಗೆ ಧಕ್ಕೆ ತರುವ ಯೋಜಿತ ಪಿತೂರಿ ಎಂದು ಸರಕಾರಕ್ಕೆ ಏಕೆ ಅರ್ಥವಾಗುತ್ತಿಲ್ಲ ? ಈ ಹಿಂದೆ ಗೋವಾದಲ್ಲಿಯೂ ಅನೇಕ ದೇವಾಲಯಗಳಲ್ಲಿ ಮೂರ್ತಿಧ್ವಂಸದ ಘಟನೆಗಳು ನಡೆದಿವೆ. ಕರ್ನಾಟಕದಲ್ಲಿ 5-6 ಚರ್ಚುಗಳ ಮೇಲೆ ಕೇವಲ ಕಲ್ಲು ತೂರಿದ ಘಟನೆಗಳಾದಾಗ ಭಾರತದಲ್ಲಿ ಚರ್ಚ್‌ಗಳು ಅಪಾಯದಲ್ಲಿವೆ ಎಂದು ಪ್ರಚಾರ ಮಾಡಿ ಈ ವಿಷಯವನ್ನು ಅಂತರರಾಷ್ಟ್ರೀಯ ಸಮಸ್ಯೆಯನ್ನಾಗಿ ಮಾಡಲಾಯಿತು; ಆದರೆ ನೂರಾರು ದೇವಾಲಯಗಳ ಮೇಲೆ ದಾಳಿ ನಡೆದರೂ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ! ಆದ್ದರಿಂದ ಹಿಂದೂಗಳು ಮಾತ್ರ ಧ್ವನಿ ಎತ್ತಬೇಕು ಮತ್ತು ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಒತ್ತಾಯಿಸಬೇಕು.