ಆಂಧ್ರಪ್ರದೇಶದ ದೇವಾಲಯಗಳ ಮೇಲಿನ ದಾಳಿಯ ತನಿಖೆಗಾಗಿ ಸರಕಾರದಿಂದ ವಿಶೇಷ ತನಿಖಾ ತಂಡ

ಈ ತನಿಖೆಯಿಂದ ನಿಜವಾದ ಅಪರಾಧಿಗಳು ಸಿಗಲಿ ಎಂದು ಹಿಂದೂಗಳ ಅಪೇಕ್ಷೆಯಾಗಿದೆ !

ಅಮರಾವತಿ (ಆಂಧ್ರಪ್ರದೇಶ) – ರಾಜ್ಯದ ದೇವಾಲಯಗಳ ಮೇಲಿನ ದಾಳಿಗಳ ತನಿಖೆಗಾಗಿ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರ ನೇತೃತ್ವದಲ್ಲಿ ೧೬ ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಸೆಪ್ಟೆಂಬರ್ ೨೦೨೦ ರಿಂದ ನಡೆಯುತ್ತಿರುವ ದಾಳಿಗ ಬಗ್ಗೆ ತಂಡ ತನಿಖೆ ನಡೆಸಲಿದೆ. ಭ್ರಷ್ಟಾಚಾರ ನಿಗ್ರಹ ಇಲಾಖೆಯ ವಿಜಯವಾಡ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕ ಅಶೋಕ ಕುಮಾರ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಈ ತಂಡವು ನೇರವಾಗಿ ಮುಖ್ಯಮಂತ್ರಿಗೆ ವರದಿಯನ್ನು ಸಲ್ಲಿಸಲಿದೆ. ತಂಡ ೧ ಪೊಲೀಸ್ ವರಿಷ್ಠಾಧಿಕಾರಿ, ೨ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ೨ ಉಪ ಅಧೀಕ್ಷಕರು, ೨ ಸಹಾಯಕ ಪೊಲೀಸ್ ಆಯುಕ್ತರು ಮತ್ತು ಇತರ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಿರುತ್ತದೆ.
ದೇವಾಲಯಗಳ ಮೇಲಾಗುತ್ತಿರುವ ದಾಳಿ ಮತ್ತು ಮೂರ್ತಿ ಭಂಜನೆಯ ಘಟನೆಗಳು ರಾಜ್ಯದಲ್ಲಿ ಧಾರ್ಮಿಕ ಶಾಂತಿಗೆ ಭಂಗ ತಂದಿವೆ, ಆದ್ದರಿಂದ ತನಿಖಾ ಸಮಿತಿಯನ್ನು ರಚಿಸಲಾಗುತ್ತಿದೆ. ಈ ಸಮಿತಿಯಲ್ಲಿರುವ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಸರಿಯಾದ ಸೌಲಭ್ಯ ಕಲ್ಪಿಸುವಂತೆ ಆದೇಶಿಸಲಾಗಿದೆ. ಸಮಿತಿಗೆ ಸಹಾಯ ಮಾಡುವಂತೆ ಗೂಢಚರ ಇಲಾಖೆಯನ್ನು ಆದೇಶಿಸಲಾಗಿದೆ. ತಂಡವು ದಾಳಿಯ ವಿಧಾನವನ್ನು ಅಧ್ಯಯನ ಮಾಡಿ ತನಿಖೆ ಮಾಡಲಿದೆ.

ದೇವಾಲಯಗಳಿಗೆ ಶಿಲಾನ್ಯಾಸ ಮತ್ತು ಭೂಮಿಪೂಜೆ ಮಾಡಿದ ಮುಖ್ಯಮಂತ್ರಿ ಜಗನಮೋಹನ್ ರೆಡ್ಡಿ

ಮುಖ್ಯಮಂತ್ರಿ ಜಗನಮೋಹನ್ ರೆಡ್ಡಿಯವರು ವಿಜಯವಾಡದಲ್ಲಿ ದೇವಾಲಯಗಳ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದರು. ಇವುಗಳಲ್ಲಿ ಅಂಜನೇಯ ಸ್ವಾಮಿ, ರಾಹು-ಕೇತು, ಸೀತಮ್ಮಾವರಿ ಮತ್ತು ವೇಣುಗೋಪಾಲ ದೇವಾಲಯಗಳು ಸೇರಿವೆ. ಅಲ್ಲದೆ, ಮುಖ್ಯಮಂತ್ರಿ ರೆಡ್ಡಿಯವರು ಕನಕದುರ್ಗ ದೇವಸ್ಥಾನ ಪ್ರದೇಶದ ೮ ದೇವಾಲಯಗಳ ಭೂಮಿ ಪೂಜೆಯನ್ನು ಮಾಡಿದರು. ಇದಕ್ಕಾಗಿ ೭೭ ಕೋಟಿ ರೂಪಾಯಿ ಖರ್ಚು ಮಾಡುವವರಿದ್ದಾರೆ. ಜನವರಿ ೩ ರಂದು ವಿಜಯವಾಡದ ಸೀತಾರಾಮ ದೇವಸ್ಥಾನದಲ್ಲಿರುವ ಸೀತಾ ದೇವಿಯ ಮೂರ್ತಿಯನ್ನು ಅಜ್ಞಾತರು ಒಡೆದುಹಾಕಿದ್ದರು.