ಹಿಂದೂ ಮಹಾಸಭಾದಿಂದ ಗ್ವಾಲಿಯರ್‌ನಲ್ಲಿ ‘ಗಾಡ್ಸೆ ಜ್ಞಾನಶಾಲೆ’ಯ ಆರಂಭ !

ಗ್ವಾಲಿಯರ್ (ಮಧ್ಯಪ್ರದೇಶ) – ಹಿಂದೂ ಮಹಾಸಭಾ ‘ಗೋಡ್ಸೆ ಜ್ಞಾನಶಾಲೆ’ ಎಂಬ ಗ್ರಂಥಾಲಯ ಪ್ರಾರಂಭಿಸಿದ್ದು ಈ ಮೂಲಕ ಪಂಡಿತ ನಾಥುರಾಮ ಗೋಡ್ಸೆ ಅವರ ವಿಚಾರಗಳನ್ನು ಯುವಕರಿಗೆ ತಲುಪಿಸಲಾಗುವುದು ಎಂದು ತಿಳಿಸಿದೆ. ಇಲ್ಲಿಯ ದೌಲತ್‌ಗಂಜ್‌ನಲ್ಲಿರುವ ಹಿಂದೂ ಮಹಾಸಭಾ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂ. ನಾಥುರಾಮ್ ಗೋಡ್ಸೆ ಸೇರಿದಂತೆ ಅನೇಕ ಶ್ರೇಷ್ಠ ವ್ಯಕ್ತಿಗಳ ಛಾಯಾಚಿತ್ರಗಳು ಇಡಲಾಗಿತ್ತು, ಇಲ್ಲಿಯೇ ಈ ಜ್ಞಾನಶಾಲೆಯನ್ನು ಪ್ರಾರಂಭಿಸಲಾಗಿದೆ. ‘ಈ ಜ್ಞಾನಶಾಲೆ ಯುವ ಪೀಳಿಗೆಗೆ ಭಾರತದ ವಿಭಜನೆಯ ಅಂಶಗಳು ಮತ್ತು ವಿವಿಧ ರಾಷ್ಟ್ರೀಯ ನಾಯಕರ ಬಗ್ಗೆ ಮಾಹಿತಿ ನೀಡಲಿದೆ’ ಎಂದು ಸಂಘಟನೆ ತಿಳಿಸಿದೆ.

ಹಿಂದೂ ಮಹಾಸಭಾದ ಉಪಾಧ್ಯಕ್ಷ ಜಯವೀರ ಭಾರದ್ವಾಜ ಇವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ‘ನಮ್ಮೊಂದಿಗೆ ಯುವಕರೂ, ಅನೇಕ ಮಹಿಳೆಯರೂ ಇದ್ದಾರೆ. ಗುರು ಗೋಬಿಂದ ಸಿಂಗ್, ಡಾ. ಹೆಡಗೆವಾರ, ಸ್ವಾತ್ಯಂತ್ರ್ಯವೀರ ಸಾವರ್ಕರ್, ಶ್ಯಾಮಪ್ರಸಾದ್ ಮುಖರ್ಜಿ ಮುಂತಾದ ಮಹಾನ್ ವ್ಯಕ್ತಿಗಳಿಂದ ಗೋಡ್ಸೆಯವರು ಸ್ಫೂರ್ತಿ ಪಡೆದಿದ್ದರು. ಈ ದೇಶವನ್ನು ಯಾರಾದರೂ ಒಡೆಯಲು ಪ್ರಯತ್ನಿಸಿದರೆ, ಹಿಂದೂ ಮಹಾಸಭಾ ಅದಕ್ಕೆ ಪ್ರಖರವಾಗಿ ಉತ್ತರಿಸಲಿದೆ, ಎಂದು ನಾವು ಹೇಳಲು ಬಯಸುತ್ತೇವೆ’.