ಆಂಧ್ರಪ್ರದೇಶದ ಹಿಂದೂ ದೇವಾಲಯಗಳ ಮೇಲಿನ ದಾಳಿಯ ವಿರುದ್ಧ ಟ್ವಿಟರ್ ನಲ್ಲಿ #SaveAndhraTemples ಹ್ಯಾಶ್‌ಟ್ಯಾಗ್ ಟ್ರೆಂಡ್ !

ರಾಷ್ಟ್ರೀಯ ಟ್ರೆಂಡ್‌ನಲ್ಲಿ ನಾಲ್ಕನೇ ಸ್ಥಾನ !

ಮುಂಬಯಿ – ಆಂಧ್ರಪ್ರದೇಶದ ದೇವಾಲಯಗಳ ಮೇಲೆ ಕಳೆದ ೧೮ ತಿಂಗಳಿನಿಂದ ನಿರಂತರವಾಗಿ ದಾಳಿ ನಡೆಯುತ್ತಿದೆ. ಇದರ ಬಗ್ಗೆ ದೇಶದಾದ್ಯಂತ ಹಿಂದೂಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಸಂಬಂಧ ಜನವರಿ ೯ ರಂದು ಧರ್ಮಾಭಿಮಾನಿಗಳಿಂದ #SaveAndhraTemples ಎಂಬ ‘ಹ್ಯಾಶ್‌ಟ್ಯಾಗ್’ ‘ಟ್ರೆಂಡ್’ ಮಾಡಲಾಯಿತು. ಈ ಟ್ರೆಂಡ್ ರಾಷ್ಟ್ರೀಯ ಟ್ರೆಂಡ್‌ಗಳಲ್ಲಿ ನಾಲ್ಕನೇ ಸ್ಥಾನದಲ್ಲಿತ್ತು. ಇದರಲ್ಲಿ ೨೦ ಸಾವಿರಕ್ಕೂ ಹೆಚ್ಚು ಹಿಂದೂಗಳು ಟ್ವೀಟ್ ಮಾಡಿ ಅನೇಕ ದೇವಾಲಯಗಳನ್ನು ಧ್ವಂಸ ಮಾಡಿರುವುದನ್ನು ವಿರೋಧಿಸಿದರು. ದೇವಾಲಯಗಳ ಮೇಲಿನ ದಾಳಿಯನ್ನು ತಡೆಯಲು ಹಿಂದೂಗಳು ಒಂದಾಗಬೇಕು ಎಂದು ಕರೆ ನೀಡುವುದರೊಂದಿಗೆ ದೇವಾಲಯಗಳ ರಕ್ಷಣೆಗಾಗಿ ಜಗನ್‌ಮೋಹನ್ ರೆಡ್ಡಿ ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.

ಕೆಲವು ಧರ್ಮಾಭಿಮಾನಿಗಳ ಟ್ವೀಟ್‌ಗಳು

೧. ದೇವಾಲಯಗಳನ್ನು ರಕ್ಷಿಸುವಲ್ಲಿ ಸರಕಾರಗಳು ಏಕೆ ವಿಫಲವಾಗಿವೆ ? ದೇವಾಲಯಗಳ ಸರಕಾರೀಕರಣ ನಿಲ್ಲಿಸಬೇಕು ಮತ್ತು ದೇವಾಲಯಗಳನ್ನು ಭಕ್ತರಿಗೆ ಹಸ್ತಾಂತರಿಸಬೇಕು.

೨. ಆಂಧ್ರಪ್ರದೇಶದಲ್ಲಿ ಚರ್ಚ್‌ನ ಗಾಜು ಒಡೆದರೆ ಒಂದೇ ದಿನದಲ್ಲಿ ೩೬ ಜನರ ವಿರುದ್ಧ ಅಪರಾಧ ದಾಖಲಾಗುತ್ತದೆ; ಆದರೆ ೧೨೦ ದೇವಾಲಯಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ. ಇದು ಆಂಧ್ರಪ್ರದೇಶ ಸರಕಾರದ ಓಲೈಕೆಯ ವೈಶಿಷ್ಟ್ಯಪೂರ್ಣ ನೀತಿಯಾಗಿದೆ !

೩. ದೇವಾಲಯಗಳ ಮೇಲಿನ ದಾಳಿಯನ್ನು ನೋಡುವಾಗ, ‘ನಾವು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದೇವೆಯೇ, ಅಲ್ಲಿ ಪ್ರತಿದಿನ ಹಿಂದೂಗಳ ಶ್ರದ್ಧಾಸ್ಥಾನಗಳ ಮೇಲೆ ದಾಳಿ ನಡೆಯುತ್ತಿರುತ್ತದೆ ?’ ಎಂಬ ಪ್ರಶ್ನೆ ನಿರ್ಮಾಣವಾಗುತ್ತದೆ. ಭಾರತದಲ್ಲಿ ದೇವಾಲಯಗಳು ಸುರಕ್ಷಿತವಾಗಿಲ್ಲದಿದ್ದರೆ, ಅವು ಬೇರೆಡೆ ಹೇಗೆ ಸುರಕ್ಷಿತವಾಗಿರಲು ಸಾಧ್ಯ ?