‘ಅಮೆಜಾನ್’ನ ‘ತಾಂಡವ’ ವೆಬ್ ಸರಣಿಯಿಂದ ಹಿಂದೂಗಳ ಬಗ್ಗೆ ನಕಾರಾತ್ಮಕ ಚಿತ್ರಣ

ಹಿಂದೂಗಳನ್ನು ಭ್ರಷ್ಟ ಹಾಗೂ ಗೂಂಡಾ ಎಂದೂ ಮತ್ತು ಮುಸಲ್ಮಾನನನ್ನು ಒಳ್ಳೆಯವನ್ನಾಗಿ ತೋರಿಸಿದೆ !

‘ಅಮೆಜಾನ್’ನಿಂದ ಸತತವಾಗಿ ಆಗುತ್ತಿರುವ ಹಿಂದುದ್ವೇಷವನ್ನು ತಡೆಗಟ್ಟಲು ಕೇಂದ್ರ ಸರಕಾರವು ಈಗಲಾದರೂ ಅದರ ಮೇಲೆ ನಿಷೇಧವನ್ನು ಹೇರಬೇಕು ಹಾಗೂ ಹಿಂದೂದ್ವೇಷವನ್ನು ಶಾಶ್ವತವಾಗಿ ನಿಲ್ಲಿಸಬೇಕು !

ನವದೆಹಲಿ – ಅಮೆಜಾನ್‌ನ ‘ಓಟಿಟಿ ಆಪ’ ಮೂಲಕ ತಾಂಡವ ಹೆಸರಿನ ವೆಬ್ ಸರಣಿ ಪ್ರದರ್ಶನಗೊಳ್ಳಲಿದೆ. ಸಧ್ಯ ಈ ವೆಬ್ ಸರಣಿಯನ್ನು ಒಂದು ಜಾಹಿರಾತಿನ ಮೂಲಕ ಪ್ರಕಾಶಿಸಲಾಗುತ್ತದೆ. ಇದರಲ್ಲಿ ಹಿಂದೂಗಳನ್ನು ನಕಾರಾತ್ಮಕವಾಗಿ ಚಿತ್ರೀಕರಿಸಲಾಗಿದ್ದು, ಮುಸಲ್ಮಾನರನ್ನು ಒಳ್ಳೆಯವರನ್ನಾಗಿ ತೋರಿಸಲಾಗಿದೆ.

Amazon Prime Video India

ಈ ಜಾಹೀರಾತಿನಲ್ಲಿ ನಟ ಸೈಫ್ ಅಲಿಖಾನ್ ಇವರನ್ನು ಭ್ರಷ್ಟ ಹಿಂದೂ ನಾಯಕನನ್ನಾಗಿ ತೋರಿಸಲಾಗಿದೆ. ಆತ ಜನಿವಾರವನ್ನು ಹಾಕಿಕೊಂಡು ಚಾಣಕ್ಯ ನೀತಿಯ ಅಂಶಗಳನ್ನು ಅನುಸರಿಸುತ್ತಾನೆ, ಎಂದು ತೋರಿಸಲಾಗಿದೆ. ಇದರಲ್ಲಿ ಒಂದು ಹಳದಿ ಬಣ್ಣದ ಧ್ವಜವನ್ನು ತೋರಿಸಲಾಗಿದ್ದು ಅದರ ಮೇಲೆ ಸೂರ್ಯನ ಚಿಹ್ನೆ ಇದೆ. ಇದರಲ್ಲಿ ಒಂದು ನಕಾರಾತ್ಮಕ ಪಾತ್ರವನ್ನೂ ತೋರಿಸಲಾಗಿದೆ. ಆತನ ಹೆಸರು ‘ಶಿವಾ’ ಎಂದು ಇಡಲಾಗಿದೆ ಆತ ಹಣೆಯ ಮೇಲೆ ತಿಲಕವನ್ನು ಹಚ್ಚಿಕೊಂಡಿರುತ್ತಾರೆ. ಆತನನ್ನು ಕೋಪಿಷ್ಠದಂತೆ ತೋರಿಸಲಾಗಿದೆ. ಈ ಪಾತ್ರವನ್ನು ಝಿಶಾನ್ ಅಯುಬ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಓರ್ವ ಮುಸಲ್ಮಾನ ಯುವತಿಯನ್ನೂ ತೋರಿಸಲಾಗಿದೆ. ಆಕೆಯ ಹೆಸರು ಸನಾ ಎಂದು ಇಡಲಾಗಿದ್ದು ಆಕೆ ದುಷ್ಟ ಪ್ರವೃತ್ತಿಯ ವಿರುದ್ಧ ಹೋರಾಡುತ್ತಿರುವಂತೆ ತೋರಿಸಲಾಗಿದೆ.