ಚೀನಾದಲ್ಲಿ ಬಿಬಿಸಿಗೆ ನಿಷೇಧ!

ಚೀನಾ ಬಿಬಿಸಿ ವಾರ್ತಾವಾಹಿನಿಯನ್ನು ನಿಷೇಧಿಸಿದೆ. ಚೀನಾದ ಶಿನ್‌ಜಿಯಾಂಗ್ ಪ್ರಾಂತ್ಯ ಮತ್ತು ಕರೋನಾದ ಬಗ್ಗೆ ಬಿಬಿಸಿ ಸುಳ್ಳು ಸುದ್ದಿ ಹರಡಿದೆ ಎಂದು ಚೀನಾ ಸರ್ಕಾರ ಆರೋಪಿಸಿದೆ.

ಟ್ವಿಟರ್‌ನಿಂದ ಶೇ. ೯೭ ರಷ್ಟು ಭಾರತವಿರೋಧಿ ಖಾತೆಗಳು ಬಂದ್

ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಭಾರತದ ಕುರಿತಾಗಿ ದಾರಿತಪ್ಪಿಸುವ ಮತ್ತು ಪ್ರಚೋದನಕಾರಿ ಮಾಹಿತಿಯನ್ನು ಹರಡುವ ಟ್ವಿಟರ್ ಖಾತೆಗಳನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರ ಒತ್ತಾಯಿಸಿದ ಹಿನ್ನೆಲೆಯಲ್ಲಿ ಟ್ವಿಟರ್ ತನ್ನ ಶೇ. ೯೭ ರಷ್ಟು ಖಾತೆಗಳನ್ನು ಸ್ಥಗಿತಗೊಳಿಸಿದೆ.

ರೈತರಿಂದ ಫೆಬ್ರವರಿ ೧೮ ರಂದು ರಾಷ್ಟ್ರವ್ಯಾಪಿ ರೈಲ್ವೆ ಬಂದ್ ಆಂದೋಲನ

ದೆಹಲಿಯ ಗಡಿಯಲ್ಲಿ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕಳೆದ ೭೫ ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಫೆಬ್ರವರಿ ೧೮ ರಂದು ರಾಷ್ಟ್ರವ್ಯಾಪಿ ರೈಲ್ವೆ ಬಂದ್ ಆಂದೋಲನವನ್ನು ಘೋಷಿಸಿದ್ದಾರೆ.

ಭಾರತವಿರೋಧಿ ಟ್ವಿಟರ್ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲೇ ಬೇಕಾಗುವುದು ! – ಕೇಂದ್ರ ಸರ್ಕಾರದಿಂದ ಟ್ವಿಟರ್ ಅಧಿಕಾರಿಗಳಿಗೆ ಎಚ್ಚರಿಕೆ

ಭಾರತದಲ್ಲಿ ನಡೆಯುತ್ತಿರುವ ರೈತರ ಆಂದೋಲನದ ಸಂದರ್ಭದಲ್ಲಿ, ವಿವಿಧ ಟ್ವಿಟರ್ ಖಾತೆಗಳಿಂದ ದೇಶವಿರೋಧಿ ಟ್ವೀಟ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತ ಸರ್ಕಾರವು ಟ್ವಿಟರ್‌ಗೆ ಸೂಚಿಸಿತ್ತು. ತದನಂತರ, ಟ್ವಿಟರ್ ೭೦೯ ಖಾತೆಗಳ ಮೇಲೆ ಕ್ರಮ ಕೈಗೊಂಡಿತು, ಆದರೆ ಭಾರತವು ೧ ಸಾವಿರದ ೧೦೦ ಜನರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಂಡಿತ್ತು.

ವಿವಿಧ ಉಚ್ಚ ನ್ಯಾಯಾಲಯಗಳಲ್ಲಿ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಲು ಕೇಂದ್ರ ಸರ್ಕಾರಕ್ಕೆ ನೋಟಿಸ್

ದೇಶದ ಒಂಬತ್ತು ರಾಜ್ಯಗಳಲ್ಲಿ ಹಿಂದೂ ಅಲ್ಪಸಂಖ್ಯಾತರಾಗಿದ್ದಾರೆ. ಅವರು ‘ಅಲ್ಪಸಂಖ್ಯಾತರು’ ಎಂದು ತಮ್ಮ ಸ್ಥಾನಮಾನವನ್ನು ಕೋರಿ ಸಲ್ಲಿಸಿರುವ ಅರ್ಜಿಗಳು ವಿವಿಧ ಉಚ್ಚ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ. ಈ ಎಲ್ಲ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಲು ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.

ಬದಯೂ (ಉತ್ತರ ಪ್ರದೇಶ) ನಲ್ಲಿ ವೃದ್ಧ ಅರ್ಚಕನ ಹತ್ಯೆ

‘ಸಖಿ ಬಾಬಾ’ ಎಂದು ಕರೆಯಲ್ಪಡುವ ೭೫ ವರ್ಷದ ಅರ್ಚಕ ಜೈಸಿಂಗ್ ಯಾದವ್ ಅವರನ್ನು ಇಲ್ಲಿನ ಮೊಹಜುದ್ದಿನಗರದ ಢಕನಗಲಾ ಗ್ರಾಮದ ದೇವಾಲಯವೊಂದರಲ್ಲಿ ಇರಿದು ಕೊಲೆ ಮಾಡಲಾಗಿದೆ.

ಮಕರ ರಾಶಿಯಲ್ಲಿ ೭ ಗ್ರಹಗಳ ಮಿಲನದಿಂದಾಗಿ ಭಾರತದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸಬಹುದು! – ಜ್ಯೋತಿಷಿಗಳು ಹೇಳಿಕೆ

ಫೆಬ್ರವರಿ ೯ ರಂದು ರಾತ್ರಿ ೮ ಗಂಟೆ ೩೧ ನಿಮಿಷಕ್ಕೆ ಚಂದ್ರನು ಮಕರ ರಾಶಿಯನ್ನು ಪ್ರವೇಶಿಸಿದ್ದಾನೆ. ಮಕರ ರಾಶಿಯಲ್ಲಿ ಈಗಾಗಲೇ ಸೂರ್ಯ, ಗುರು, ಶುಕ್ರ, ಶನಿ, ಬುಧ ಮತ್ತು ಪ್ಲುಟೊ ಗ್ರಹಗಳಿವೆ. ಜ್ಯೋತಿಷ್ಯಾಚಾರ್ಯ ಡಾ. ಅರವಿಂದ್ ಮಿಶ್ರಾ ಇವರು ಈಗ ಚಂದ್ರನ ಪ್ರವೇಶದ ನಂತರ ೭ ಗ್ರಹಗಳ ಮಿಲನವಾಗಿದೆ ಹೇಳಿದ್ದಾರೆ.

ನಾವು ಕೇರಳದಲ್ಲಿ ಅಧಿಕಾರಕ್ಕೆ ಬಂದರೆ, ಲವ್ ಜಿಹಾದ್‌ವಿರೋಧಿ ಕಾನೂನು ರೂಪಿಸುತ್ತೇವೆ ! – ಭಾಜಪ

ಕೇರಳದಲ್ಲಿ ಭಾಜಪ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದರೆ, ಇಲ್ಲಿಯೂ ಉತ್ತರ ಪ್ರದೇಶ ಸರಕಾರದ ಮಾದರಿಯಲ್ಲಿ ಲವ್ ಜಿಹಾದ್‌ವಿರೋಧಿ ಕಾನೂನು ರೂಪಿಸಲಾಗುವುದು ಎಂದು ಭಾಜಪ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಹೇಳಿದ್ದಾರೆ.

‘ವಿಶ್ವಶಕ್ತಿ’ ಎಂದು ಭಾರತದ ಉದಯವನ್ನು ನಾವು ಸ್ವಾಗತಿಸುತ್ತೇವೆ ! – ಅಮೇರಿಕ

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತ ನಮ್ಮ ಪ್ರಮುಖ ಮಿತ್ರ ರಾಷ್ಟ್ರವಾಗಿದೆ. ಪ್ರಮುಖ ಜಾಗತಿಕ ಶಕ್ತಿಯಾಗಿ ಭಾರತ ಉದಯಿಸುತ್ತಿರುವುದನ್ನು ನಾವು ಸ್ವಾಗತಿಸುತ್ತೇವೆ.

ಒಂದೆಡೆ ಚೀನಾದಿಂದ ಚರ್ಚೆಗಳು ಮತ್ತು ಇನ್ನೊಂದೆಡೆ ಸೈನ್ಯ ಮತ್ತು ಯುದ್ಧಸಾಮಗ್ರಿಗಳ ಭಾರಿ ಪ್ರಮಾಣದಲ್ಲಿ ನಿಯೋಜನೆ !

ಭಾರತದೊಂದಿಗೆ ೩,೪೮೮ ಕಿ.ಮೀ ಗಡಿಯಲ್ಲಿ ತನ್ನ ಮಿಲಿಟರಿ ಸ್ಥಿತಿಯನ್ನು ಬಲಪಡಿಸುತ್ತಿರುವ ಚೀನಾ ಮತ್ತೊಂದೆಡೆ ಭಾರತದೊಂದಿಗೆ ಲಡಾಖ್‌ನಲ್ಲಿ ಅತಿಕ್ರಮಣ ಕುರಿತು ಚರ್ಚೆ ನಡೆಸುತ್ತಿದೆ. ಚೀನಾವು ಟಿಬೆಟ್‌ನಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜಿಸಿದೆ.