ಟ್ವಿಟರ್‌ನಿಂದ ಶೇ. ೯೭ ರಷ್ಟು ಭಾರತವಿರೋಧಿ ಖಾತೆಗಳು ಬಂದ್

ಕೇಂದ್ರ ಸರ್ಕಾರದ ಒತ್ತಡದ ಪರಿಣಾಮ !

  •  ಭಾರತವು ಕಠಿಣ ನಿಲುವನ್ನು ತೆಗೆದುಕೊಂಡರೆ, ಜಗತ್ತು ತಲೆಬಾಗುತ್ತದೆ. ಎಲ್ಲ ವಿಷಯಗಳಲ್ಲೂ ಗಾಂಧಿವಾದಿ ನಿಲುವನ್ನು ತ್ಯಜಿಸಿ ಆಕ್ರಮಣಕಾರಿಯಾದರೆ ಭಾರತಕ್ಕೆ ರಾಷ್ಟ್ರೀಯ ಹಿತದೃಷ್ಟಿಯಿಂದ ಒಳ್ಳೆಯದು !
  • ಟ್ವಿಟರ್ ನಿರಂತರವಾಗಿ ತೆಗೆದುಕೊಳ್ಳುತ್ತಿರುವ ರಾಷ್ಟ್ರವಿರೋಧಿ ಮತ್ತು ಹಿಂದೂವಿರೋಧಿ ನಿಲುವನ್ನು ಪರಿಗಣಿಸಿ, ಅದನ್ನು ಶಾಶ್ವತವಾಗಿ ನಿಷೇಧಿಸಿ!

ನವ ದೆಹಲಿ : ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಭಾರತದ ಕುರಿತಾಗಿ ದಾರಿತಪ್ಪಿಸುವ ಮತ್ತು ಪ್ರಚೋದನಕಾರಿ ಮಾಹಿತಿಯನ್ನು ಹರಡುವ ಟ್ವಿಟರ್ ಖಾತೆಗಳನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರ ಒತ್ತಾಯಿಸಿದ ಹಿನ್ನೆಲೆಯಲ್ಲಿ ಟ್ವಿಟರ್ ತನ್ನ ಶೇ. ೯೭ ರಷ್ಟು ಖಾತೆಗಳನ್ನು ಸ್ಥಗಿತಗೊಳಿಸಿದೆ. ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ರೈತರ ಆಂದೋಲನಕ್ಕೆ ಸಂಬಂಧಿಸಿದಂತೆ ‘ಫಾರ್ಮರ್ ಜೆನೊಸೈಡ್’ (ರೈತರ ವಂಶನಾಶ) ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ಬಳಸಲಾದ ಬರಹಗಳು ಮತ್ತು ಖಾತೆಗಳನ್ನು ಅಳಿಸುವಂತೆ ಸರ್ಕಾರವು ಟ್ವಿಟರ್‌ಗೆ ಸೂಚಿಸಿತ್ತು. ಆರಂಭದಲ್ಲಿ, ಟ್ವಿಟರ್ ಇದನ್ನು ನಿಷೇಧಿಸಲು ನಿರಾಕರಿಸಿತು; ಆದರೆ, ಸರ್ಕಾರದ ಒತ್ತಡದಲ್ಲಿ ಮೊದಲು ೭೦೯ ಖಾತೆಗಳನ್ನು ಮುಚ್ಚಲಾಯಿತು. ಒಟ್ಟು ೧,೪೩೫ ರಲ್ಲಿ ೧,೩೯೮ ಖಾತೆಗಳನ್ನು ಟ್ವಿಟರ್ ನಿರ್ಬಂಧಿಸಿದೆ. ಪಾಕಿಸ್ತಾನ ಮತ್ತು ಖಲಿಸ್ತಾನಕ್ಕೆ ಸಂಬಂಧಿಸಿರುವ ೧,೧೭೮ ಖಾತೆಗಳನ್ನು ಟ್ವಿಟರ್‌ನಲ್ಲಿ ನಿರ್ಬಂಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಲ್ಲದೆ, ಮೇಲಿನ ಹ್ಯಾಶ್‌ಟ್ಯಾಗ್ ಬಳಸಿದ ೨೫೭ ಟ್ವಿಟರ್ ಖಾತೆಗಳಲ್ಲಿ ೨೨೦ ಗಳನ್ನು ಸ್ಥಗಿತಗೊಳಿಸಲಾಗಿದೆ.

ಇದಕ್ಕೂ ಮೊದಲು ಟ್ವಿಟರ್ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲೇಖಿಸಿ ಪತ್ರಕರ್ತರು, ರಾಜಕೀಯ ಪಕ್ಷದ ಕಾರ್ಯಕರ್ತರು ಮತ್ತು ಮಂತ್ರಿಗಳ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರಾಕರಿಸಿತ್ತು. ಅದರ ನಂತರ, ಕೇಂದ್ರ ಸರ್ಕಾರವು ಆ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಆಕ್ರಮಣಕಾರಿ ನಿಲುವನ್ನು ತೆಗೆದುಕೊಂಡಿತು. ‘ಟ್ವಿಟರ್ ತನ್ನದೇ ಆದ ನಿಯಮಗಳನ್ನು ಹೊಂದಿರುತ್ತದೆ; ಆದರೆ ಭಾರತದಲ್ಲಿ ಅದರ ಕಾನೂನುಗಳನ್ನು ಗೌರವಿಸಬೇಕು ಮತ್ತು ಸರ್ಕಾರ ಪ್ರಸ್ತಾಪಿಸಿರುವ ಎಲ್ಲಾ ಟ್ವಿಟರ್ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕೇಂದ್ರ ಸರ್ಕಾರವು ತನ್ನ ಹೇಳಿಕೆಯಲ್ಲಿ ಉಲ್ಲೇಸಿದೆ. ಅದರ ನಂತರ, ಶೇ. ೯೭ ರಷ್ಟು ಖಾತೆಗಳನ್ನು ಮುಚ್ಚಲಾಗಿದೆ. (ಉಳಿದ ಶೇ. ೩ ರಷ್ಟು ಖಾತೆಗಳನ್ನು ಮುಚ್ಚುವವರೆಗೆ, ಸರ್ಕಾರವು ಅದನ್ನು ಬೆಂಬೆತ್ತಿ ಆ ಖಾತೆಗಳನ್ನು ಮುಚ್ಚುವಂತೆ ಒತ್ತಾಯಿಸಬೇಕು ! – ಸಂಪಾದಕರು)