ವಿವಿಧ ಉಚ್ಚ ನ್ಯಾಯಾಲಯಗಳಲ್ಲಿ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಲು ಕೇಂದ್ರ ಸರ್ಕಾರಕ್ಕೆ ನೋಟಿಸ್

ದೇಶದ ೯ ರಾಜ್ಯಗಳಲ್ಲಿ ಹಿಂದೂಗಳನ್ನು ‘ಅಲ್ಪಸಂಖ್ಯಾತರು’ ಎಂದು ಘೋಷಿಸಿದ ಪ್ರಕರಣ

ಭಾರತದ ಕೆಲವು ರಾಜ್ಯಗಳಲ್ಲಿ ಹಿಂದೂಗಳು ‘ಅಲ್ಪಸಂಖ್ಯಾತರಾಗಿದ್ದಾರೆ’. ಆದ್ದರಿಂದ, ಈ ರಾಜ್ಯಗಳಲ್ಲಿ ಹಿಂದೂಗಳು ಭಾರತದ ಇತರ ರಾಜ್ಯಗಳ ಅಲ್ಪಸಂಖ್ಯಾತರು ಪಡೆಯುವ ಸೌಲಭ್ಯಗಳನ್ನು ಪಡೆಯಬೇಕು. ವಾಸ್ತವದಲ್ಲಿ, ಕೇಂದ್ರ ಸರ್ಕಾರವು ತನ್ನ ಸ್ತರದಲ್ಲಿ ಇದನ್ನು ಅರಿತುಕೊಂಡು ಈ ದಿಕ್ಕಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವುದು ಆವಶ್ಯಕವಿತ್ತು. ಇದಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ !

ನವ ದೆಹಲಿ: ದೇಶದ ಒಂಬತ್ತು ರಾಜ್ಯಗಳಲ್ಲಿ ಹಿಂದೂ ಅಲ್ಪಸಂಖ್ಯಾತರಾಗಿದ್ದಾರೆ. ಅವರು ‘ಅಲ್ಪಸಂಖ್ಯಾತರು’ ಎಂದು ತಮ್ಮ ಸ್ಥಾನಮಾನವನ್ನು ಕೋರಿ ಸಲ್ಲಿಸಿರುವ ಅರ್ಜಿಗಳು ವಿವಿಧ ಉಚ್ಚ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ. ಈ ಎಲ್ಲ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಲು ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ. ಇದಕ್ಕೆ ಉತ್ತರಿಸಲು ೪ ವಾರಗಳ ಕಾಲಾವಕಾಶ ನೀಡಲಾಗಿದೆ. ಬಿಜೆಪಿ ಮುಖಂಡ ನ್ಯಾಯವಾದಿ ಅಶ್ವಿನಿ ಕುಮಾರ್ ಉಪಾಧ್ಯಾಯ ಇವರು ಈ ಬಗ್ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ನ್ಯಾಯವಾದಿ ಉಪಾಧ್ಯಾಯ ಅವರ ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿ ದೆಹಲಿ ಉಚ್ಚ ನ್ಯಾಯಾಲಯಕ್ಕೆ ಹೋಗುವಂತೆ ತಿಳಿಸಿತ್ತು.

ಅರ್ಜಿಯಲ್ಲಿ ಹೀಗೆ ಹೇಳಲಾಗಿದೆ,

೧. ‘ನ್ಯಾಶನಲ್ ಕಮಿಶನ್ ಫಾರ್ ಮೈನಾರಿಟಿ ಆಕ್ಟ್ ೧೯೯೨’ ರಲ್ಲಿ ಅಲ್ಪಸಂಖ್ಯಾತರೆಂದು ನೀಡಲಾಗುವ ನಿಬಂಧನೆಯನ್ನು ರದ್ದುಪಡಿಸಬೇಕು. ಅಥವಾ ಈ ನಿಬಂಧನೆಯನ್ನು ಉಳಿಸಿಕೊಂಡಲ್ಲಿ, ಹಿಂದೂಗಳು ಅಲ್ಪಸಂಖ್ಯಾತರಾಗಿರುವ ೯ ರಾಜ್ಯಗಳಲ್ಲಿ ಅವರನ್ನು ಅಲ್ಪಸಂಖ್ಯಾತರನ್ನಾಗಿ ಘೋಷಿಸಬೇಕು ಮತ್ತು ಆ ನಿಟ್ಟಿನಲ್ಲಿ ಅವರಿಗೆ ಸೌಲಭ್ಯಗಳನ್ನು ನೀಡಬೇಕು.

. ‘ನ್ಯಾಶನಲ್ ಕಮಿಶನ್ ಫಾರ್ ಮೈನಾರಿಟಿ ಆಕ್ಟ್ ೧೯೯೨’ ನ ನಿಬಂಧನೆಗಳನ್ನು ಪ್ರಶ್ನಿಸುವ ಅರ್ಜಿಗಳು ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿದ್ದು, ಅವುಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಲಾಗಿದೆ.

೩. ಕೇಂದ್ರ ಸರ್ಕಾರವು ಮೈನಾರಿಟಿ ಆಕ್ಟ್ ನ ಕಲಮ್-೨ (ಸಿ) ದ ಅಡಿಯಲ್ಲಿ ಮುಸಲ್ಮಾನರು, ಕ್ರೈಸ್ತರು, ಸಿಖ್ಖರು, ಬೌದ್ಧರು ಮತ್ತು ಜೈನರನ್ನು ಅಲ್ಪಸಂಖ್ಯಾತರೆಂದು ಘೋಷಿಸಿದೆ; ಆದರೆ, ಯಹೂದಿಗಳನ್ನು ಅಲ್ಪಸಂಖ್ಯಾತರೆಂದು ಘೋಷಿಸಲಾಗಿಲ್ಲ. ಹಾಗೆಯೇ ಕಾಶ್ಮೀರ, ಲಢಾಕ್, ಪಂಜಾಬ್, ಮಿಜೋರಾಂ, ಲಕ್ಷದ್ವೀಪ, ನಾಗಾಲ್ಯಾಂಡ್, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಮಣಿಪುರ ರಾಜ್ಯಗಳಲ್ಲಿ ಹಿಂದೂಗಳು ಜನಸಂಖ್ಯೆಯ ಆಧಾರದಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ. ಆದ್ದರಿಂದ, ಅವರನ್ನು ಇಲ್ಲಿ ಅಲ್ಪಸಂಖ್ಯಾತರಾಗಿ ಘೋಷಿಸಿ ಅವರಿಗೆ ಅದರ ಸೌಲಭ್ಯಗಳು ದೊರಕುವಂತೆ ಮಾಡಬೇಕು.

೪. ಅಲ್ಪಸಂಖ್ಯಾತರನ್ನು ವ್ಯಾಖ್ಯಾನಿಸುವಾಗ ೨೦೦೨ ರಲ್ಲಿ ಸುಪ್ರೀಂ ಕೋರ್ಟ್‌ನ ೧೧ ನ್ಯಾಯಾಧೀಶರ ನ್ಯಾಯಪೀಠವು ಅವರನ್ನು ಭಾಷೆ ಮತ್ತು ಧರ್ಮದ ಆಧಾರದಲ್ಲಿ ಪರಿಗಣಿಸಬೇಕು ಎಂದು ಹೇಳಿದೆ. ಎಲ್ಲಾ ರಾಜ್ಯಗಳನ್ನು ಭಾಷೆಯ ಆಧಾರದಲ್ಲಿ ಗುರುತಿಸಿರುವಾಗ ಅಲ್ಪಸಂಖ್ಯಾತರ ಸ್ಥಾನಮಾನವು ಸಹ ರಾಜ್ಯದ ಭಾಷೆಗೆ ಅನುಗುಣವಾಗಿರಬೇಕು ಮತ್ತು ಅದು ದೇಶದ ಮಟ್ಟದಲ್ಲಿರಬಾರದು.