‘ಯಾರಿಗೂ ನಮ್ಮ ಕೂದಲನ್ನೂ ಕೊಂಕಿಸಲು ಸಾಧ್ಯವಿಲ್ಲ’ ಎಂಬ ಟ್ವಿಟ್ಟರ್‌ನ ಮಾನಸಿಕತೆಯಿಂದಾಗಿ, ಟ್ವಿಟರ್ ಇಂದು ನಿರಂತರವಾಗಿ ಭಾರತದ್ವೇಷಿ ಮತ್ತು ಹಿಂದೂದ್ವೇಷಿ ಕೃತ್ಯಗಳನ್ನು ಪ್ರಚೋದಿಸುತ್ತಿದೆ. ಆದ್ದರಿಂದ, ಅಂತಹ ಎಚ್ಚರಿಕೆಯನ್ನು ನೀಡುವುದರೊಂದಿಗೆ, ಭಾರತ ಸರ್ಕಾರವು ಭಾರತೀಯರಿಗೆ ಟ್ವಿಟರ್‌ನಂತಹ ಪರ್ಯಾಯ ಸಾಮಾಜಿಕ ಮಾಧ್ಯಮವನ್ನು ಒದಗಿಸುವ ಮೂಲಕ ಅದರ ದರ್ಪವನ್ನು ಇಳಿಸಬೇಕು ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ !
ನವ ದೆಹಲಿ: ಭಾರತದಲ್ಲಿ ನಡೆಯುತ್ತಿರುವ ರೈತರ ಆಂದೋಲನದ ಸಂದರ್ಭದಲ್ಲಿ, ವಿವಿಧ ಟ್ವಿಟರ್ ಖಾತೆಗಳಿಂದ ದೇಶವಿರೋಧಿ ಟ್ವೀಟ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತ ಸರ್ಕಾರವು ಟ್ವಿಟರ್‌ಗೆ ಸೂಚಿಸಿತ್ತು. ತದನಂತರ, ಟ್ವಿಟರ್ ೭೦೯ ಖಾತೆಗಳ ಮೇಲೆ ಕ್ರಮ ಕೈಗೊಂಡಿತು, ಆದರೆ ಭಾರತವು ೧ ಸಾವಿರದ ೧೦೦ ಜನರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಟ್ವಿಟರ್‌ನ ಹಿರಿಯ ಅಧಿಕಾರಿಗಳು ಮತ್ತು ಕೇಂದ್ರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿಗಳ ನಡುವೆ ಸಭೆ ನಡೆಸಲಾಯಿತು. ‘ಟ್ವಿಟರ್‌ಗೆ ತನ್ನದೇ ಆದ ನೀತಿ-ನಿಯಮಗಳು ಇರಬಹುದು, ಆದರೆ ಟ್ವಿಟರ್ ಭಾರತದಲ್ಲಿ ಭಾರತೀಯ ಕಾನೂನುಗಳನ್ನು ಪಾಲಿಸಲೇ ಬೇಕು. ಸರ್ಕಾರವು ಹೇಳಿರುವ ಎಲ್ಲ ಖಾತೆಗಳ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಸರ್ಕಾರವು ಟ್ವಿಟರ್‌ಗೆ ಸ್ಪಷ್ಟಪಡಿಸಿದೆ.
Remove flagged content or be ready for jail, penalty: Government warns Twitter #FarmersProtest #Twitterindia #TwitterCensorshiphttps://t.co/ScS7WFmmXp
— The News Minute (@thenewsminute) February 4, 2021
೧. ಈ ಸಭೆಯಲ್ಲಿ ‘ಅಮೇರಿಕಾದ ಕ್ಯಾಪಿಟಲ್ ಹಿಲ್‌ನ ಹಿಂಸಾಚಾರದ ಸಮಯದಲ್ಲಿ, ಟ್ವಿಟರ್ ತಕ್ಷಣದ ಕ್ರಮ ಕೈಗೊಂಡಿತು; ಆದರೆ, ಕೆಂಪು ಕೋಟೆ ಪ್ರಕರಣದ ನಂತರ ಅಂತಹ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂಬುದನ್ನು ನೆನಪಿಸಿ ಟ್ವಿಟರ್‌ನ ಇಬ್ಬಗೆಯ ನಿಲುವನ್ನು ಖಂಡತುಂಡವಾಗಿ ಹೇಳಲಾಯಿತು.
೨. ೧ ಸಾವಿರದ ೧೭೮ ಟ್ವಿಟರ್ ಖಾತೆಗಳನ್ನು ಮುಚ್ಚುವಂತೆ ಕೇಂದ್ರ ಸರ್ಕಾರವು ಟ್ವಿಟರ್‌ಗೆ ಸೂಚಿಸಿತ್ತು. ಇದಕ್ಕೆ ಉತ್ತರವೆಂದು ‘ನಾವು ಪ್ರಚೋದನಕಾರಿ ಬರಹಗಳಿರುವ ೫೦೦ ಟ್ವಿಟರ್ ಖಾತೆಗಳ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಮತ್ತು ಅವುಗಳನ್ನು ಶಾಶ್ವತವಾಗಿ ಮುಚ್ಚಿದ್ದೇವೆ’ ಎಂದು ಟ್ವಿಟರ್ ಹೇಳಿದೆ.
#Twitter said it has suspended over 500 accounts, and blocked access to several others within India as it partly acceded to a government order.https://t.co/do9CzJca3G
— BloombergQuint (@BloombergQuint) February 10, 2021
೩. ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಕಾರಣ ನೀಡಿ ಪತ್ರಕರ್ತರು, ರಾಜಕೀಯ ಪಕ್ಷದ ಕಾರ್ಯಕರ್ತರು ಮತ್ತು ಮಂತ್ರಿಗಳ ಖಾತೆಗಳ ಮೇಲೆ ಕ್ರಮ ಕೈಗೊಳ್ಳಲು ಟ್ವಿಟರ್ ನಿರಾಕರಿಸಿದೆ. (ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದಾಗಲೇ ಅವರ ವಿವಾದಿತ ಟ್ವೀಟ್ ಅನ್ನು ತೆಗೆದು ಹಾಕಿತ್ತು ಮತ್ತು ಅವರ ಖಾತೆಯ ಮೇಲೆ ನಿರ್ಬಂಧ ಹೇರಿತ್ತು. ಆಗ ಇದಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ನೆನಪಾಗಿರಲಿಲ್ಲವೇ ? ಇದು ಅದರ ಭಾರತದ್ವೇಷವನ್ನು ತೋರಿಸುತ್ತದೆ ! – ಸಂಪಾದಕರು)