ಬದಯೂ (ಉತ್ತರ ಪ್ರದೇಶ) ನಲ್ಲಿ ವೃದ್ಧ ಅರ್ಚಕನ ಹತ್ಯೆ

೨೦ ದಿನಗಳಲ್ಲಿ ರಾಜ್ಯದ ಎರಡನೇ ಘಟನೆ

ಉತ್ತರಪ್ರದೇಶದಲ್ಲಿ ಭಾಜಪ ಅಧಿಕಾರದಲ್ಲಿದ್ದಾಗ ಇಂತಹ ಘಟನೆಗಳು ಸಂಭವಿಸಬಾರದು ಎಂದು ಹಿಂದೂಗಳ ಅಪೇಕ್ಷೆಯಿದೆ!


ಬದಯೂ (ಉತ್ತರ ಪ್ರದೇಶ)
– ‘ಸಖಿ ಬಾಬಾ’ ಎಂದು ಕರೆಯಲ್ಪಡುವ ೭೫ ವರ್ಷದ ಅರ್ಚಕ ಜೈಸಿಂಗ್ ಯಾದವ್ ಅವರನ್ನು ಇಲ್ಲಿನ ಮೊಹಜುದ್ದಿನಗರದ ಢಕನಗಲಾ ಗ್ರಾಮದ ದೇವಾಲಯವೊಂದರಲ್ಲಿ ಇರಿದು ಕೊಲೆ ಮಾಡಲಾಗಿದೆ. ಈ ಪ್ರಕರಣದಲ್ಲಿ ರಾಮವೀರ್ ಯಾದವ್ ಎಂಬವನ ಮೇಲೆ ಸಂದೇಹವಿದ್ದು, ಆತ ಪರಾರಿಯಾಗಿದ್ದಾನೆ. ಆತನನ್ನು ಹುಡುಕಲು ಪೊಲೀಸರು ಮೂರು ತಂಡಗಳನ್ನು ರೂಪಿಸಿದ್ದಾರೆ. ಹತ್ಯೆಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ.