ನಾವು ಕೇರಳದಲ್ಲಿ ಅಧಿಕಾರಕ್ಕೆ ಬಂದರೆ, ಲವ್ ಜಿಹಾದ್‌ವಿರೋಧಿ ಕಾನೂನು ರೂಪಿಸುತ್ತೇವೆ ! – ಭಾಜಪ

ಕೇಂದ್ರದಲ್ಲಿ ಭಾಜಪ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರದಲ್ಲಿರುವುದರಿಂದ ಅದು ಇಡೀ ದೇಶಕ್ಕಾಗಿ ಅಂತಹ ಕಾನೂನು ರೂಪಿಸಬೇಕು ಎಂದು ಹಿಂದೂಗಳಿಗೆ ಅನ್ನಿಸುತ್ತದೆ !

ಶ್ರೀ. ಕೆ. ಸುರೇಂದ್ರನ್

ತಿರುವನಂತಪುರಂ (ಕೇರಳ) – ಕೇರಳದಲ್ಲಿ ಭಾಜಪ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದರೆ, ಇಲ್ಲಿಯೂ ಉತ್ತರ ಪ್ರದೇಶ ಸರಕಾರದ ಮಾದರಿಯಲ್ಲಿ ಲವ್ ಜಿಹಾದ್‌ವಿರೋಧಿ ಕಾನೂನು ರೂಪಿಸಲಾಗುವುದು ಎಂದು ಭಾಜಪ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಹೇಳಿದ್ದಾರೆ.

‘ಲವ್ ಜಿಹಾದ್ ಕಳವಳಕಾರಿ ವಿಷಯವಾಗಿದೆ. ಕೇವಲ ಹಿಂದೂ ಪರ ಸಂಘಟನೆಗಳು ಮಾತ್ರವಲ್ಲ, ಕ್ರೈಸ್ತ ಸಂಘಟನೆಗಳು ಮತ್ತು ಚರ್ಚುಗಳು ಸಹ ಕಾನೂನು ರೂಪಿಸುವಂತೆ ಒತ್ತಾಯಿಸುತ್ತಿವೆ. ಮುಂಬರುವ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾನೂನು ರೂಪಿಸುವ ಭರವಸೆ ನೀಡುತ್ತೇನೆ’ ಎಂದು ಸುರೇಂದ್ರನ್ ಹೇಳಿದ್ದಾರೆ.