ಚೀನಾದಲ್ಲಿ ಬಿಬಿಸಿಗೆ ನಿಷೇಧ!

ಶಿನ್‌ಜಿಯಾಂಗ್ ಪ್ರಾಂತ್ಯ ಮತ್ತು ಕರೋನಾಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ತೋರಿಸಿದ ಆರೋಪ

ಹಿಂದೂಗಳು ಮತ್ತು ಅವರ ಸಂಸ್ಥೆಗಳ ವಿರುದ್ಧ ಬಿಬಿಸಿ ಸುಳ್ಳು ಸುದ್ದಿ ಪ್ರಸಾರ ಮಾಡುವುದನ್ನು ಹಿಂದೂಗಳು ಹಲವು ವರ್ಷಗಳಿಂದ ನೋಡುತ್ತಿದ್ದಾರೆ. ಈಗ ಭಾರತ ಸರ್ಕಾರವೂ ಕೂಡ ಇಂತಹ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !


ಬೀಜಿಂಗ್ (ಚೀನಾ) – ಚೀನಾ ಬಿಬಿಸಿ ವಾರ್ತಾವಾಹಿನಿಯನ್ನು ನಿಷೇಧಿಸಿದೆ. ಚೀನಾದ ಶಿನ್‌ಜಿಯಾಂಗ್ ಪ್ರಾಂತ್ಯ ಮತ್ತು ಕರೋನಾದ ಬಗ್ಗೆ ಬಿಬಿಸಿ ಸುಳ್ಳು ಸುದ್ದಿ ಹರಡಿದೆ ಎಂದು ಚೀನಾ ಸರ್ಕಾರ ಆರೋಪಿಸಿದೆ. ‘ಸುಳ್ಳು ಸುದ್ದಿಗಳನ್ನು ಹರಡುವ ಯಾವುದೇ ಪ್ರಕರಣಗಳನ್ನು ಸಹಿಸುವುದಿಲ್ಲ’ ಎಂದು ಚೀನಾ ಹೇಳಿದೆ.

೧. ನಿಷೇಧದಲ್ಲಿ ‘ಬಿಬಿಸಿ ವರ್ಲ್ಡ್ ನ್ಯೂಸ್’ ಎಲ್ಲ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಚೀನಾ ಆರೋಪಿಸಿದೆ. ಇದರ ಪರಿಣಾಮವಾಗಿ, ಸರ್ಕಾರಿ ಚಲನಚಿತ್ರ, ಟಿವಿ ಮತ್ತು ರೇಡಿಯೋ ಆಡಳಿತ ಮಂಡಳಿಗಳು ಬಿಬಿಸಿಗೆ ಪ್ರಸಾರ ಮಾಡುವ ಅನುಮತಿಯನ್ನು ರದ್ದುಪಡಿಸಿವೆ. ವಾರ್ಷಿಕ ಆಧಾರದ ಮೇಲೆ ಬಿಬಿಸಿಗೆ ಪ್ರಸಾರ ಮಾಡಲು ನೀಡಲಾದ ಅನುಮತಿಯನ್ನು ತಕ್ಷಣವೇ ರದ್ದುಪಡಿಸಲಾಗಿದೆ.

೨. ಚೀನಾದ ಸರಕಾರಿ ಮಾಧ್ಯಮಗಳ ಪ್ರಕಾರ, ‘ಬಿಬಿಸಿ ವರ್ಲ್ಡ್ ನ್ಯೂಸ್’ ಪ್ರಸಾರ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ. ಸುದ್ದಿಗಳು ಸತ್ಯ ಮತ್ತು ನಿಖರವಾಗಿರಬೇಕು. ಇವುಗಳು ಚೀನಾದ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಹಾನಿಕರವಾಗಬಾರದು ಎಂದು ಈ ವರದಿಯು ತಿಳಿಸಿದೆ.