ನವ ದೆಹಲಿ: ಫೆಬ್ರವರಿ ೯ ರಂದು ರಾತ್ರಿ ೮ ಗಂಟೆ ೩೧ ನಿಮಿಷಕ್ಕೆ ಚಂದ್ರನು ಮಕರ ರಾಶಿಯನ್ನು ಪ್ರವೇಶಿಸಿದ್ದಾನೆ. ಮಕರ ರಾಶಿಯಲ್ಲಿ ಈಗಾಗಲೇ ಸೂರ್ಯ, ಗುರು, ಶುಕ್ರ, ಶನಿ, ಬುಧ ಮತ್ತು ಪ್ಲುಟೊ ಗ್ರಹಗಳಿವೆ. ಜ್ಯೋತಿಷ್ಯಾಚಾರ್ಯ ಡಾ. ಅರವಿಂದ್ ಮಿಶ್ರಾ ಇವರು ಈಗ ಚಂದ್ರನ ಪ್ರವೇಶದ ನಂತರ ೭ ಗ್ರಹಗಳ ಮಿಲನವಾಗಿದೆ ಹೇಳಿದ್ದಾರೆ. ಈ ಯೋಗವು ಭಾರತದ ಮೇಲೆ ವಿಶೇಷ ಪರಿಣಾಮ ಬೀರಲಿದೆ; ಏಕೆಂದರೆ ಭಾರತದ್ದು ವೃಷಭ ಲಗ್ನದ ಜಾತಕ. ಈ ಜಾತಕದ ಮೂರನೇ ಮನೆ ಅಂದರೆ ಕರ್ಕ ರಾಶಿಯಲ್ಲಿ ಸೂರ್ಯ, ಬುಧ, ಶುಕ್ರ, ಶನಿ ಮತ್ತು ಚಂದ್ರರು ಈಗಾಗಲೇ ಕುಳಿತಿವೆ. ಈಗ ಈ ಯೋಗ ಮಕರ ರಾಶಿಯಲ್ಲಿ ನಡೆಯುತ್ತಿದೆ. ಅವರು ಪರಸ್ಪರ ಮೇಲೆ ದೃಷ್ಟಿ ಇರಲಿದೆ ಮತ್ತು ಅದರ ಮೇಲೆ ರಾಹುವಿನ ಕಣ್ಣಿದೆ. ಈ ಪರಿಸ್ಥಿತಿ ಭಾರತದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಬಹುದು. ರಾಜಕೀಯ ಪ್ರಕ್ಷುಬ್ಧತೆ ಸಹ ಕಾಣಬಹುದು. ಅಪಘಾತಗಳ ಸಂಖ್ಯೆ ಮತ್ತು ಹಣದುಬ್ಬರದಲ್ಲಿ ಏರಿಕೆಯಾಗಬಹುದು. ಈ ಅವಧಿಯಲ್ಲಿ, ವಿಶ್ವದಲ್ಲಿ ಭಾರತದ ಪ್ರಾಬಲ್ಯ ಮತ್ತು ಶಕ್ತಿಯು ಹೆಚ್ಚಾಗುತ್ತದೆ. ವಿಶ್ವದ ಎಲ್ಲ ದೇಶಗಳ ಸಭೆಗಳಲ್ಲಿ ಭಾರತ ವಿಶೇಷ ಪಾತ್ರ ವಹಿಸಲಿದೆ.
— M N(जय श्रीराम!) 🇮🇳 (@Hindu108) February 7, 2021
೭ ಗ್ರಹಗಳ ಮಿಲನದ ಪರಿಣಾಮ
೧. ಭಾರತದಲ್ಲಿ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆಯಿದೆ
೨. ನೈಸರ್ಗಿಕ ವಿಪತ್ತಿನಂತಹ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆ
೩. ಮಹಾಯುದ್ಧದ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆ
೪. ಕೊರೋನಾ ಸಾಂಕ್ರಾಮಿಕ ರೋಗ ಇನ್ನಷ್ಟು ತೀವ್ರಗೊಳ್ಳಬಹುದು
೫. ಇತರ ಕೆಲವು ವೈರಸ್‌ನಂತಹ ರೋಗಗಳ ಸಾಧ್ಯತೆ
೬. ಜೀವಹಾನಿ ಮತ್ತು ಆರ್ಥಿಕ ನಷ್ಟಗಳಾಗುವ ಅಂದಾಜು
೭. ಭಾರತದಲ್ಲಿ ರಾಜಕೀಯ ಪ್ರಕ್ಷುಬ್ಧತೆಯನ್ನು ಹೆಚ್ಚಾಗುವ ಸಾಧ್ಯತೆ