‘ವಿಶ್ವಶಕ್ತಿ’ ಎಂದು ಭಾರತದ ಉದಯವನ್ನು ನಾವು ಸ್ವಾಗತಿಸುತ್ತೇವೆ ! – ಅಮೇರಿಕ

ಅಮೇರಿಕ ಹೇಳಿದೆ ಎಂದ ಮಾತ್ರಕ್ಕೆ ಭಾರತವು ‘ವಿಶ್ವಶಕ್ತಿ’ಯಾಗುವುದಿಲ್ಲ, ವಾಸ್ತವದಲ್ಲಿ ಭಾರತವು ಆ ಮಟ್ಟವನ್ನು ತಲುಪುವುದು ಮುಖ್ಯವಾಗಿದೆ !

ವಾಷಿಂಗ್ಟನ್ ಡಿ.ಸಿ. (ಅಮೇರಿಕಾ) – ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತ ನಮ್ಮ ಪ್ರಮುಖ ಮಿತ್ರ ರಾಷ್ಟ್ರವಾಗಿದೆ. ಪ್ರಮುಖ ಜಾಗತಿಕ ಶಕ್ತಿಯಾಗಿ ಭಾರತ ಉದಯಿಸುತ್ತಿರುವುದನ್ನು ನಾವು ಸ್ವಾಗತಿಸುತ್ತೇವೆ. ಈ ಪ್ರದೇಶದಲ್ಲಿ ಭಾರತ ‘ಭದ್ರತೆ ಒದಗಿಸುವ ರಾಷ್ಟ್ರ’ ಪಾತ್ರವನ್ನು ವಹಿಸುತ್ತಿದೆ ಎಂದು ಅಮೇರಿಕದ ವಿದೇಶಾಂಗ ಸಚಿವಾಲಯದ ವಕ್ತಾರ ನೆಡ್ ಪ್ರೈಸ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಮ್ಮ ಸರ್ಕಾರ ವಿವಿಧ ರಂಗಗಳಲ್ಲಿ ಸಹಕಾರ ಮತ್ತು ಸ್ನೇಹವನ್ನು ಉನ್ನತ ಮಟ್ಟದಲ್ಲಿ ಬೆಳೆಸಲು ಪ್ರಯತ್ನಿಸುತ್ತದೆ. ಭಾರತ-ಅಮೇರಿಕಾದ ಪಾಲುದಾರಿಕೆ ಮತ್ತು ಸ್ನೇಹವು ಇನ್ನಷ್ಟು ಬಲವಾಗಿ ಬೆಳೆಯಲಿದೆ ಎಂಬ ವಿಶ್ವಾಸ ನಮಗಿದೆ.