ಒಂದೆಡೆ ಚೀನಾದಿಂದ ಚರ್ಚೆಗಳು ಮತ್ತು ಇನ್ನೊಂದೆಡೆ ಸೈನ್ಯ ಮತ್ತು ಯುದ್ಧಸಾಮಗ್ರಿಗಳ ಭಾರಿ ಪ್ರಮಾಣದಲ್ಲಿ ನಿಯೋಜನೆ !

ಚೀನಾ ನಂಬಿಕೆ ದ್ರೋಹ ಮಾಡುತ್ತದೆ, ಎಂಬುದು ಜಗತ್ತಿಗೆ ತಿಳಿದಿದೆ. ಆದ್ದರಿಂದ, ಭಾರತವು ಅದರ ಯಾವುದೇ ತಂತ್ರಗಳಿಗೆ ಬಲಿಯಾಗದೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಸದಾ ಸಿದ್ಧವಿರಬೇಕು ಮತ್ತು ಅವಕಾಶ ಸಿಕ್ಕಿದಾಗ ಅದರ ಮೇಲೆ ಆಕ್ರಮಣ ಮಾಡಲು ಸಿದ್ಧವಾಗಿರಬೇಕು ಎಂದು ರಾಷ್ಟ್ರಪ್ರೇಮಿಗಳಿಗೆ ಅನ್ನಿಸುತ್ತದೆ

ನವ ದೆಹಲಿ: ಭಾರತದೊಂದಿಗೆ ೩,೪೮೮ ಕಿ.ಮೀ ಗಡಿಯಲ್ಲಿ ತನ್ನ ಮಿಲಿಟರಿ ಸ್ಥಿತಿಯನ್ನು ಬಲಪಡಿಸುತ್ತಿರುವ ಚೀನಾ ಮತ್ತೊಂದೆಡೆ ಭಾರತದೊಂದಿಗೆ ಲಡಾಖ್‌ನಲ್ಲಿ ಅತಿಕ್ರಮಣ ಕುರಿತು ಚರ್ಚೆ ನಡೆಸುತ್ತಿದೆ. ಚೀನಾವು ಟಿಬೆಟ್‌ನಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜಿಸಿದೆ. ಫಿರಂಗಿ, ಸ್ವಯಂಚಾಲಿತ ಹೊವಿಟ್ಜರ್‌ಗಳು ಮತ್ತು ಭೂಮಿಯಿಂದ ಗಾಳಿಯಲ್ಲಿ ಆಕ್ರಮಣ ಮಾಡುವ ಕ್ಷಿಪಣಿಗಳನ್ನು ಹಾರಿಸುವ ಸೈನಿಕರ ಯುನಿಟ್‌ಅನ್ನು ದೊಡ್ಡ ಪ್ರಮಾಣದಲ್ಲಿ ನೇಮಿಸಿದೆ. ಚೀನಾದ ಪಡೆಗಳು ಯುದ್ಧ ಸಾಮಗ್ರಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುತ್ತಿವೆ. ಅಲ್ಲದೆ, ಪ್ಯಾಂಗೊಂಗ್ ಟಿಎಸ್‌ಒ ಸರೋವರ ಪ್ರದೇಶದ ‘ಫಿಂಗರ್’ ಪ್ರದೇಶದಲ್ಲಿ ಚೀನಾ ಹೊಸ ಕಟ್ಟಡ ಕಾಮಗಾರಿ ಪ್ರಾರಂಭಿಸಿದೆ.

ಚೀನಾ ನಾಚುಮೂರ್‌ನಿಂದ ೮೨ ಕಿ.ಮೀ ದೂರದಲ್ಲಿ ೩೫ ದೊಡ್ಡ ಮಿಲಿಟರಿ ವಾಹನಗಳು, ನಾಲ್ಕು ೧೫೫ ಎಂಎಂ ಪಿಎಲ್. ಝಡ್. ೮೩ ಸ್ವಯಂಚಾಲಿತ ಹೊವಿಟ್ಜರ್ ತೋಫುಗಳನ್ನು ಸಿದ್ಧವಾಗಿಟ್ಟಿರುವ ಪುರಾವೆಗಳು ಭಾರತದ ಬಳಿ ಇವೆ. ಎಲ್‌ಎಸಿಯಿಂದ ೯೦ ಕಿ.ಮೀ. ದೂರದಲ್ಲಿರುವ ರುಡೋಕ್‌ನ ಕಣ್ಗಾವಲು ತಾಣದಲ್ಲಿ ಹೆಚ್ಚುವರಿ ವಾಹನಗಳನ್ನು ನಿಯೋಜಿಸಲಾಗಿದೆ. ಈ ಪ್ರದೇಶದಲ್ಲಿ ಹೊಸ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ ಮತ್ತು ಸೈನಿಕರಿಗಾಗಿ ೪ ಹೊಸ ಶೆಡ್‌ಗಳು ಮತ್ತು ಕ್ವಾರ್ಟರ್‌ಗಳನ್ನು ನಿರ್ಮಿಸಲಾಗಿದೆ ಎಂದು ತಿಳಿದುಬಂದಿದೆ.