ರೈತರಿಂದ ಫೆಬ್ರವರಿ ೧೮ ರಂದು ರಾಷ್ಟ್ರವ್ಯಾಪಿ ರೈಲ್ವೆ ಬಂದ್ ಆಂದೋಲನ

ಬಂದ್ ಎಂದರೆ ಜನಸಾಮಾನ್ಯರನ್ನು ಹಿಡಿತದಲ್ಲಿಟ್ಟುಕೊಂಡು ತಮ್ಮ ಸ್ವಾರ್ಥವನ್ನು ಸಾಧಿಸುವುದು ! ಇಂತಹ ಬಂದ್‌ನಿಂದಾಗಿ ದೇಶಕ್ಕೆ ಸಾವಿರಾರು ಕೋಟಿ ರೂಪಾಯಿಗಳು ನಷ್ಟವಾಗುತ್ತದೆ, ಅದನ್ನು ಆಂದೋಲನಕಾರರಿಂದ ವಸೂಲಿ ಮಾಡಬೇಕು ಇಲ್ಲದಿದ್ದರೆ ಅವರನ್ನು ಜೈಲಿನಲ್ಲಿಡಬೇಕು!

ನವ ದೆಹಲಿ : ದೆಹಲಿಯ ಗಡಿಯಲ್ಲಿ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕಳೆದ ೭೫ ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಫೆಬ್ರವರಿ ೧೮ ರಂದು ರಾಷ್ಟ್ರವ್ಯಾಪಿ ರೈಲ್ವೆ ಬಂದ್ ಆಂದೋಲನವನ್ನು ಘೋಷಿಸಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆಂದೋಲನವು ಮಧ್ಯಾಹ್ನ ೧೨ ರಿಂದ ಸಂಜೆ ೪ ರವರೆಗೆ ನಡೆಯಲಿದೆ.

ಆಂದೋಲನದ ಒಂದು ಭಾಗವಾಗಿ, ಫೆಬ್ರವರಿ ೧೨ ರಿಂದ ರಾಜಸ್ಥಾನದ ರಸ್ತೆಗಳಲ್ಲಿನ ಎಲ್ಲಾ ಟೋಲ್ ‌ಸಂಗ್ರಹಕ್ಕೆ ಅವಕಾಶ ನೀಡದಿರುವುದಾಗಿ ಸಹ ಆಂದೋಲನಕಾರರು ನಿರ್ಧರಿಸಿದ್ದಾರೆ. ಇದಲ್ಲದೆ ಫೆಬ್ರವರಿ ೧೪ ರಂದು ದೇಶಾದ್ಯಂತ ಮೇಣದಬತ್ತಿ ಆಂದೋಲನ ಮತ್ತು ಟಾರ್ಚ್ ಲೈಟ್ ಮೆರವಣಿಗೆ ನಡೆಯಲಿದೆ. ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಗೌರವಾರ್ಥವಾಗಿ ಈ ಮೋರ್ಚಾ ನಡೆಯಲಿದೆ.