ಶಬರಿಮಲೆ ದೇವಸ್ಥಾನದಲ್ಲಿ ದರ್ಶನ ಪಡೆಯುವ ಭಕ್ತರ ಬಗ್ಗೆ ರಾಜ್ಯ ಸರಕಾರವು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಬಾರದು ! – ಹಿಂದೂ ಸಂಘಟನೆಗಳ ಬೇಡಿಕೆ

ನವೆಂಬರ್ ೧೬ ರಿಂದ ಆರಂಭವಾಗಲಿರುವ ಶಬರಿಮಲೆ ದೇವಸ್ಥಾನದ ದರ್ಶನಕ್ಕಾಗಿ ಇನ್ನು ಒಂದು ತಿಂಗಳು ಬಾಕಿ ಇದೆ. ಕರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭಕ್ತರ ಪ್ರವೇಶದ ಬಗ್ಗೆ ರಾಜ್ಯ ಸರಕಾರವು ತೆಗೆದುಕೊಂಡಿರುವ ಏಕಪಕ್ಷೀಯ ನಿರ್ಧಾರಕ್ಕೆ ವಿವಿಧ ಹಿಂದೂ ಸಂಘಟನೆಗಳು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿವೆ.

‘ಸರ್ಕಾರಿ ಹಣದಿಂದ ಮದರಸಾ ನಡೆಸಬಾರದು ಎಂದಾದರೆ ಕುಂಭಮೇಳವೂ ಬೇಡ !’(ವಂತೆ) – ಕಾಂಗ್ರೆಸ್‌ನ ನಾಯಕ ಉದಿತ್ ರಾಜ್

ಸರಕಾರದ ಹಣವನ್ನು ಯಾವುದೇ ಧಾರ್ಮಿಕ ಕಾರ್ಯಗಳಿಗೆ ಬಳಸಬಾರದು. ಇದು ತಪ್ಪಾಗಿದೆ. ಅಸ್ಸಾಂನ ಸರಕಾರ ಸರಕಾರಿ ಬೊಕ್ಕಸದಿಂದ ಸರಕಾರಿ ಮದರಸಾಗಳನ್ನು ನಡೆಸದಿರಲು ನಿರ್ಧರಿಸಿದೆ. ಅದರಂತೆ ಉತ್ತರಪ್ರದೇಶ ಸರಕಾರವು ಕುಂಭಮೇಳದ ಆಯೋಜನೆಗೆ ೪ ಸಾವಿರದ ೨೦೦ ಕೋಟಿ ರೂಪಾಯಿಗಳನ್ನು ಖರ್ಚು ಮಾಡಬಾರದು, ಎಂದು ಕಾಂಗ್ರೆಸ್‌ನ ಮುಖಂಡ ಹಾಗೂ ಮಾಜಿ ಸಂಸದ ಉದಿತ ರಾಜ್ ಟ್ವೀಟ್ ಮಾಡಿದ್ದಾರೆ.

ಎನ್.ಡಿ.ಟಿ.ವಿ. ಈ ಸುದ್ದಿ ವಾಹಿನಿಯಿಂದ ಸುಳ್ಳು ಸುದ್ದಿ ಪ್ರಕಟಿಸಿದ್ದಕ್ಕಾಗಿ ಅಪರಾಧ ದಾಖಲಿಸಲು ಆದೇಶ

ಗುಜರಾತ್‌ನ ಗಾಂಧಿಧಾಮ್‌ನಲ್ಲಿರುವ ತನಿಷ್ಕ ಆಭರಣ ಮಳಿಗೆಯ ಮೇಲೆ ಲವ್ ಜಿಹಾದ್‌ನ ಜಾಹೀರಾತಿನ ಆಕ್ರೋಶದಿಂದ ದಾಳಿಯಾಗಿರುವ ಬಗ್ಗೆ ಸುಳ್ಳು ಸುದ್ದಿ ಮಾಡಿದ್ದರಿಂದ ಎನ್.ಡಿ.ಟಿ.ವಿ. ಈ ಸುದ್ಧಿವಾಹಿನಿಯ ಮೇಲೆ ಅಪರಾಧವನ್ನು ದಾಖಲಿಸುವಂತೆ ರಾಜ್ಯ ಗೃಹ ಸಚಿವರು ಆದೇಶಿಸಿದ್ದಾರೆ.

ಕೇರಳದಲ್ಲಿ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ದಾವೂದ್ ಇಬ್ರಾಹಿಂನ ಕೈವಾಡದ ಶಂಕೆ ! – ಎನ್.ಐ.ಎ.ಯು ನ್ಯಾಯಾಲಯದಲ್ಲಿ ನೀಡಿದ ಮಾಹಿತಿ

ಕೇರಳದಲ್ಲಿಯ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದಕ ದಾವೂದ್ ಇಬ್ರಾಹಿಂ ಈತನ ಕೈವಾಡವಿರಬಹುದು ಎಂಬ ಸಂದೇಹವಿದೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ಕೊಚ್ಚಿಯ ವಿಶೇಷ ನ್ಯಾಯಾಲಯದಲ್ಲಿ ತಿಳಿಸಿದೆ.

ಮದರಸಾಗಳಲ್ಲಿ ಭಯೋತ್ಪಾದಕರ ಹಣ ಇರುವುದರಿಂದ ಎಲ್ಲ ಮದರಸಾಗಳನ್ನು ಮುಚ್ಚಬೇಕು !

ಮದರಸಾಗಳಲ್ಲಿ ಭಯೋತ್ಪಾದಕರ ಹಣವಿರುತ್ತದೆ. ಅದರಲ್ಲಿ ಭಯೋತ್ಪಾದಕರನ್ನು ಹುಟ್ಟುಹಾಕುವ ಕಟ್ಟರವಾದಿ ದೇಶಗಳ ಹಣವಿದೆ. ಆದ್ದರಿಂದ ದೇಶದ ಎಲ್ಲ ಮದರಸಾಗಳನ್ನು ಮುಚ್ಚಬೇಕು ಹಾಗೂ ಅಲ್ಲಿ ಶಾಲಾ ಶಿಕ್ಷಣವನ್ನು ಪ್ರಾರಂಭಿಸಬೇಕು, ಎಂದು ಶಿಯಾ ವಕ್ಫ್ ಬೋರ್ಡ್‌ನ ಅಧ್ಯಕ್ಷ ವಾಸಿಮ್ ರಿಜ್ವಿ ಒತ್ತಾಯಿಸಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರಿಗೆ ‘ಉಗ್ರಗಾಮಿ ಹಿಂದುತ್ವದ ಪ್ರೀತಿಯ ಸಂಕೇತ’ ಎಂದು ಕರೆದು ಅವರ ಘೋರ ಅವಮಾನ

‘ದ ವಾಯರ್’ ಈ ಆನ್‌ಲೈನ್ ನ್ಯೂಸ್ ಪೋರ್ಟಲ್‌ನಲ್ಲಿ ಅಕ್ಟೋಬರ್ 8 ರಂದು By Attacking the Mughals, Adityanath Is Erasing the History of His Own Nath Samprady’ ಈ ಶೀರ್ಷಿಕೆಯಲ್ಲಿ ಪ್ರಕಟಿಸಲಾದ ಹಾಗೂ ಕ್ರಿಸ್ಟೀನ್ ಮಾರೆವಾ ಕಾರವೊಸ್ಕೀ ಈ ಮಹಿಳಾ ಪತ್ರಕರ್ತೆಯು ಬರೆದ ಒಂದು ಲೇಖನದಲ್ಲಿ ಛತ್ರಪತಿ ಶಿವಾಜಿ ಮಾಹಾರಾಜರ ಘೋರ ಅವಮಾನ ಮಾಡಿದ್ದಾರೆ.

‘ದೆಹಲಿಯವರು ಕಸಿದುಕೊಂಡದ್ದನ್ನು, ಮರಳಿ ಪಡೆಯುವೆವು !’

‘ದೆಹಲಿಯವರು ಕಸಿದುಕೊಂಡದ್ದನ್ನು, ಮರಳಿ ಪಡೆಯುವೆವು’ ಎಂಬ ಮಾತುಗಳಿಂದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಮೋದಿ ಸರಕಾರಕ್ಕೆ ಎಚ್ಚರಿಕೆ ಹಾಗೂ ಮತಾಂಧರಿಗೆ ಪ್ರಚೋದನೆ ನೀಡಿದ್ದಾರೆ.

ಹಬ್ಬಗಳ ಕಾಲಾವಧಿಯಲ್ಲಿ ಜಮ್ಮು – ಕಾಶ್ಮೀರದ ಹಿಂದೂ ಬಹುಸಂಖ್ಯಾತ ಪ್ರದೇಶಗಳಲ್ಲಿ ದಾಳಿ ನಡೆಸಲು ಪಾಕಿಸ್ತಾನದ ಸಂಚು ! – ಗುಪ್ತಚರ ಇಲಾಖೆ

ಹಬ್ಬಗಳ ಕಾಲಾವಧಿಯಲ್ಲಿ ಜಮ್ಮು – ಕಾಶ್ಮೀರದ ಹಿಂದೂ ಬಹುಸಂಖ್ಯಾತ ಪ್ರದೇಶಗಳಲ್ಲಿ ದಾಳಿ ನಡೆಸಲು ಪಾಕಿಸ್ತಾನವು ಸಂಚು ರೂಪಿಸಿದೆ ಎಂದು ‘ಟೈಮ್ಸ್ ನೌ’ ಗುಪ್ತಚರ ಇಲಾಖೆಯು ಮಾಹಿತಿ ನೀಡಿದೆ. ಈ ಮಾಹಿತಿಯ ಪ್ರಕಾರ, ಜಮ್ಮು – ಕಾಶ್ಮೀರದ ಹಿಂದೂ ಬಹುಸಂಖ್ಯಾತ ಪ್ರದೇಶಗಳಲ್ಲಿ ದಾಳಿ ನಡೆಸಲು ಅಲ್-ಬದ್ರ ಹಾಗೂ ಜೈಶ್-ಎ-ಮೊಹಮ್ಮದ್ ಸಂಘಟನೆಯ ಭಯೋತ್ಪಾದಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.

ಸರಕಾರಿ ಹಣದಿಂದ ‘ಕುರಾನ್’ನ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಎಲ್ಲಾ ಸರಕಾರಿ ಮದರಸಾಗಳನ್ನು ಮುಚ್ಚಲಾಗುವುದು ! – ಅಸ್ಸಾಂನ ಭಾಜಪ ಸರಕಾರದ ನಿರ್ಧಾರ

ಅಸ್ಸಾಂನ ಭಾಜಪ ಸರಕಾರವು ನವೆಂಬರ್‌ನಿಂದ ರಾಜ್ಯದ ಎಲ್ಲಾ ಸರಕಾರಿ ಮದರಸಾಗಳನ್ನು ಮುಚ್ಚಲಿದೆ ಎಂದು ಅಸ್ಸಾಂ ಆರೋಗ್ಯ ಮತ್ತು ಶಿಕ್ಷಣ ಸಚಿವ ಹಿಮಂತ್ ಬಿಸ್ವ ಸರಮಾ ಇವರು ಮಾಹಿತಿ ನೀಡಿದ್ದಾರೆ. ‘ಸರಕಾರಿ ಹಣದಿಂದ ‘ಕುರಾನ್’ನ ಶಿಕ್ಷಣ ನೀಡಲು ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯವಾಗಿದೆ.

ಬಾಂಗ್ಲಾದೇಶದಲ್ಲಿ ಅತ್ಯಾಚಾರ ಮಾಡುವವರಿಗೆ ಗಲ್ಲು ಶಿಕ್ಷೆ ವಿಧಿಸಲಾಗುವುದು

ಅತ್ಯಾಚಾರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸುವ ಬದಲು ಮರಣದಂಡನೆ ನೀಡಲು ಬಾಂಗ್ಲಾದೇಶ ಸರಕಾರವು ತನ್ನ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಸಧ್ಯ ಸಂಸತ್ತಿನ ಅಧಿವೇಶನ ನಡೆಯುತ್ತಿಲ್ಲದ ಕಾರಣ ಸರಕಾರದಿಂದ ಸುಗ್ರೀವಾಜ್ಞೆ ಹೊರಡಿಸಲಾಗುವುದು.