|
ನವ ದೆಹಲಿ – ಹಬ್ಬಗಳ ಕಾಲಾವಧಿಯಲ್ಲಿ ಜಮ್ಮು – ಕಾಶ್ಮೀರದ ಹಿಂದೂ ಬಹುಸಂಖ್ಯಾತ ಪ್ರದೇಶಗಳಲ್ಲಿ ದಾಳಿ ನಡೆಸಲು ಪಾಕಿಸ್ತಾನವು ಸಂಚು ರೂಪಿಸಿದೆ ಎಂದು ‘ಟೈಮ್ಸ್ ನೌ’ ಗುಪ್ತಚರ ಇಲಾಖೆಯು ಮಾಹಿತಿ ನೀಡಿದೆ.
ಈ ಮಾಹಿತಿಯ ಪ್ರಕಾರ, ಜಮ್ಮು – ಕಾಶ್ಮೀರದ ಹಿಂದೂ ಬಹುಸಂಖ್ಯಾತ ಪ್ರದೇಶಗಳಲ್ಲಿ ದಾಳಿ ನಡೆಸಲು ಅಲ್-ಬದ್ರ ಹಾಗೂ ಜೈಶ್-ಎ-ಮೊಹಮ್ಮದ್ ಸಂಘಟನೆಯ ಭಯೋತ್ಪಾದಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಈ ವಾರದಲ್ಲಿ ಭಾರತೀಯ ಸೈನ್ಯವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಜಮ್ಮು – ಕಾಶ್ಮೀರಕ್ಕೆ ರವಾನಿಸಲಾಗುತ್ತಿದ್ದ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯ ಪ್ರಯತ್ನವನ್ನು ೨ ಸಲ ವಿಫಲಗೊಳಿಸಿದೆ.