ಎನ್.ಡಿ.ಟಿ.ವಿ. ಈ ಸುದ್ದಿ ವಾಹಿನಿಯಿಂದ ಸುಳ್ಳು ಸುದ್ದಿ ಪ್ರಕಟಿಸಿದ್ದಕ್ಕಾಗಿ ಅಪರಾಧ ದಾಖಲಿಸಲು ಆದೇಶ

ಇಂತಹ ವಾಹಿನಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !

ಕರ್ಣಾವತಿ (ಗುಜರಾತ್) – ಗುಜರಾತ್‌ನ ಗಾಂಧಿಧಾಮ್‌ನಲ್ಲಿರುವ ತನಿಷ್ಕ ಆಭರಣ ಮಳಿಗೆಯ ಮೇಲೆ ಲವ್ ಜಿಹಾದ್‌ನ ಜಾಹೀರಾತಿನ ಆಕ್ರೋಶದಿಂದ ದಾಳಿಯಾಗಿರುವ ಬಗ್ಗೆ ಸುಳ್ಳು ಸುದ್ದಿ ಮಾಡಿದ್ದರಿಂದ ಎನ್.ಡಿ.ಟಿ.ವಿ. ಈ ಸುದ್ಧಿವಾಹಿನಿಯ ಮೇಲೆ ಅಪರಾಧವನ್ನು ದಾಖಲಿಸುವಂತೆ ರಾಜ್ಯ ಗೃಹ ಸಚಿವರು ಆದೇಶಿಸಿದ್ದಾರೆ. ಈ ವಾರ್ತೆಯಿಂದ ಗುಜರಾತ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಭಂಗ ತರುವ ಮೂಲಕ ಹಿಂಸಾಚಾರವನ್ನು ಪ್ರಚೋದಿಸುವ ಉದ್ದೇಶದಿಂದ ಈ ಸುದ್ದಿ ನೀಡಲಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ. ನಾನು ಸಂಬಂಧಪಟ್ಟವರ ವಿರುದ್ಧ ಅಪರಾಧವನ್ನು ದಾಖಲಿಸಿ ಕಠಿಣ ಕ್ರಮ ಜರುಗಿಸಲು ಆದೇಶ ನೀಡಿದ್ದೇನೆ ಎಂದು ಹೇಳಿದ್ದಾರೆ.