‘ಸರ್ಕಾರಿ ಹಣದಿಂದ ಮದರಸಾ ನಡೆಸಬಾರದು ಎಂದಾದರೆ ಕುಂಭಮೇಳವೂ ಬೇಡ !’(ವಂತೆ) – ಕಾಂಗ್ರೆಸ್‌ನ ನಾಯಕ ಉದಿತ್ ರಾಜ್

  • ಇಷ್ಟು ವರ್ಷಗಳಿಂದ ಕಾಂಗ್ರೆಸ್‌ನಿಂದ ಹಜ್ ಯಾತ್ರೆಗೆ ಸಾವಿರಾರು ಕೋಟಿ ರೂಪಾಯಿಗಳನ್ನು ನೀಡಿದೆ, ಈ ಬಗ್ಗೆ ಉದಿತ ರಾಜ ಏಕೆ ಬಾಯಿ ಬಿಡುವುದಿಲ್ಲ ?
  • ಮದರಸಾಗಳನ್ನು ಕುಂಭಮೇಳದೊಂದಿಗೆ ಹೋಲಿಸುವ ಮೂಲಕ ಉದಿತ ರಾಜ ತಮ್ಮ ಹಿಂದೂದ್ರೋಹಿ ಮಾನಸಿಕತೆಯನ್ನು ತೋರಿಸಿದ್ದಾರೆ !

ನವ ದೆಹಲಿ – ಸರಕಾರದ ಹಣವನ್ನು ಯಾವುದೇ ಧಾರ್ಮಿಕ ಕಾರ್ಯಗಳಿಗೆ ಬಳಸಬಾರದು. ಇದು ತಪ್ಪಾಗಿದೆ. ಅಸ್ಸಾಂನ ಸರಕಾರ ಸರಕಾರಿ ಬೊಕ್ಕಸದಿಂದ ಸರಕಾರಿ ಮದರಸಾಗಳನ್ನು ನಡೆಸದಿರಲು ನಿರ್ಧರಿಸಿದೆ. ಅದರಂತೆ ಉತ್ತರಪ್ರದೇಶ ಸರಕಾರವು ಕುಂಭಮೇಳದ ಆಯೋಜನೆಗೆ ೪ ಸಾವಿರದ ೨೦೦ ಕೋಟಿ ರೂಪಾಯಿಗಳನ್ನು ಖರ್ಚು ಮಾಡಬಾರದು, ಎಂದು ಕಾಂಗ್ರೆಸ್‌ನ ಮುಖಂಡ ಹಾಗೂ ಮಾಜಿ ಸಂಸದ ಉದಿತ ರಾಜ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ವಿರೋಧ ವ್ಯಕ್ತವಾಗಲು ಆರಂಭವಾದಾಗ ಅವರು ಅದನ್ನು ಅಳಿಸಿದರು. ನಂತರ ಅವರು ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡುವಾಗ, ರಾಜ್ಯಕ್ಕೆ ಯಾವುದೇ ಧರ್ಮವಿರುವುದಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಯಾರೊಂದಿಗೂ ಭೇದಭಾವ ಮಾಡಬಾರದು. ಈ ಸನ್ನಿವೇಶದಲ್ಲಿ ನಾನು ಕುಂಭಮೇಳದ ವೆಚ್ಚದ ಉದಾಹರಣೆಯನ್ನು ನೀಡಿದ್ದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಸಚಿವ ಬ್ರಿಜೇಶ್ ಪಾಠಕ್ ಇವರು, ಕುಂಭಮೇಳ ವಿಶ್ವ ಮಟ್ಟದ ಆಯೋಜನೆಯಾಗಿದೆ. ಅದು ಕೇವಲ ಉತ್ತರ ಪ್ರದೇಶಕ್ಕೆ ಸೀಮಿತವಾಗಿಲ್ಲ. ಇದರಲ್ಲಿ ಜಗತ್ತಿನಾದ್ಯಂತದ ಲಕ್ಷಾಂತರ ಜನರು ಭಾಗವಹಿಸುತ್ತಾರೆ. ಆದ್ದರಿಂದ ಅಂತಹ ಯೋಜನೆಗಳನ್ನು ಟೀಕಿಸಬಾರದು ಎಂದು ಹೇಳಿದರು.