ಸರಕಾರಿ ಹಣದಿಂದ ‘ಕುರಾನ್’ನ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಎಲ್ಲಾ ಸರಕಾರಿ ಮದರಸಾಗಳನ್ನು ಮುಚ್ಚಲಾಗುವುದು ! – ಅಸ್ಸಾಂನ ಭಾಜಪ ಸರಕಾರದ ನಿರ್ಧಾರ

ಕೇಂದ್ರದಲ್ಲಿ ಹಾಗೂ ದೇಶದ ಅನೇಕ ರಾಜ್ಯಗಳಲ್ಲಿ ಭಾಜಪದ ಸರಕಾರವಿದ್ದು ಅವರ ಮೇಲ್ವಿಚಾರಣೆಯಲ್ಲಿ ಸರಕಾರಿ ಮದರಸಾಗಳು ನಡೆಯುತ್ತಿವೆ, ಅದೇರೀತಿ ನೂರಾರು ಮದರಸಾಗಳಿಗೆ ಅನುದಾನ ನೀಡಲಾಗುತ್ತದೆ, ಅಲ್ಲಿಯೂ ಭಾಜಪವು ಅದೇ ರೀತಿಯ ಕೃತಿ ಮಾಡಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಗುವಾಹಟಿ (ಅಸ್ಸಾಂ) – ಅಸ್ಸಾಂನ ಭಾಜಪ ಸರಕಾರವು ನವೆಂಬರ್‌ನಿಂದ ರಾಜ್ಯದ ಎಲ್ಲಾ ಸರಕಾರಿ ಮದರಸಾಗಳನ್ನು ಮುಚ್ಚಲಿದೆ ಎಂದು ಅಸ್ಸಾಂ ಆರೋಗ್ಯ ಮತ್ತು ಶಿಕ್ಷಣ ಸಚಿವ ಹಿಮಂತ್ ಬಿಸ್ವ ಸರಮಾ ಇವರು ಮಾಹಿತಿ ನೀಡಿದ್ದಾರೆ. ‘ಸರಕಾರಿ ಹಣದಿಂದ ‘ಕುರಾನ್’ನ ಶಿಕ್ಷಣ ನೀಡಲು ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯವಾಗಿದೆ. ತಾವು ಕುರಾನ್ ಅನ್ನು ಕಲಿಸುವುದಿದ್ದರೆ, ಬೈಬಲ್ ಹಾಗೂ ಗೀತೆಯನ್ನು ಸಹ ಕಲಿಸಬೇಕು. ನಮಗೆ ಸಮಾನತೆಯನ್ನು ತರಲಿಕ್ಕಿದೆ, ಹಾಗಾಗಿ ಈ ಅಭ್ಯಾಸವನ್ನು ನಿಲ್ಲಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ’, ಎಂದು ಸರಮಾ ಇವರು ಸ್ಪಷ್ಟ ಪಡಿಸಿದರು.

ಸರಮಾ ತಮ್ಮ ಮಾತನ್ನು ಮುಂದುವರೆಸುತ್ತಾ, ಎಲ್ಲ ಸರಕಾರಿ ಮದರಸಾಗಳನ್ನು ಸಾಮಾನ್ಯ ಶಾಲೆಗಳಾಗಿ ಪರಿವರ್ತಿಸಲಾಗುವುದು. ಕೆಲವು ಪ್ರಕರಣಗಳಲ್ಲಿ, ಶಿಕ್ಷಕರನ್ನು ಸರಕಾರೀ ಶಾಲೆಗಳಿಗೆ ವರ್ಗಾಯಿಸಲಾಗುವುದು ಎಂದು ಹೇಳಿದರು.